ಕುಲಾಂತರಿ ಬೆಳೆ: ಆಡಿಸುವಾತನ ಮಾತೇ ಅಂತಿಮವೇ?
ಸುಪ್ರೀಂ ಕೋರ್ಟ್ ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ(ಎಂಒಇಎಫ್‌ಸಿ) ಮಂತ್ರಾಲಯಕ್ಕೆ ಎಲ್ಲ ಭಾಗಿದಾರರನ್ನು ಒಳಗೊಂಡು ಕುಲಾಂತರಿ(ಜಿಎಂ, ಜೈವಿಕವಾಗಿ ಬದಲಿಸಿದ ಬೆಳೆಗಳು) ಕುರಿತು ರಾಷ್ಟ್ರೀಯ ಕಾರ್ಯನೀತಿಯೊಂದನ್ನು ರೂಪಿಸಬೇಕೆಂದು ಹೇಳಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವನ್ನು ಒಳಗೊಳ್ಳಬೇಕು; ಕೃಷಿ ಸೇರಿದಂತೆ ಕೆಲವು ವಿಷಯಗಳು ರಾಜ್ಯ ಪಟ್ಟಿಗೆ ಸೇರುವುದರಿಂದ, ಸಂವಿಧಾನದ ಚೌಕಟ್ಟಿನಲ್ಲಿ ಇದು ಅಗತ್ಯ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಸಂಜಯ್ ಕರೋಲ್ ಅವರ ಪೀಠ ಹೇಳಿದೆ. ಕುಲಾಂತರಿಗಳಿಗೆ ಸಂಬಂಧಿಸಿದಂತೆ ರೈತರು, ಬಳಕೆದಾರರು, ವಿಜ್ಞಾನಿಗಳು ಮತ್ತು ಉತ್ಪಾದಕ ಕಂಪನಿಗಳೊಂದಿಗೆ […]
ಮರಳಿ ಪಡೆಯಬೇಕಿರುವ ಜೀವಸಂಕುಲ ಲೋಕ
ಇಂದು ಬೆಳಗ್ಗೆ ಪತ್ರಿಕೆಯಲ್ಲಿ `ವಿಶ್ವಪರಿಸರ ದಿನ’ ಎಂದು ತಿಳಿದಾಗ ಬಾಳ್ವೆ ಮತ್ತು ಬಾಳುವೆಯ ವಿಧಾನಗಳೆರಡೂ ಬೇರೆಯಲ್ಲ ಎಂದು ಬದುಕುತ್ತಿರುವ, ನಾನು ಬಹುವಾಗಿ ಗೌರವಿಸುವ ಮೂವರ ಹೆಸರುಗಳು ಕಣ್ಣ ಮುಂದೆ ಸುಳಿದವು. ಮೇಲುಕೋಟೆಯ ಜನಪದ ಟ್ರಸ್ಟ್‌ನ ಸಂತೋಷ ಕೌಲಗಿ, ಎಂಬತ್ತು-ತೊಂಬತ್ತರ ದಶಕದಲ್ಲಿ ಉತ್ಸಾಹದಲ್ಲಿ, ರಾಜ್ಯದ ಆದ್ಯಂತ ಪರಿಸರದ ಕುರಿತು ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ ‘ಅಪ್ಪಿಕೋ’ ಪಾಂಡುರಂಗ ಹೆಗಡೆ ಮತ್ತು ಹಳೆಯ ಗೆಳೆಯ, ’ಗಿಡಬಾಲಕ’ ಎಲ್ಸಿ ನಾಗರಾಜ. ಅಚ್ಚರಿ ಎನ್ನುವಂತೆ ಬೆಳಗ್ಗೆ ಸಂತೋಷ ಕೌಲಗಿಯವರು ಪುಟ್ಟ ಬರಹವನ್ನು ಕೆಲವು […]
ಐಟಿ ಕಾಯಿದೆ: ಹೈಕೋರ್ಟ್ ಕದ ತಟ್ಟಿದ ವಾಟ್ಸ್ ಆಪ್
ನಿಗೂಢಲಿಪಿ(ಎನ್‍ಕ್ರಿಪ್ಷನ್)ಯನ್ನು ಬಹಿರಂಗಗೊಳಿಸುವುದು ನಾಗರಿಕರ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದಿರುವ ವಾಟ್ಸ್ ಆಪ್, ನೂತನ ಐಟಿ ಕಾಯಿದೆಯನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಯಾವ ಮೂಲಭೂತ ಹಕ್ಕು ಕೂಡ ನಿರಂಕುಶವಲ್ಲ ಎಂದು ಹೇಳಿದೆ. ಹೊಸ ಐಟಿ ಕಾಯಿದೆಯಿಂದ ನಾಗರಿಕರ ಖಾಸಗಿತನದ ಹಕ್ಕು ಹಾಗೂ ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಕೆ.ಎಸ್.ಪುಟ್ಟಸ್ವಾಮಿ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದಿದೆ. ಮಧ್ಯಸ್ಥ ಕಂಪನಿಗಳು ಮಾಹಿತಿಯನ್ನು ಸೃಷ್ಟಿಸಿದವರ ಗುರುತನ್ನು ನೀಡುವುದು […]
