Category: ಕೃಷಿ ಗ್ರಾಮಾಭಿವೃದ್ಧಿ

ಬಮೂಲ್ ನಿಂದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಚೆಕ್ ವಿತರಣೆ

ದೊಡ್ಡಮಳೂರಿನ ಶ್ರೀರಾಮಮಂದಿರ ದೇವಸ್ಥಾನದ ಆವರಣದಲ್ಲಿ ಬಮೂಲ್ ನಿರ್ದೇಶಕರಾದ ಎಚ್.ಸಿ. ಜಯಮುತ್ತು ರವರ ನೇತೃತ್ವದಲ್ಲಿ ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ನಿವೃತ್ತಿ ಹೊಂದಿದ ಮುಖ್ಯ ಕಾರ್ಯನಿರ್ವಾಹಕರಿಗೆ ಸನ್ಮಾನ ಮತ್ತು ಅಕಾಲಿಕವಾಗಿ ಮರಣ ಹೊಂದಿದ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರದ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ನೌಕರರ  ಕ್ಷೇಮಭಿವೃದ್ಧಿ  ಸಂಘದ ಅಧ್ಯಕ್ಷರಾದ ಪುಟ್ಟೇಗೌಡ ರವರು. ಪದಾಧಿಕಾರಿಗಳಾದ ಪುಟ್ಟರಾಜು ಹೊಂಗನೂರು. ದೇವರಾಜು ತಗಚಗೆರೆ. ಕೆ.ಟಿ. ಲಕ್ಷ್ಮಮ್ಮ. ಬಿಳಿಗೌಡ. ಮಾಧು […]

ಮಲೆನಾಡಿನ ಕಾಫಿ ಬೆಳೆಗಾರ ಸೋತದ್ದೆಲ್ಲಿ ಮತ್ತು ಬೆಲೆಗಳ ಮೇಲೆ ಸರ್ಕಾರಿ ನಿಯಂತ್ರಣ ಯಾಕೆ ಬೇಕು?

ಒಂದು ಕಾಲಕ್ಕೆ ಅತ್ಯಂತ ಪ್ರತಿಷ್ಟಿತ ಹಾಗೂ ಸಧೃಡ ಕೃಷಿಯೆಂದು ಹೆಮ್ಮೆ ಪಡುತ್ತಿದ್ದ  ಕಾಫಿ ಬೆಳೆಗಾರರೆಂದರೆ ಐಷಾರಾಮೀ ದೊರೆಗಳೆಂದು ಬೇರೆಯವರು ಹೇಳುತ್ತಿದ್ದ  ಮಲೆನಾಡಿನ ಕಾಫಿ ಬೆಳೆ ಸೋತದ್ದೆಲ್ಲಿ. ಸುಮಾರಾಗಿ ಎಂಬತ್ತರ ದಶಕದವರೆಗೂ ಕಾಫಿಯ ಸ್ಥಿತಿ ಹಾಗೇ ಇತ್ತು. ಆಂತರಿಕ ಬಳಕೆ ಬಹಳ ಕಡಿಮೆ ಇದ್ದು ಅದು ವರ್ಷಕ್ಕೆ ಐವತ್ತು ಸಾವಿರ ಟನ್ ಮೀರುತ್ತಿರಲಿಲ್ಲ. ಅದರಲ್ಲೂ ತಮಿಳುನಾಡೇ ಮುಖ್ಯ ಗ್ರಾಹಕ ರಾಜ್ಯವಾಗಿತ್ತು. ಉಳಿದ ಎಲ್ಲಾ ಕಾಫಿ ರಫ್ತಾಗುತ್ತಿತ್ತು. ಅಂದಿನ ಕಾಲಕ್ಕೆ ದೊಡ್ಡ ಮೊತ್ತವೆನ್ನಬಹುದಾದ ನಾಲ್ಕು ನೂರು ಕೋಟಿ ರುಪಾಯಿಯಷ್ಟು ವಿದೇಶೀ […]

ಗ್ರಾಮಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಗ್ರಾಮಪಂಚಾಯ್ತಿಗಳ  ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಗೊಂಡು  ಗ್ರಾಮ ಪಂಚಾಯ್ತಿಗಳಲ್ಲಿ  ಹಲವಾರು ರೀತಿಯ ವಿಧ್ಯಮಾನಗಳು ನಡೆದು ಅಂತಿಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿವೆ.

