Category: ಕೃಷಿ ಗ್ರಾಮಾಭಿವೃದ್ಧಿ

ಮಾತುಕತೆಗೆ ಆಹ್ವಾನ:

ಇದೇ ಹೊತ್ತಿನಲ್ಲಿ ಈ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ದಿಲ್ಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಉತ್ತರ ಪ್ರದೇಶ– ದೆಹಲಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಶುಕ್ರವಾರವೂ ಭಾಗಶಃ ಬಂದ್ ಆಗಿದ್ದವು. ರೈತರು ನಡೆಸುತ್ತಿರುವ ಪ್ರತಿಭಟನೆ 11 ದಿನ ಪೂರ್ಣಗೊಳಿಸಿದೆ. ಸರ್ಕಾರ ಮಾತುಕತೆ ನಡೆಸಲು ಇಚ್ಛಿಸುವುದಾದರೆ ಅಧಿಕೃತ ಆಹ್ವಾನ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡುವ ಪ್ರಸ್ತಾಪವಿದ್ದು, ರೈತರು ಯಾವಾಗ ಕರೆದರೂ ಮಾತುಕತೆಗೆ ಸಿದ್ಧ ಎಂದು ಕೇಂದ್ರ ಸರ್ಕಾರ […]

ನರೇಗಾ ಕೂಲಿ ದಿನ 150ಕ್ಕೆ ಹೆಚ್ಚಳ

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದಿನವನ್ನು 100ರಿಂದ 150 ದಿನಗಳಿಗೆ ಏರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ನರೇಗಾ ಯೋಜನೆಯಡಿ ವ್ಯಕ್ತಿಯೊಬ್ಬರು ಗರಿಷ್ಠ 100 ದಿನ ಕೂಲಿ ಪಡೆಯಲು ಅವಕಾಶವಿತ್ತು. ಈಗಾಗಲೇ 100 ದಿನ ಪೂರೈಸಿದವರೆಗೆ ಹೆಚ್ಚುವರಿ 50 ದಿನ ಕೆಲಸ ಮಾಡಲು ಅವಕಾಶವಿದೆ. ರಾಜ್ಯಕ್ಕೆ 800 ಕೋಟಿ ರೂ. ಹೆಚ್ಚುವರಿ ಅನುದಾನ ಲಭ್ಯವಾಗಿದೆ. ಪರಿಷ್ಕೃತ ಆದೇಶ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದ್ದಾರೆ. Courtesyg: Google (photo)

ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ

ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು ಮತ್ತು ಹೆಸರು ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಸರ್ಕಾರ 2020–21ನೇ ಸಾಲಿಗೆ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರಾಜ್ಯವು ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧರಿಸಿದೆ. ಭತ್ತ ಖರೀದಿಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಜನವರಿ […]

ಯಾವುದೇ ಭೂಮಿಯನ್ನು ಹೆದ್ದಾರಿ ಎಂದು ಘೋಷಿಸಬಹುದು:ಕೋರ್ಟ್

ಪ್ರದೇಶವೊಂದರ ಜನರ ಏಳಿಗೆಗೆ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿಯೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಭಾರತ್‌ಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್ಪ್ರೆಸ್‌ವೇಗೆ ಪೀಠ ಹಸಿರು ನಿಶಾನೆ ನೀಡಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ಬಿ.ಆರ್.ಗವಾಯಿ ಹಾಗೂ ಕೃಷ್ಣ […]

ರೈತರಿಗೆ ಬೆಂಬಲಕ್ಕೆ ವಿಜೇಂದರ್ ನಿರ್ಧಾರ

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಬಾಕ್ಸರ್ ವಿಜೇಂದರ್ ಸಿಂಗ್ ಘೋರ ಕಾಯ್ದೆಗಳನ್ನು ಹಿಂಪಡೆಯದೇ ಇದ್ದರೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಎಂದು ಹೇಳಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳಿದ ವಿಜೇಂದರ್ ಬೆಂಬಲ ಸೂಚಿಸಿದರು. ಹರಿಯಾಣದವರಾದ 35 ವರ್ಷದ ವಿಜೇಂದರ್ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿದ ಹೆಗ್ಗಳಿಕೆ ಹೊಂದಿದ ಇವರು ರೈತರ ಪರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.   Courtesyg: Google […]

Informal workers wages fell by 22.6%: ILO

Informal workers in India suffered a 22.6% fall in wages, even as formal sector employees had their salaries cut by 3.6% on an average, according to a report by the International Labour Organization. Real wage growth in India was one of the lowest in the Asia Pacific, lower than even Pakistan,Sri Lanka, and Vietnam, according […]