ಹೊಸ ಐಟಿ ಕಾಯ್ದೆ ಜಾರಿ
ನೂತನ ಮಾಹಿತಿ ತಂತ್ರಜ್ಞಾನ ಕಾಯಿದೆ ಇಂದಿನಿಂದ ಜಾರಿಗೆ ಬಂದಿದ್ದು, ಬಹುತೇಕ ಅಂತರ್ಜಾಲ ಮಧ್ಯಸ್ಥ ಕಂಪನಿಗಳು ನಿಯಮಗಳನ್ನು ಜಾರಿಗೊಳಿಸುವುದಾಗಿ ಹೇಳಿವೆ. ಮಾಹಿತಿ ತಂತ್ರಜ್ಞಾನ(ಮಧ್ಯಸ್ಥಗಾರರು ಹಾಗೂ ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು-2021 ಮಧ್ಯಸ್ಥ ಸಂಸ್ಥೆಗಳಾದ ಕೂ, ಫೇಸ್‍ಬುಕ್, ಗೂಗಲ್, ಟ್ವಿಟರ್, ಟೆಲಿಗ್ರಾಂ ಹಾಗೂ ಇನ್‍ಸ್ಟಾಗ್ರಾಂಗೆ ಅನ್ವಯಿಸಲಿದೆ. ಹೊಸ ನಿಯಮಗಳನ್ನು ತಾನು ಜಾರಿಗೊಳಿಸುವುದಾಗಿ ಫೇಸ್‍ಬುಕ್ ಹೇಳಿದ್ದು, ಬಹುತೇಕ ಎಲ್ಲ ನಿಯಮಗಳನ್ನು ತಾನು ಅಳವಡಿಸಿಕೊಂಡಿರುವುದಾಗಿ ಟೆಲಿಗ್ರಾಂ ಹೇಳಿಕೊಂಡಿದೆ. ದೇಶಿ ಆಪ್ ಕೂ, ತಾನು ಎಲ್ಲ ನಿಯಮಗಳಿಗೆ ಅಳವಡಿಸಿಕೊಂಡಿರುವುದಾಗಿ ಹೇಳಿದೆ. ಟ್ವಿಟರ್ ಹಾಗೂ […]
ಕನ್ನಡಿಗ, ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್‌ಗೆ ಗೂಗಲ್ ಗೌರವ
ಬೆಂಗಳೂರು, ಮಾರ್ಚ್ 10: ಖ್ಯಾತ ಭಾರತೀಯ ವಿಜ್ಞಾನಿ ಹಾಗೂ ಕನ್ನಡಿಗರಾಗಿರುವ ಉಡುಪಿ ರಾಮಚಂದ್ರರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಡೂಡಲ್ ರಚಿಸುವ ಮೂಲಕ ಗೂಗಲ್ ಗೌರವಿಸಿದೆ. ಯುಆರ್ ರಾವ್ ಅವರು 89ನೇ ಹುಟ್ಟುಹಬ್ಬ ಇದಾಗಿದೆ. ಡಾ. ಯು. ಆರ್. ರಾವ್ ಅವರನ್ನು ಅನೇಕರು ಭಾರತದ ಸ್ಯಾಟಲೈಟ್ ಮ್ಯಾನ್ ಎಂದೇ ಕರೆಯುವುದುಂಟು. ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಅಧ್ಯಕ್ಷರಾಗಿದ್ದ ರಾವ್ ಅವರು 1975 ರಲ್ಲಿ ಭಾರತದ ಮೊದಲ ಉಪಗ್ರಹ – ‘ಆರ್ಯಭಟ’ ಉಡಾವಣೆಯ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. ಯುಆರ್ […]
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಪ್ರಕಟ
