ಬಿಟಿಎಸ್ ತಂತ್ರಜ್ಞಾನ ಮೇಳ
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳ ಬೆಂಗಳೂರು ಟೆಕ್ ಸಮಿಟ್-2020(ಬಿಟಿಎಸ್) ಆರಂಭವಾಗಿದೆ. ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ನ.19ರಂದು ಬೆಳಿಗ್ಗೆ 10ಕ್ಕೆ ಪ್ರಧಾನ ನರೇಂದ್ರ ಮೋದಿ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಲಿದ್ದಾರೆ. ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಜ್ ಗಣರಾಜ್ಯದ ಉಪಾಧ್ಯಕ್ಷ ಗೈ ಪರ್ಮೆಲಿನ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜಗದೀಶ್ ಶೆಟ್ಟರ್ ಮೇಳದ 23 ನೇ ಆವೃತ್ತಿಗೆ ಭಾಗಿಯಾಗಲಿದ್ದಾರೆ. ನ. 19ರಿಂದ 21ರವರೆಗೆ […]
ಕ್ಯೂಆರ್‌ಎಸ್‌ಎಎಂ ಯಶಸ್ವಿ ಉಡಾವಣೆ
ಒಡಿಶಾದ ಕರಾವಳಿಯಲ್ಲಿರುವ ಚಂಡೀಪುರ ಉಡಾವಣಾ ಕೇಂದ್ರದಿAದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ ವ್ಯವಸ್ಥೆ(ಕ್ಯೂಆರ್‌ಎಸ್‌ಎಎಂ)ಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಳೆದ ಐದು ದಿನಗಳಲ್ಲಿ ಕ್ಷಿಪಣಿಯ ಎರಡನೇ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಇದಾಗಿದ್ದು, ಆಕಾಶದಲ್ಲಿದ್ದ ಗುರಿಯನ್ನು ಧ್ವಂಸಗೊಳಿಸಿದೆ. 30 ಕಿಮೀ ವ್ಯಾಪ್ತಿಯಲ್ಲಿರುವ ಯುದ್ಧ ವಿಮಾನ, ಡ್ರೋನ್ ಅಥವಾ ಯುಎವಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಕ್ಷಿಪಣಿಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು. Courtesyg: Google (photo)
ಬ್ರಹ್ಮೋಸ್ ಕ್ಷಿಪಣಿ ರಫ್ತು
ಅತ್ಯಾಧುನಿಕ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತ ಮತ್ತು ರಷ್ಯಾ ಯೋಜನೆ ತಯಾರಿಸುತ್ತಿವೆ ಎಂದು ರಷ್ಯಾ ಡೆಪ್ಯುಟಿ ಚೀಫ್ ಆಫ್ ಮಿಷನ್ ರೋಮನ್ ಬಬುಶ್ಕಿನ್ ತಿಳಿಸಿದರು. ಭಾರತ ಹಾಗೂ ರಷ್ಯಾ ಒಟ್ಟಾಗಿ ಈ ಕ್ಷಿಪಣಿ ತಯಾರಿಸುತ್ತಿದ್ದು, ಜಲಾಂತರ್ಗಾಮಿ ನೌಕೆ, ಯುದ್ಧ ನೌಕೆ, ಯುದ್ಧ ವಿಮಾನ ಹಾಗೂ ನೆಲದಿಂದಲೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು. ಕ್ಷಿಪಣಿ ರಫ್ತು ಕುರಿತು ಫಿಲಿಪ್ಪೀನ್ಸ್ ಜೊತೆ ಮಾತುಕತೆ ನಡೆಸಿದೆ. ಕ್ಷಿಪಣಿಯ ಸಾಮರ್ಥ್ಯವನ್ನು 290 ಕಿಮೀನಿಂದ 400 […]
