ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಎರಡು ತಿಂಗಳ ಬಳಿಕ ನ.೨೦ರಂದು ದೇಶದಾದ್ಯಂತ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವನ್ನು ೧೬ ಪೈಸೆ ಹೆಚ್ಚಿಸಲಾಗಿದ್ದು, ೮೩.೯೨ ರೂಪಾಯಿಗೆ ಮಾರಾಟವಾಗಿದೆ. ಡೀಸೆಲ್ ದರ ೨೨ ಪೈಸೆ ಹೆಚ್ಚಳ ವಾಗಿದ್ದು, ೭೪.೯೧ ರೂಪಾಯಿಯಂತೆ ಮಾರಾಟವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ದಿನವೂ ಇಂಧನ ದರ ಪರಿಷ್ಕರಣೆ ಮಾಡುತ್ತವೆ. ಆದರೆ, ಕೋವಿಡ್ ಕಾರಣದಿಂದಾಗಿ ಮಾರ್ಚ್ ೧೭ರಿಂದ ಜೂನ್ ೬ರವರೆಗೆ […]
ಆನೆತಜ್ಞ ಅಜಯ್ ದೇಸಾಯಿ ನಿಧನ
ಆನೆಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿ ಹೊಸ ಆಯಾಮಗಳಿಂದ ವಿಶ್ವವನ್ನು ಅಚ್ಚರಿಗೊಳಿಸಿದ್ದ ಕನ್ನಡಿಗ ಅಜಯ್ ಎ.ದೇಸಾಯಿ(೬೪ವರ್ಷ)ಯವರು ಹೃದಯಾಘಾತದಿಂದ ಸ್ವಗೃಹದಲ್ಲಿ ಶುಕ್ರವಾರ ಅಸ್ತಂಗತರಾದರು. ಪತ್ನಿ, ಇಬ್ಬರು ಪುತ್ರರು, ಸಹೋದರಿ ಹಾಗೂ ಡಾ.ಅರವಿಂದ ದೇಸಾಯಿ ಸೇರಿದಂತೆ ಇಬ್ಬರು ಸಹೋದರರು ಅಗಲಿದ್ದಾರೆ, ಸಂಜೆ ಅಂತ್ಯಕ್ರಿಯೆ ನೆರವೇರಿತು. ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಕೊಣ್ಣೂರಿನವರು. ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನ ಪಡೆದು ಸಮವಸ್ತ್ರ ಗೌರವ ಸಲ್ಲಿಸಿದರು. ಧಾರವಾಡ ವಿ.ವಿ.ಯಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದ […]
ರಾಜ್ಯದ ಜೈವಿಕ ಆರ್ಥಿಕತೆ: ೩.೭ ಲಕ್ಷ ಕೋಟಿ ರೂ. ಗುರಿ
ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಜೈವಿಕ ಆರ್ಥಿಕತೆ(ಬಯೋ ಎಕಾನಮಿ) ಕ್ಷೇತ್ರದ ಕೊಡುಗೆಯನ್ನು ೫,೦೦೦ ಕೋಟಿ ಡಾಲರ್‌ಗಳಿಗೆ(೩.೭ ಲಕ್ಷ ಕೋಟಿ ರೂ.) ಹೆಚ್ಚಿಸಲು ಲಸಿಕೆ, ಕೃಷಿ ತಾಂತ್ರಿಕತೆ, ಜೈವಿಕ-ತಯಾರಿಕೆ ಹಾಗೂ ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆ ವಲಯಗಳಿಗೆ ಒತ್ತು ನೀಡಲಾಗುವುದು ಎಂದು ಐಟಿ–ಬಿಟಿ ಸಚಿವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕರ್ನಾಟಕ ಜೈವಿಕ ಆರ್ಥಿಕತೆ ವರದಿ-೨೦೨೦ ಅನ್ನು ಶುಕ್ರವಾರ ಬಿಡುಗಡೆ ಮಾಡಿದ ಅವರು, ವರದಿಯು ೭ ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ ಎಂದರು. […]
ಡಿಜಿಟಲ್ ಇಂಡಿಯಾದಿಂದ ಜೀವನ ಶೈಲಿ ಬದಲು
ಡಿಜಿಟಲ್ ಇಂಡಿಯಾ ದೇಶದ ಜೀವನವಿಧಾನವಾಗಿ ಬದಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ೨೩ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ಆರಂಭವಾದ ಡಿಜಿಟಲ್ ಇಂಡಿಯಾ, ಬಡವರು ಹಾಗೂ ನಿರ್ಲಕ್ಷಿತ ವರ್ಗದವರ ಜೀವನದಲ್ಲಿ ಪರಿವರ್ತನೆ ತಂದಿದೆ. ಭೀಮ್ ಪಾವತಿ ಆ್ಯಪ್ ಇದಕ್ಕೊಂದು ಸಾಕ್ಷಿ. ಡಿಜಿಟಲ್ ಇಂಡಿಯಾ ಮಾನವ ಕೇಂದ್ರಿತ ಯೋಜನೆಯಾಗಿದ್ದು, ಮನುಷ್ಯರ ಘನತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜನರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದಲ್ಲದೆ, ಸರ್ಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕೋವಿಡ್ […]