ಶ್ರೀ ನಾಗೇಶ ಹೆಗ್ಡೆ ಡಾ.ಸಿ.ಆರ್.ಚಂದ್ರಶೇಖರ್ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೊಡಮಾಡುವ ವಿಜ್ಞಾನ ಸಂವಹನೆ-ಜೀವಮಾನ ಸಾಧನೆಗಾಗಿ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಖ್ಯಾತ ಮನೋವೈದ್ಯರು, ಲೇಖಕರಾದ ಡಾ.ಸಿ.ಆರ್.ಚಂದ್ರಶೇಖರ್(2021ನೇ ಸಾಲು) ಹಾಗೂ ಖ್ಯಾತ ವಿಜ್ಞಾನ ಲೇಖಕರು ಹಾಗೂ ಪರಿಸರ ತಜ್ಞರಾದ ಶ್ರೀ ನಾಗೇಶ ಹೆಗ್ಡೆ(2020 ನೇ ಸಾಲು) ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂ ನಗದು […]
ವಿದ್ಯಾರ್ಥಿಗಳಿಗೆ ಉಚಿತ ಡೇಟಾ
ತಮಿಳುನಾಡಿನ 9.69 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ದಿನ 2 ಜಿಬಿ ಡೇಟಾ ನೀಡಲು ಸರ್ಕಾರ ನಿರ್ಧರಿಸಿದೆ. ಕೋವಿಡ್‌ನಿಂದ ಅನೇಕ ತಿಂಗಳು ತರಗತಿಗಳು ನಡೆದಿಲ್ಲ. ಈಗ ಆನ್‌ಲೈನ್‌ಮೂಲಕ ಪಾಠ ನಡೆಯುತ್ತಿರುವುದರಿಂದ ಏಪ್ರಿಲ್‌ವರೆಗೆ ಉಚಿತ ಡೇಟಾ ನೀಡಲಾಗುತ್ತದೆ. ಸರ್ಕಾರಿ, ಅನುದಾನಿತಕಾಲೇಜುಗಳ 9,69,047 ವಿದ್ಯಾರ್ಥಿಗಳಿಗೆ ಡೇಟಾ ಕಾರ್ಡ್ ವಿತರಿಸಲಾಗುತ್ತದೆ. Courtesyg: Google (photo)
ಭಾರತ್ ಬಯೋಟೆಕ್‌ನಿಂದ ಮತ್ತೊಂದು ಲಸಿಕೆ
ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡುವ ಲಸಿಕೆಯ ಮೊದಲ ಹಂತದ ಪ್ರಯೋಗವನ್ನು ಫೆಬ್ರವರಿ-ಮಾರ್ಚ್ನಲ್ಲಿ ಆರಂಭಿಸಲಿದೆ. ಸಂಸ್ಥೆಯ ಕೊರೊನಾ ಲಸಿಕೆ ಕೊವ್ಯಾಕ್ಸಿನ್‌ಗೆ ಈಗಾಗಲೇ ಔಷಧ ಮಹಾ ನಿಯಂತ್ರಕರು ಅನುಮೋದನೆ ನೀಡಿದ್ದಾರೆ. ಹೊಸ ಲಸಿಕೆ ಅಭಿವೃದ್ಧಿಗೆ ವಾಷಿಂಗ್ಟನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಬಿಬಿವಿ೧೫೪ ಎಂಬ ಹೆಸರಿನ ಈ ಲಸಿಕೆಯ ಕ್ಲಿನಿಕಲ್ ಪೂರ್ವ ಅಧ್ಯಯನವನ್ನು ಭಾರತ ಮತ್ತು ಅಮೆರಿಕದಲ್ಲಿ ನಡೆಸಲಾಗಿದೆ. ಮಾನವ ಪ್ರಯೋಗದ ಮೊದಲ ಹಂತ ಫೆಬ್ರವರಿ–ಮಾರ್ಚ್ ೨೦೨೧ರಲ್ಲಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಮೊದಲ […]
Digital boom helps TCS beat estimates
Tata Consultancy Services Ltd is targeting a double-digit growth in revenue this financial year on hopes that it will continue to benefit from the pandemic-induced boom in digital and cloud services. Net profit at the Mumbai-based company rose 7.2% from a year earlier to ₹8,701 crore in the quarter ended 31 December. Revenue grew 5.4% from […]