ಸಹಕಾರ ಶಿಕ್ಷಣ ನಿಧಿಗೆ 4 ಲಕ್ಷ ರೂ ಚೆಕ್ ವಿತರಣೆ

ಚನ್ನಪಟ್ಟಣ ಶಿಬಿರ ಕಚೇರಿಯಲ್ಲಿ ಬಮುಲ್ ನಿರ್ದೇಶಕರಾದ ಹೆಚ್.ಸಿ. ಜಯಮುತ್ತು ರವರು ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸಹಕಾರ ಶಿಕ್ಷಣ ನಿಧಿಗೆ 4 ಲಕ್ಷ ರೂಪಾಯಿಗಳ ಚೆಕ್ಕನ್ನು ರಾಮನಗರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ  ಅಧ್ಯಕ್ಷರಾದ ಸಿಂ.ಲಿಂ. ನಾಗರಾಜು ರವರಿಗೆ ನೀಡಿದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕುಕ್ಕೂರುದೊಡ್ಡಿ ಜಯರಾಮು ರವರು ಉಪ ವ್ಯವಸ್ಥಾಪಕರಾದ ಡಾ. ಕೆಂಪರಾಜು ರವರು. ಹಾಗೂ ಮುಖಂಡರು ಉಪಸ್ಥಿತರಿದ್ದರು.

ಅನರ್ಹರಿಗೂ ಕಿಸಾನ್ ಸಮ್ಮಾನ್!

ಸರ್ಕಾರದ ಹಣ ಸೋರಿಕೆಯಾಗುವುದು, ಅಪಾತ್ರರಿಗೆ ಸಂದಾಯ ಆಗುವುದು ಆಶ್ರ‍್ಯಪಡಬೇಕಾದ ವಿಷಯವೇನಲ್ಲ. ಸೋರಿಕೆಯ ಇನ್ನೊಂದು ಪ್ರಕರಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(ಪಿಎಂಕೆವೈ)ಯಡಿ 20.48 ಲಕ್ಷ ಅನರ್ಹರಿಗೆ 1,364.12 ಕೋಟಿ ರೂ. ಪ್ರೋತ್ಸಾಹಧನ ಪಾವತಿ ಮಾಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಪ್ರೋತ್ಸಾಹಧನ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿದೆ. ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌  ವೆಂಕಟೇಶ ನಾಯಕ್ ಎಂಬುವರು ಯೋಜನೆ ಕುರಿತು ಮಾಹಿತಿ ಕೋರಿ, ಆರ್‌ಟಿಐ […]

ತೋಟಗಾರಿಕೆ ಮೇಳ ಫೆ.8 ರಿಂದ 

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆವರಣದಲ್ಲಿ ಫೆ.8ರಿಂದ 12ರವರೆಗೆ  ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯಲಿದ್ದು, ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ ಇರಲಿದೆ ಎಂದು ಐಐಎಚ್‌ಆರ್ ನಿರ್ದೇಶಕ ಎಂ.ಆರ್.ದಿನೇಶ್ ತಿಳಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ಹಾಗೂ ಆನ್‌ಲೈನ್ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 30 ಸಾವಿರ ರೈತರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ.  ಪ್ರತಿದಿನ ಆರು ಸಾವಿರ ನೋಂದಾಯಿತ ರೈತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಎರಡು ಅವಧಿಗಳಲ್ಲಿ ಮೇಳ ವೀಕ್ಷಿಸಬಹುದು. […]

