Category: ಪರಿಸರ ಜೀವಿಶಾಸ್ತ್ರ

ಕಸ್ತೂರಿರಂಗನ್ ವರದಿಗೆ ವಿರೋಧ

ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಈಗಿರುವ ಸ್ಥಿತಿಯಲ್ಲಿ ಜಾರಿಗೊಳಿಸದಂತೆ ಆಗ್ರಹಿಸಿ, ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ವರದಿಯನ್ನು ಯಥಾವತ್  ಜಾರಿ ಮಾಡದಂತೆ ಆಗ್ರಹಿಸಿ ಕೇಂದ್ರ ಪತ್ರ ಬರೆಯಲಾಗುತ್ತದೆ ಎಂದರು. ಡಿ.೩೧ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಪ್ರಕರಣ ವಿಚಾರಣೆಗೆ […]

ರಾಜ್ಯದಲ್ಲಿ ಮೈ ಕೊರೆಯಲಿರುವ ಮಾಗಿ ಚಳಿ

ರಾಜ್ಯದಲ್ಲಿ ಹಿಂಗಾರು ಮಳೆ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ಚಳಿಯ ಪ್ರಮಾಣ ಹೆಚ್ಚಳವಾಗಿದೆ. ಮಾಗಿ ಚಳಿ ಸಂಕ್ರಾAತಿವರೆಗೂ ಕಂಡುಬರಲಿದೆ. ಬಹಳಷ್ಟು ಕಡೆ ಬೆಳಗಿನ ವೇಳೆ ಮಂಜು ಮುಸುಕಿದ ವಾತಾವರಣ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಗಾಳಿಯ ವೇಗ ಬಹಳ ಕಡಿಮೆಯಿದ್ದು ಚಳಿಯು ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು. ರಾಜ್ಯದಲ್ಲಿ ಸರಾಸರಿ 70ರಷ್ಟು ಆರ್ದ್ರತೆ ಇದ್ದು, ಗಾಳಿಯ ವೇಗ ಪ್ರತಿ ಗಂಟೆಗೆ ಸೊನ್ನೆಯಿಂದ ಒಂದೂವರೆ ಕಿ.ಮೀ ನಷ್ಟಿದೆ. ಕೆಲವೆಡೆ 3.5 ಕಿ.ಮೀನಷ್ಟು ಗಾಳಿಯ […]

ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲೆ

ಬೀದರ್‌ನಲ್ಲಿ ಋತುಮಾನದ ಅತಿ ಕಡಿಮೆ ತಾಪಮಾನ ಎನ್ನಲಾದ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 2019ರ ಜ.೧ರಂದು 6.0 ಡಿಗ್ರಿ ಸೆಲ್ಸಿಯಸ್ ಹಾಗೂ ಕಳೆದ ನವೆಂಬರ್‌ನಲ್ಲಿ 7 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು. ವಿಜಯಪುರದಲ್ಲಿ 9.5, ಧಾರವಾಡ 10.2, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ 11 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಉತ್ತರದಿಂದ ಒಣ ಹವೆ, ಶೀತಗಾಳಿ ಬೀಸುತ್ತಿರುವುದು, ಮೋಡರಹಿತ ಆಕಾಶ ಹಾಗೂ ಲಾನಿನೊ ಪ್ರಭಾವದಿಂದ ತಾಪಮಾನ ಇಳಿಕೆಯಾಗುತ್ತಿದೆ. ಮುಂಜಾನೆಯಿಂದಲೇ ದಟ್ಟ ಮಂಜು ಆವರಿಸುತ್ತಿದ್ದು, ಚಳಿ […]

