Category: ಕೃಷಿ ಗ್ರಾಮಾಭಿವೃದ್ಧಿ

ರೈತ ಸಂಘಟನೆಗಳು ವೋಟ್ ಬ್ಯಾಂಕ್ ಆಗಲಿ.

ಪ್ರದೇಶದ ಯಾವುದೇ ರಾಜ್ಯ/ಪ್ರಾಂತ್ಯದ ರೈತರಿರಲಿ, ಅವರ ಸಮಸ್ಯೆ ಒಂದು. ಬೆಳೆಗೆ ವೈಜ್ಞಾನಿಕ ಬೆಲೆ, ಲಾಭದಾಯಕವಾದ ಕನಿಷ್ಠ ಬೆಂಬಲ ಬೆಲೆಯಲ್ಲಿ ಉತ್ಪನ್ನ ಖರೀದಿ, ಒಳಸುರಿಗಳ ಬೆಲೆ ಕಡಿತ, ಅಗತ್ಯ ಸಮಯದಲ್ಲಿ ಸಾಲ ಸೌಲಭ್ಯ. ಮಂಡಸೂರಿನ ರೈತರು ಕೇಳಿದ್ದು ಅದನ್ನೇ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಗೋಲಿಬಾರ್ ಬಳಿಕ ಎಂದಿನAತೆ ಪರಿಹಾರ ಘೋಷಣೆ, ಸಮಸ್ಯೆ ಬಗೆಹರಿಸುವ ಭರವಸೆ… – 01 ಏಪ್ರಿಲ್ 2018 ಸಂಚಿಕೆ-19 ಪುಟ-66

ಬರುವ ಚುನಾವಣೆಯಲ್ಲಿ ರೈತನೇ ನಿರ್ಣಾಯಕ.

ಕಳೆದ ವರ್ಷ ದಿಲ್ಲಿಯಲ್ಲಿ ಒಂದು ಮುಂಜಾವು, ಎಲ್ಲೆಲ್ಲೂ ರೈತರ ತಲೆಗಳೇ ಕಾಣಿಸುತ್ತಿದ್ದವು. ಅವಾವುದಕ್ಕೂ ಜೀವವಿರಲಿಲ್ಲಿ. ೨೦೧೭ರ ಏಪ್ರಿಲ್ ಹಾಗೂ ಜುಲೈನ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ರುಂಡಗಳನ್ನು ತಮಿಳುನಾಡಿನ ರೈತರು ತೆಗೆದುಕೊಂಡು ಬಂದು ರಾಜಧಾನಿಯ ನಟ್ಟನಡುವೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. – 15ಫೆಬ್ರವರಿ2018 ಸಂಚಿಕೆ-16 ಪುಟ-30

ಇನ್ನೂ ಜಾರಿಗೊಳ್ಳದ ಸಿಎಎಫ್ ಕಾಯಿದೆ.

ಬಳಸಿ ಬಳಸಿ ಹಳತಾದ ಮತ್ತು ಕ್ಲೀಷೆ ಎನ್ನಿಸುವ ಮಾತು ಇದು-ನಮ್ಮಲ್ಲಿ ಉತ್ತಮ ಕಾಯಿದೆಗಳೆವೆ. ಆದರೆ, ಅದರ ಹಾರಿ ಸರಿಯಾಗಿಲ್ಲ. ಇಂಥದ್ದೇ ಒಂದು ಪ್ರಗತಿಪರ ಕಾಯಿದೆ-ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ(ಸಿಎಎಫ್‌ಎ,೨೦೧೬). ಅರಣ್ಯವನ್ನು ಅರಣ್ಯವಲ್ಲದ ಬಳಕೆಗೆ, ಅಂದರೆ, ಕೈಗಾರಿಕೆ, ಗಣಿಗಾರಿಕೆ, ವಸತಿ ಯೋಜನೆಗಳು ಇತ್ಯಾದಿಗೆ ಕೊಡಮಾಡಿದಾಗ ಆಗುವ ನಷ್ಟವನ್ನು ಕಟ್ಟಿಕೊಡಲು ರೂಪುಗೊಂಡ ಕಾಯಿದೆ ಇದು. – 16 ಡಿಸೆಬರ್ 2017 ಸಂಚಿಕೆ-12 ಪುಟ-66

ಜವಾವ್ದಾರಿಯುತ ಗ್ರಾಹಕರಾಗುವುದು ತುರ್ತು.

ಅಕ್ಟೋಬರ್ ಮೊದಲ ವಾರ ಪಶ್ಚಿಮ ಮರಾವಳಿಯಲ್ಲಿ ಮೀನು,ಏಡಿ, ಸೀಗಡಿಗಳ ಮಹಾಪೂರ. ರಾಜ್ಯದ ಕರಾವಾರ, ಮಹಾರಾಷ್ಟçದ ಆಲಿಬಾಗ್, ಕೇರಳದ ವರ್ಕಳದಲ್ಲಿ ಏಕಕಾಲದಲ್ಲಿ ಸಂಭವಿಸಿದ ಈ ಮಹಾಬೇಟೆಗೆ ವಿಜ್ಞಾನಿಗಳು ಹಲವು ಕಾರಣ ನೀಡುತ್ತಾರೆ. ಪಶ್ಚಿಮ ಘಟ್ಟದಂತೆ ಕರಾವಳಿಯೂ ನಮ್ಮ ದೇಶದ ಮುಕುಟ ಮಣಿ. ಪಶ್ಚಿಮ ಘಟ್ಟಕ್ಕೆ ಸಮಾನಾಂತರವಾಗಿ ಹರಡಿರುವ ಕರಾವಳಿ, ಗುಕರಾತ್‌ನಿಂದ ಆರಂಭವಾಗಿ ಕನ್ಯಾಕುಮಾರಿಯ ಮೂಲಕ ಹಾಯ್ದು ಪಶ್ಚಿಮ ಬಂಗಾಳದ ಸುಂದರಬನದವರೆಗೆ ವ್ಯಾಪಿಸಿದೆ. – 01 ನವೆಂಬರ್ 2017 ಸಂಚಿಕೆ-10 ಪುಟ-66  

ಮೇಘರಾಜನೇ ನುಡಿ ನುಡಿ..

ನೀವು ಮಗುವಾಗಿದ್ದಾಗ, ಆಕಾಶದಲ್ಲಿ ಓಡುವ ಮೋಡಗಳನ್ನು ನೋಡುತ್ತಾ, ಇದು ಆನೆಯ ಹಾಗೆಯ , ಇದು ಕರಡಿಯ ಹಾಗಿದೆ ಎಂದೆಲ್ಲ ಗೆಳೆಯ ಗೆಳತಿಯರೊಡನೆ ಬೆಟ್ ಕಟ್ಟಿದ್ದು ನಡನಪಿರಬಹುದು. ಇದು ಒಣದು ಕಾಲದಲ್ಲಿ ಮಕ್ಕಳ ಫೇವರೆಟ್ ಪಾಸ್‌ಟೈಮ್ ಆಗಿತ್ತು. – ಸಂಚಿಕೆ-3 ಪುಟ-14. 15 July 2017

Back To Top