ಆನ್‌ಲೈನ್ ಕಂಟೆಂಟ್ ಮೇಲೆ ನಿರ್ಬಂಧ
ಅAತರ್‌ಜಾಲದಲ್ಲಿ ಪ್ರಸಾರವಾಗುವ ಸುದ್ದಿ, ಸಿನಿಮಾ, ಪ್ರಚಲಿತ ವ್ಯವಹಾರ ಕಾರ್ಯಕ್ರಮ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ವಿಡಿಯೋ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾನಂಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೂ ಇದು ಅನ್ವಯವಾಗಲಿದೆ. ಈ ಸಂಬಂಧ ಅಧಿಸೂಚನೆಯನ್ನು ಸಂಪುಟ ಕಾರ್ಯಾಲಯ ಹೊರಡಿಸಿದ್ದು, ಪರ-ವಿರೋಧ ವ್ಯಕ್ತವಾಗಿದೆ. ಆನ್‌ಲೈನ್ ಮಾಧ್ಯಮಗಳು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವ ವ್ಯಾಪ್ತಿಗೆ ಬರಲಿದ್ದು, ಸಂಬAಧಿಸಿದ ಕರ‍್ಯನೀತಿಯನ್ನು ಸಚಿವಾಲಯ ರೂಪಿಸಲಿದೆ. 1961ರ ನಿಯಮಗಳಿಗೆ […]
ವಾಟ್ಸ್ಆ್ಯಪ್ ಸಂದೇಶ ಕಣ್ಮರೆಯಾಗುವ ಸೌಲಭ್ಯ ಶೀಘ್ರ
ವಾಟ್ಸ್ಆ್ಯಪ್‌ನಲ್ಲಿ ಕಳಿಸಿದ ಸಂದೇಶಗಳು ಏಳು ದಿನಗಳಲ್ಲಿ ಕಣ್ಮರೆಯಾಗುವ ವ್ಯವಸ್ಥೆಯನ್ನು ಪರಿಚಯಿಸಿರುವುದಾಗಿ ವಾಟ್ಸ್ಆ್ಯಪ್ ಹೇಳಿದೆ. ವೈಯಕ್ತಿಕವಾಗಿ ಚಾಟ್ ಮಾಡುವಾಗ ಸಂದೇಶ ಕಣ್ಮರೆ ಆಯ್ಕೆಯನ್ನು ಯಾರು ಬೇಕಾದರೂ ಬಳಸುವ ಇಲ್ಲವೇ ಬಳಸದೇ ಇರುವಂತೆ ಮಾಡಿಕೊಳ್ಳಬಹುದು. ಆದರೆ, ಗ್ರೂಪ್‌ಗಳಲ್ಲಿ ಅಡ್ಮಿನ್ ಮಾತ್ರ ಅದರ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಫೋನ್‌ಗಳಲ್ಲಿ ಉಳಿದ ವಾಟ್ಸ್ಆ್ಯಪ್ ಸಂದೇಶ-ಚಿತ್ರ ಇತ್ಯಾದಿಯನ್ನು ಗುರುತಿಸಲು ಮತ್ತು ಏಕಕಾಲಕ್ಕೆ ಹಲವನ್ನು ತೆಗೆದುಹಾಕುವ ಸೌಲಭ್ಯ ಈ ವಾರದಿಂದಲೇ ಜಾರಿಗೆ ಬರಲಿದೆ. Courtesyg: Google (photo)
ಭಾರತಕ್ಕೆ ಬಂದಿಳಿದ ಎರಡನೇ ತಂಡ 3 ರಫೇಲ್
ಭಾರತದ ಸೇನೆಪಡೆಗೆ ಎರಡನೇ ತಂಡ ರಫೇಲ್ ಯುದ್ಧವಿಮಾನಗಳು ಜಾಮ್‌ನಗರದ ವಾಯುನೆಲೆಗೆ ಬುಧವಾರ ಸಂಜೆ ಲಗ್ಗೆಇಟ್ಟಿವೆ. ಫ್ರಾನ್ಸ್ನಿಂದ ಹೊರಟ ಮೂರು ವಿಮಾನಗಳು ಎಲ್ಲಿಯೂ ನಿಲುಗಡೆ ಮಾಡದೇ ನೇರವಾಗಿ ಭಾರತಕ್ಕೆ ಬಂದಿವೆ. ಚೀನಾ ಗಡಿ ಸಂಘರ್ಷದ ಈ ವೇಳೆ ಭಾರತಕ್ಕೆ ಬಂದಿರುವ ಈ ವಿಮಾನಗಳು ವಾಯುಪಡೆಗೆ ಬಲ ತುಂಬಿವೆ. ಎರಡನೇ ತಂಡದ ಆಗಮನದ ಬಳಿಕ ಭಾರತದಲ್ಲಿ ರಫೇಲ್ ಯುದ್ಧವಿಮಾನಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಐದು ವಿಮಾನಗಳ ಮೊದಲ ತಂಡ ಜುಲೈ 29ರಂದು ಭಾರತಕ್ಕೆ ಆಗಮಿಸಿತ್ತು. ಫ್ರಾನ್ಸ್ನ ಡಾಸೊ ಕಂಪನಿಯ ಜತೆ […]