ಯಂಗ್ ಚಾಂಪಿಯನ್ಸ್ ಆಫ್ ಅರ್ಥ್ಗೆ ಭಾರತೀಯ

ವಿಶ್ವಸಂಸ್ಥೆಯ ಪರಿಸರ ವಿಭಾಗವು ನೀಡುವ ಪ್ರತಿಷ್ಠಿತ ಯಂಗ್ ಚಾಂಪಿಯನ್ಸ್ ಆಫ್ ದಿ ಅರ್ಥ್–2020 ಪ್ರಶಸ್ತಿಗೆ ಭಾರತದ ನವೋದ್ಯಮಿಯೊಬ್ಬರು ಆಯ್ಕೆಯಾಗಿದ್ದಾರೆ. ಒಟ್ಟು ಏಳು ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ 7.35 ಲಕ್ಷ ರೂ. ನಗದು ಒಳಗೊಂಡಿದೆ. ಪರಿಸರ ಮಾಲಿನ್ಯ ತಡೆಗೆ  ಪರಿಹಾರ ಕಂಡುಹಿಡಿದವರಿಗೆ ವಿಶ್ವಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದೆ. ಸಾಮಾಜಿಕ ಉದ್ಯಮ ತಕಚರ್ ಸಂಸ್ಥಾಪಕ, ಎಂಜಿನಿಯರ್ ಪದವೀಧರ 29 ವರ್ಷದ ವಿದ್ಯುತ್ ಮೋಹನ್ ಪ್ರಶಸ್ತಿಗೆ ಪಾತ್ರರಾದವರು. ಕೃಷಿ ತ್ಯಾಜ್ಯವನ್ನು ಸುಡುವುದರ ಬದಲು ಅದನ್ನು ಇಂಧನ, ಗೊಬ್ಬರ, […]

ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ

ನವೀಕರಿಸಬಹುದಾದ ಇಂಧನದಿAದ ಬಡತನ ನಿವಾರಣೆ ಸಾಧ್ಯವಾಗಲಿದೆ. ಇದನ್ನು ಆರೋಗ್ಯ, ಶಿಕ್ಷಣ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾ ನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಇಂಧನದ ಆವಿಷ್ಕಾರಕ್ಕೆ ವೇದಿಕೆ ಒದಗಿಸಲು ಸೆಲ್ಕೊ ಫೌಂಡೇಷನ್ ಪ್ರಾರಂಭಿಸಿರುವ ಗ್ಲೋಬಲ್ ಎಸ್‌ಡಿಜಿ೭ ಹಬ್ಸ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಧನಕ್ಕೆ ಬೇಡಿಕೆ ದಿನೇದಿನೇ ಹೆಚ್ಚುತ್ತಿದ್ದು, ಕೆಲವೇ ವರ್ಷಗಳಲ್ಲಿ ಪಳೆಯುಳಿಕೆ ಇಂಧನ ಬರಿದಾಗಲಿದೆ. ಗ್ರಾಮೀಣ ಬಡಜನರನ್ನು ಮೇಲಕ್ಕೆತ್ತುವ ಯೋಜನೆಗಳಿಗೆ ಬೆಂಬಲ ನೀಡಬೇಕಿದೆ. ನವೀಕರಿಸಬಹುದಾದ […]

ಎವರೆಸ್ಟ್ ಎತ್ತರ 8,848.86 ಮೀಟರ್

ಜಗತ್ತಿನ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ನ ಎತ್ತರ 8,848.86 ಮೀಟರ್ ಎಂದು ನೇಪಾಳ ಹಾಗೂ ಚೀನಾ ಘೋಷಿಸಿವೆ.1954ರಲ್ಲಿ ಭಾರತ ಘೋಷಿಸಿದ ಅಳತೆಯಾದ 8,848 ಮೀಟರ್‌ಗಿಂತ ಇದು 86 ಸೆಂಮೀ(2.8 ಅಡಿ) ಹೆಚ್ಚು. 2014ರಲ್ಲಿ ಸಂಭವಿಸಿದ ಭೂಕಂಪ ಮತ್ತಿತರ ಕಾರಣಗಳಿಂದ ಪರ್ವತದ ಎತ್ತರದಲ್ಲಿ ಬದಲಾವಣೆ ಆಗಿರಬಹುದಾದ ಹಿನ್ನೆಲೆಯಲ್ಲಿ ನಿಖರ ಎತ್ತರವನ್ನು ಅಳೆಯಲು ನೇಪಾಳ ಸರ್ಕಾರ ನಿರ್ಧರಿಸಿತ್ತು. 1975 ಹಾಗೂ 2005ರಲ್ಲಿ ಚೀನಾ ನಡೆಸಿದ ಆರು ಸುತ್ತಿನ ಸಮೀಕ್ಷೆ ಹಾಗೂ ವೈಜ್ಞಾನಿಕ ಸಂಶೋಧನೆಯಲ್ಲಿ ಎವರೆಸ್ಟ್ನ ಎತ್ತರ ಕ್ರಮವಾಗಿ 8,848.13 […]

