Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

Ayush treatment under health insurance

The government has been pushing for alternative treatments and so have regulatory initiatives such as the Insurance Regulatory and Development Authority of India (Irdai) mandating that AYUSH (Aayurveda, Yoga and Naturopathy, Unani, Siddha and Homeopathy) treatments be covered by health insurance products. It told all insurers to mandatorily offer, from 1 April 2020, ArogyaSanjeevani, a […]

ಭಾರತದಲ್ಲಿ ಲಸಿಕೆ: ಫೈಜರ್ ಮನವಿ

ಫೈಜರ್ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಕೋರಿದೆ. ಲಸಿಕೆಯನ್ನು ಬಳಸಲು ಬ್ರಿಟನ್ ಮತ್ತು ಬಹ್ರೇನ್ ಸರ್ಕಾರಗಳು ಅನುಮತಿ ನೀಡಿವೆ. ಲಸಿಕೆ ಬಳಕೆಗೆ ಬ್ರಿಟನ್ ಅತ್ಯಂತ ತರಾತುರಿಯಲ್ಲಿ ಅನುಮತಿ ನೀಡಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಫೈಜರ್ ಕಂಪನಿಯು ಭಾರತದ ಪ್ರಧಾನ ಔಷಧ ನಿಯಂತ್ರಕರಿಗೆ ಅನುಮತಿ ಕೋರಿ ಡಿ.4ರಂದು ಪತ್ರ ಬರೆದಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಭಾರತ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತೇವೆ. ಸರ್ಕಾರದ ಗುತ್ತಿಗೆಯ ಮೂಲಕ […]

ಚಿತ್ರಸಹಿತ ಎಚ್ಚರಿಕೆಯ ಸಂದೇಶ

ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಕುರಿತು ಹೊಸದಾಗಿ ರೂಪಿಸಿರುವ ಎಚ್ಚರಿಕೆಯ ಸಂದೇಶವನ್ನು ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತ ಪ್ರಕಟಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಎಚ್ಚರಿಕೆ ಸಂದೇಶ ತಂಬಾಕು ಸೇವನೆಯ ಗಂಭೀರ ಮತ್ತು ವ್ಯತಿರಿಕ್ತ ಆರೋಗ್ಯದ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಲಿದೆ. ಅದರಲ್ಲೂ ಮುಖ್ಯವಾಗಿ ಯುವಜನ, ಮಕ್ಕಳು ಮತ್ತು ಅನಕ್ಷರಸ್ಥರ ಜಾಗೃತಿಗೆ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. Courtesyg: Google (photo)

ಎಲ್ಲರಿಗೂ ಲಸಿಕೆ ಬೇಡ: ಕೇಂದ್ರ

ಎಲ್ಲರಿಗೂ ಕೋವಿಡ್ ಲಸಿಕೆ ಹಾಕಲೇಬೇಕು ಎಂದು ಹೇಳಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ. ನಿರ್ಣಾಯಕವಾದ ಒಂದಷ್ಟು ಜನರಿಗೆ ಲಸಿಕೆ ಹಾಕುವ ಮೂಲಕ ವೈರಾಣು ಹರಡುವಿಕೆಯ ಸರಪಣಿ ತಡೆಬಹುದು. ಎಲ್ಲರಿಗೂ ಲಸಿಕೆ ಹಾಕಲೇಬೇಕು ಎಂದು ಯಾವತ್ತೂ ಹೇಳಿಲ್ಲ. ಸೀರಂ ಸಂಸ್ಥೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ ವ್ಯಕ್ತಿಯೊಬ್ಬರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿರುವುದರಿAದ ಜನರಿಗೆ ಲಸಿಕೆ ನೀಡುವಿಕೆ ವಿಳಂಬಗೊಳ್ಳವುದಿಲ್ಲ ಎಂದು ತಿಳಿಸಿದೆ. ಲಸಿಕೆ ಸುರಕ್ಷಿತ: ಆಸ್ಟಾç ಜೆನೆಕಾದ ಉತ್ಪನ್ನ ಕೋವಿಶೀಲ್ಡ್ನ್ನು ಕ್ಲಿನಿಕಲ್ ಟ್ರಯಲ್ ವೇಳೆ ಪಡೆದಿದ್ದ ಚೆನ್ನೈನ ಸ್ವಯಂಸೇವಕನ ಆರೋಗ್ಯದಲ್ಲಿ ಏರುಪೇರಾಗಿರುವ ವಿವಾದ ತೀವ್ರ […]