ಬೆಂಗಳೂರಿನಲ್ಲಿ ಎಐ ಸಂಶೋಧನಾ ಕೇಂದ್ರ ಸ್ಥಾಪನೆ
ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು. ಮುಂಬರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು. ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು. ರಾಜ್ಯದ ಸುಮಾರು ಶೇ.60 ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಆಲೋಚನೆಗೀಡು ಮಾಡುವ […]
ತಂತ್ರಜ್ಞಾನ ಶೃಂಗಸಭೆ ನ.19ರಿಂದ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2020(ಬೆAಗಳೂರು ಟೆಕ್ ಸಮ್ಮಿಟ್) ಇದೇ ೧೯ ರಿಂದ 21ರವರೆಗೆ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ಈ ಬಾರಿಯ ಶೃಂಗಸಭೆಯ ವಿಷಯ ಭವಿಷ್ಯ ಈಗಲೇ(ನೆಕ್ಸ್ಟ್ ಈಸ್ ನೌ)ಎಂದು ನಿರ್ಧರಿಸಲಾಗಿದೆ ಎಂದು ಐಟಿ–ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು. ಕೋವಿಡ್‌ನಿಂದಾಗಿ ವರ್ಚುವಲ್ ಆಗಿ ನಡೆಸಬೇಕಾಗಿದೆ. ೨೫ಕ್ಕೂ ಹೆಚ್ಚು ದೇಶಗಳು ಈ ಸಭೆಯಲ್ಲಿ ಪಾಲ್ಗೊಳ್ಳಿದ್ದು. ವಿಜ್ಞಾನ, ತಂತ್ರಜ್ಞಾನ, ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ದೇಶಕ್ಕೆ ನಂಬರ್ 1 ಆಗಿದೆ. ಮುಂದಿನ […]
ಮತ್ತೆ ಗರಿಗೆದರಿದ ಬಾಹ್ಯಾಕಾಶ ಯಾನ
ಕೋವಿಡ್ ಹಿನ್ನೆಲೆಯಲ್ಲಿ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಯಾನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) 11 ತಿಂಗಳ ಬಳಿಕ ನ. 7 ರಂದು ಪಿಎಸ್ಎಲ್ವಿ ಮೂಲಕ ಇಒಎಸ್–1 ಮತ್ತು ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿಕೊಂಡಿದೆ. 2019ರ ಡಿ.11 ರಂದು ಇಸ್ರೋ ನಡೆಸಿದ ಉಪಗ್ರಹ ಉಡಾವಣೆ ಕೊನೆಯ ಉಡಾವಣೆ ಆಗಿತ್ತು. ಮಾರ್ಚ್ನಲ್ಲಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್ನಿಂದ ಉಡಾವಣೆ ಮುಂದೂಡಲಾಯಿತು. ದೇಶ ಸೇರಿದಂತೆ ಹಲವು ವಿದೇಶಿ ಉಪಗ್ರಹಗಳ ಉಡಾವಣೆಯನ್ನು ಮುಂದೂಡಿದ್ದರಿAದ, […]