ಹೊಸ ಅಡಕೆಗೆ ದಾಖಲೆ ಬೆಲೆ

ಹೊಸ ಅಡಕೆಗೆ ದಾಖಲೆ ಬೆಲೆ ಲಭ್ಯವಾಗಿದ್ದು, ಕ್ವಿಂಟಾಲ್‌ಗೆ 35,200 ರೂ.ಸಿಕ್ಕಿದೆ. ಆದರೆ, ಹಳೆ ಅಡಕೆ ಬೆಲೆಯಲ್ಲಿ ಹೆಚ್ಚೇನೂ ಏರುಪೇರು ಕಾಣದೆ ಸ್ಥಿರವಾಗಿದೆ.  ಈ ವರ್ಷದ ಹಂಗಾಮಿನ ಹೊಸ ಅಡಕೆಗೆ ಲಭಿಸಿರುವ ಗರಿಷ್ಠ ಧಾರಣೆ ಇದಾಗಿದ್ದು, ಕಳೆದ ಐದು ವರ್ಷಗಳಲ್ಲಿ ಸಿಕ್ಕ ಗರಿಷ್ಠ ಬೆಲೆ ಇದು. ಕಳೆದ ವಾರದಿಂದ ಹಳೆಯ ಅಡಕೆ, ಡಬಲ್ ಚೋಲ್ ಅಡಕೆ ಧಾರಣೆಯಲ್ಲೂ ಗಣನೀಯ ಏರಿಕೆಯಾಗಿದೆ. ಹೊಸ ಅಡಕೆಗೆ ಪುತ್ತೂರು, ಬೆಳ್ತಂಗಡಿ ಮತ್ತು ಕಾರ್ಕಳ ಎಪಿಎಂಸಿಯುಲ್ಲಿ 35,000 ರೂ., ಸುಳ್ಯ, ಬಂಟ್ವಾಳ ಮಾರುಕಟ್ಟೆಯಲ್ಲಿ 34,500 […]

ಕೃಷಿ ಸಂಜೀವಿನಿ ಲೋಕಾರ್ಪಣೆ

ರೈತರ ಹೊಲದಲ್ಲೇ ಮಣ್ಣು, ನೀರು, ರೋಗ ಪರೀಕ್ಷೆ ಮಾಡುವ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ “ಕೃಷಿ ಸಂಜೀವಿನಿ’ಯನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದ್ದಾರೆ. ಇವುಗಳ ಕಾರ್ಯ ನಿರ್ವಹಣೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರೈತರ ತಾಕುಗಳಲ್ಲೇ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆಗಳ ಬಾಧೆ, ಮಣ್ಣಿನ ಪೋಷಕಾಂಶ ಕೊರತೆ ಮತ್ತು ಸಮರ್ಪಕ ನಿರ್ವಹಣೆ ಕುರಿತು ಮಾರ್ಗೊಪಾಯಗಳನ್ನು ಒದಗಿಸುವುದು ಕೃಷಿ ಸಂಜೀವಿನಿಯ ಉದ್ದೇಶ. 155313 ಶುಲ್ಕರಹಿತ ಸಹಾಯವಾಣಿಗೆ ಕರೆಯು ಜಿಲ್ಲೆಯ […]

ಹವಾಮಾನ ವಿಪರ್ಯಾಸ: ಟ್ರ್ಯಾಕ್ಟರ್ ರ‍್ಯಾಲಿ 7ಕ್ಕೆ

ಪ್ರತಿಕೂಲ ಹವಾಮಾನದಿಂದಾಗಿ ರೈತರು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿಯನ್ನು ಜ.7ಕ್ಕೆ ಮುಂದೂಡಲಾಗಿದೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಕುಂಡಲಿ–ಮನೇಸರ್–ಪಲ್ವಾಲ್ ಹೆದ್ದಾರಿವರೆಗೆ ಗುರುವಾರ ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ದಿಲ್ಲಿಯಲ್ಲಿ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ. ಹವಾಮಾನ ವಿಪರ್ಯಾಸದ ಮುನ್ಸೂಚನೆ ಸಿಕ್ಕಿದ್ದರಿಂದ ರ‍್ಯಾಲಿಯನ್ನು ಮುಂದೂಡಲಾಗಿದೆ ಎಂದು ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪುನರುಚ್ಚರಿಸಿದ್ದಾರೆ. ಹರಿಯಾಣದ ಪ್ರತಿ ಮನೆಯಿಂದ ಒಬ್ಬರು, ಪ್ರತಿ […]

Back To Top