ಕರ್ನಾಟಕದಲ್ಲಿ ಕೋವಿಡ್ ಇಳಿಕೆ

ದೇಶದಲ್ಲಿ ಕೋವಿಡ್ ಪ್ರಕರಣಗಳ ಇಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯಸಚಿವಾಲಯತಿಳಿಸಿದೆ. ಕಳೆದ 30 ದಿನಗಳಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾಗಿವೆ. ಅ. ೨೯ರಂದು ಇದ್ದ 68,180 ಸಕ್ರಿಯ ಪ್ರಕರಣಗಳು ನ.೨೯ಕ್ಕೆ 24,770ಕ್ಕೆ ಕುಸಿದಿದೆ. ಪರೀಕ್ಷೆ ವಿಧಾನದಲ್ಲಿ ಸುಧಾರಣೆ ಮಾಡಬೇಕಿದೆ.ರೋಗ ಲಕ್ಷಣ ಹೊಂದಿರುವವರನ್ನು ಪ್ರತ್ಯೇಕವಾಗಿ ಇರಿಸುತ್ತಿರುವುದರಿಂದ, ಸೋಂಕು ಹರಡುವಿಕೆ  ತಡೆಯಲು ಸಾಧ್ಯವಾಗಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್‌ನ ಹಿರಿಯ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು […]

ಸ್ಪುಟ್ನಿಕ್ ಲಸಿಕೆ: ಶೇ.95 ಪರಿಣಾಮಕಾರಿ

ಸ್ಪುಟ್ನಿಕ್-ವಿ ಲಸಿಕೆ ಕೊರೊನಾ ವೈರಸ್ ನಿಯಂತ್ರಣದಲ್ಲಿ ಶೇ.95ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಮಾಸ್ಕೋದಲ್ಲಿ ನಡೆದ ವರ್ಚ್ಯುವಲ್ ಸಭೆಯಲ್ಲಿ ಮಾತನಾಡಿದ ರಷ್ಯಾ ಡೈರೆಕ್ಟ್ ಇನ್‌ವೆಸ್ಟ್ಮೆಂಟ್ ಫಂಡ್(ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರಿವ್, ಸ್ಪುಟ್ನಿಕ್ ವಿ ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ದರದ ಲಸಿಕೆ. ಲಸಿಕೆಯ ಪುಡಿಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಬಹುದು. ಇದರಿಂದ ಶೇಖರಣೆ, ಸಾಗಣೆ ವೆಚ್ಚ ಕಡಿಮೆ ಆಗಲಿದೆ ಎಂದಿದ್ದಾರೆ. ಸ್ಪುಟ್ನಿಕ್‌ನ ಒಂದು ಡೋಸ್ ದರ ಸುಮಾರು 740 ರೂ. ಮೊದಲ ಡೋಸ್ […]

AstraZeneca Vaccine Results a Shot in the Arm for India

AstraZeneca and   Oxford University on Monday said their Covid-19 vaccine was up to 90% effective, brightening prospects of the much-awaited shot being available in India in the next few months.  Serum Institute, AstraZeneca’s strategic manufacturing partner for the jab in India, said efficacy data from the Indian trials will be released in a month and […]

ಇ– ಸಂಜೀವಿನಿ ಮೂಲಕ 8 ಲಕ್ಷ ಜನರಿಗೆ ಆರೋಗ್ಯ ಸೇವೆ

ಆರೋಗ್ಯ ಸಚಿವಾಲಯ ಆರಂಭಿಸಿರುವ ಇ–ಸಂಜೀವಿನಿ ಯೋಜನೆ ಮೂಲಕ ಒಟ್ಟು ಎಂಟು ಲಕ್ಷ ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ತಮಿಳುನಾಡು ರಾಜ್ಯವೊಂದರಲ್ಲೇ 2,59,904 ಮಂದಿ ಇ–ಸಂಜೀವಿನಿ ಒಪಿಡಿ ಆ್ಯಪ್ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ-2,19,175, ಎರಡನೇ ಸ್ಥಾನದಲ್ಲಿದೆ. ಕೇರಳ-58,000, ಹಿಮಾಚಲ ಪ್ರದೇಶ-46,647, ಮಧ್ಯ ಪ್ರದೇಶ-43,045, ಗುಜರಾತ್ -41,765, ಆಂಧ್ರ ಪ್ರದೇಶ -35,217, ಉತ್ತರಾಖಂಡ-26,819, ಕರ್ನಾಟಕ -23,008, ಮತ್ತು ಮಹಾರಾಷ್ಟ್ರದ -9,741 ಮಂದಿ ಈ ಸೇವೆ […]

ಕೋವಿಡ್ ಲಸಿಕೆ: ಹಿರಿಯರಿಗೆ ಆದ್ಯತೆ

ಜುಲೈ-ಆಗಸ್ಟ್ ೨೦೨೧ರೊಳಗೆ ಅಂದಾಜು ೫೦ ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಆದ್ಯತೆ ಮೇರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು.  ಎಫ್‌ಸಿಸಿಐ, ಎಫ್‌ಎಎಲ್‌ಒ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿ, ಮೊದಲಿಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ ವರ್ಷ ದಾಟಿದ ಹಿರಿಯ ನಾಗರಿಕರಿಗೆ, ಬಳಿಕ ೫೦ ರಿಂದ ೬೫ ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ. ಆನಂತರ ೫೦ಕ್ಕಿಂತ ಕಡಿಮೆ ವಯಸ್ಸಿನವರಿಗೆ ಆರೋಗ್ಯ ತಪಾಸಣೆ ಮಾಡಿ ಲಸಿಕೆ […]

Back To Top