ಮೂರು ದಿನ ಮಳೆ ಸಾಧ್ಯತೆ

ತುಂತುರು ಮಳೆ ಮತ್ತು ತಂಪಾದ ಗಾಳಿಯಿಂದ ಬೆಂಗಳೂರು ಗಡಗುಟ್ಟುತ್ತಿದೆ. ಎರಡು ದಿನದಿಂದ ಬಿಸಿಲು ಕಾಣೆಯಾಗಿದೆ. ಸಾಮಾನ್ಯವಾಗಿ 28 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆ.ಗೆ ಇಳಿಕೆಯಾಗಿದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆ.ಇತ್ತು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಳೆಯಾಗಲಿದ್ದು, ಇಬ್ಬನಿಯೂ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದ ಪ್ರಭಾವ ಈ ವಾತಾವರಣಕ್ಕೆ ಕಾರಣ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. Courtesyg: Google […]

ವಾಯುಮಾಪನ ಕೇಂದ್ರ ಕಡ್ಡಾಯಗೊಳಿಸಿದ ಎನ್‌ಜಿಟಿ

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಕೇಂದ್ರ ಇರಬೇಕು.ಇಂಥ ಕೇಂದ್ರಗಳನ್ನು ಮೂರು ತಿಂಗಳೊಳಗೆ ಸ್ಥಾಪಿಸಬೇಕು  ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ನ್ಯಾ. ಆದರ್ಶ ಕುಮಾರ್ ಗೋಯಲ್ ಅವರ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ, ಗಾಳಿಯ ಗುಣಮಟ್ಟ ಪರಿಶೀಲನೆ ವ್ಯವಸ್ಥೆ ಇಲ್ಲದಿರುವ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಮನುಷ್ಯರು ನಿರ್ವಹಿಸುವ ನಿಗಾ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿಗಾ ವ್ಯವಸ್ಥೆಯನ್ನು ಆರಂಭಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜವಾಬ್ದಾರಿ. ಗಾಳಿಯ ಗುಣಮಟ್ಟ ಸೂಚ್ಯಂಕ, ಪಿಎಂ(ಮಲಿನ ಕಣ) […]

ಆನೆಗಳು ಮಾರಾಟಕ್ಕಿವೆ!

ಹೆಚ್ಚುತ್ತಿರುವ ಆನೆಗಳ ಸಂತತಿಗೆ ಕಡಿವಾಣ ಹಾಕಲು, ಬರ ಪರಿಸ್ಥಿತಿ ಹಿನ್ನೆಲೆಯಲಲಿ ಆಹಾರ ಕೊರತೆ ಮತ್ತು ಮಾನವರ ಜೊತೆ ಸಂಘರ್ಷ ಹೆಚ್ಚಳದ ಹಿನ್ನೆಲೆಯಲ್ಲಿ ನಮೀಬಿಯಾ ಸರ್ಕಾರ 170 ಆನೆಗಳ ಮಾರಾಟಕ್ಕೆ ಮುಂದಾಗಿದೆ. ಆಫ್ರಿಕದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ. ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗುಂಡಿಕ್ಕಿ ಕೊಲ್ಲುವುದಕ್ಕೆ ಜನ/ಪರಿಸರ ಕರ‍್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆನೆಗಳ ಮಾರಾಟಕ್ಕೆ  ಮುಂದಾಗಿದ್ದೇವೆ ಎಂದು ಪರಿಸರ ಸಚಿವ ಪೊಹಂಬಾ ಶಿಫಿಟಾ ತಿಳಿಸಿದ್ದಾರೆ. Courtesyg: Google (photo)

Back To Top