ನರೇಗಾ ಅನುಷ್ಠಾನ ಜವಾಬ್ದಾರಿ ಗ್ರಾಪಂಗೆ

ಪ್ರತಿ ಗ್ರಾಮ ಪಂಚಾಯಿತಿಗೂ ವಾರ್ಷಿಕ 1.50 ಕೋಟಿ ರೂ.ಅನುದಾನ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿ ಬದಲು ಗ್ರಾಮ ಪಂಚಾಯಿತಿಗೆ ವಹಿಸಲಾಗುತ್ತದೆ. 15ನೇ ಹಣಕಾಸು ಆಯೋಗ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹೆಚ್ಚು ಅನುದಾನ ನೀಡುವಂತೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ನೆರವು ಒದಗಿಸಲಾಗುವುದು. ಸರ್ಕಾರ ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲಿದೆ ಎಂದರು. ಗ್ರಾಮಗಳಿಗೆ ಆರೋಗ್ಯ ವ್ಯವಸ್ಥೆ, ರಸ್ತೆ, […]

ಭಾರತ ಗ್ರಾಮೀಣ ಅಭಿವೃದ್ಧಿಗೆ ಅರ್ಪಿಸಿಕೊಂಡ ಅಗಾಧ ಜೀವ- ಜೆ.ಸಿ.ಕುಮಾರಪ್ಪ

  –ಸಂತೋಷ ಕೌಲಗಿ, ಜನಪದ ಸೇವಾ ಟ್ರಸ್ಟ್, ಮೇಲುಕೋಟೆ-571431 ೧೯೨೯ರ ಮೇ ತಿಂಗಳಿನ ೯ ನೇ ದಿನ. ಅಹಮದಾಬಾದಿನಲ್ಲಿ ಸುಡು ಬೇಸಿಗೆ. ಮಧ್ಯಾಹ್ನ ೨.೩೦. ಸಾಬರಮತಿ ಆಶ್ರಮದ ಮರದ ಕೆಳಗೆ ಸಗಣಿ ಸಾರಿಸಿದ ನೆಲದ ಮೇಲೆ ಹಿರಿಯರೊಬ್ಬರು ಕುಳಿತು ನೂಲುತ್ತಿ ದ್ದಾರೆ. ಸುಡುಬಿಸಿಲಿನಲ್ಲೂ ಸೂಟು-ಬೂಟುಧಾರಿಯಾಗಿದ್ದ ಯುವಕನೊಬ್ಬ ಅವರು ನೂಲುವುದನ್ನೇ ದಿಟ್ಟಿಸುತ್ತ ನಿಂತಿದ್ದಾನೆ. ೨.೩೦ ಕ್ಕೆ ಸರಿಯಾಗಿ ಆ ಹಿರಿಯರು “ನೀವು ಕುಮಾರಪ್ಪ ಅವರೇ?”ಎಂದು ಕೇಳುತ್ತಾರೆ. ಅಲ್ಲಿಯವರೆಗೂ ನೂಲುತ್ತಿದ್ದ ವ್ಯಕ್ತಿ ಯಾರೆಂದು ಗೊತ್ತಿಲ್ಲದೆ, ನೂಲುವುದನ್ನೇ ನೋಡುತ್ತ ನಿಂತಿದ್ದ ಸೂಟುಬೂಟುಧಾರಿಗೆ ತನ್ನನ್ನು ಮಾತನಾಡಿಸಿದ್ದು […]

ಮಾತುಕತೆ ಪ್ರಸ್ತಾವಕ್ಕೆ ರೈತರ ತಿರಸ್ಕಾರ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಮಾತುಕತೆಗೆ ಬರುವಂತೆ ಗೃಹ ಸಚಿವ ಅಮಿತ್ ಶಾ ನೀಡಿದ್ದ ಆಹ್ವಾನವÀನ್ನು ತಿರಸ್ಕರಿಸಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಷರತ್ತುಬದ್ಧ ಮಾತುಕತೆ ರೈತರಿಗೆ ಮಾಡಿದ ಅವಮಾನ. ಬುರಾಡಿ ಮೈದಾನ ತೆರೆದ ಬಂದೀಖಾನೆಯಾಗಿದ್ದು, ಮಾತುಕತೆಗೆ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಸುರ್ಜಿತ್ ಸಿಂಗ್ ಫುಲ್ ಹೇಳಿದ್ದಾರೆ. ದೆಹಲಿಯ ಗಡಿ ಸಿಂಘುವಿನಲ್ಲಿ ರೈತರು ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಕೀಯ ಪಕ್ಷಗಳಿಗೆ ಅವಕಾಶ […]

Back To Top