ರಿಟೇಲ್ ಉದ್ಯಮದಲ್ಲಿ ಚೇತರಿಕೆ
ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಿದ್ದ ರಿಟೇಲ್ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಈ ವಲಯದ ಪ್ರಮುಖ ಕಂಪನಿಗಳು ಹೇಳುತ್ತಿವೆ. ಲಾಕ್‌ಡೌನ್ ಬಳಿಕ ಎರಡು ತಿಂಗಳು ರೆಸ್ಟೋರೆಂಟ್ ಮುಚ್ಚಬೇಕಾಯಿತು. ವಹಿವಾಟು ನಡೆಸಲು ಸ್ವಿಗ್ಗಿಯನ್ನೇ ಅವಲಂಬಿಸಬೇಕಾಯಿತು. ಲಾಕ್‌ಡೌನ್‌ನಿಂದ ಅನಿವರ‍್ಯವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಯಿತು. ಆಗಸ್ಟ್ನಿಂದ ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕುಟುಂಬಗಳು ರೆಸ್ಟೋರೆಂಟ್‌ಗೆ ಬರುತ್ತಿವೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು. ಕಳೆದ ವರ್ಷ ಕೂಡ ರಿಟೇಲ್ ವಹಿವಾಟು ಅಷ್ಟೇನೂ ಉತ್ತಮವಾಗಿರಲಿಲ್ಲ. ಕೋವಿಡ್‌ನಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಯಿತು. ಲಾಕ್‌ಡೌನ್ ಸಡಿಲಿಕೆ ಬಳಿಕ […]
ಕೋವಿಡ್ ಲಸಿಕೆ: ಹಿರಿಯರಿಗೆ ಆದ್ಯತೆ
ಜುಲೈ-ಆಗಸ್ಟ್ ೨೦೨೧ರೊಳಗೆ ಅಂದಾಜು ೫೦ ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಆದ್ಯತೆ ಮೇರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು. ಎಫ್‌ಸಿಸಿಐ, ಎಫ್‌ಎಎಲ್‌ಒ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿ, ಮೊದಲಿಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ ವರ್ಷ ದಾಟಿದ ಹಿರಿಯ ನಾಗರಿಕರಿಗೆ, ಬಳಿಕ ೫೦ ರಿಂದ ೬೫ ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ. ಆನಂತರ ೫೦ಕ್ಕಿಂತ ಕಡಿಮೆ ವಯಸ್ಸಿನವರಿಗೆ ಆರೋಗ್ಯ ತಪಾಸಣೆ ಮಾಡಿ ಲಸಿಕೆ […]
ಲಸಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿPಯಿಂದ ೫೬-೬೯ ಹಾಗೂ೭೦ ವರ್ಷದ ಮೇಲಿನ ಆರೋಗ್ಯವಂತರಲ್ಲಿ ಪ್ರಬಲ ರೋಗನಿರೋಧಕ ಪ್ರತಿಕ್ರಿಯೆ ಕಂಡುಬAದಿದೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಪ್ರಕಾರ, ೫೬೦ ಕ್ಕೂ ಅಧಿಕ ಆರೋಗ್ಯವಂತ ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಕೋವಿಡ್‌ನಿಂದ ಹೆಚ್ಚು ಅಪಾಯಕ್ಕೊಳಗಾಗುತ್ತಿದ್ದ ೬೦ ವರ್ಷ ಮೀರಿದವರಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಮೂರನೇ ಹಂತದ ಪ್ರಯೋಗದಲ್ಲಿ ಲಸಿಕೆ ಕೋವಿಡ್‌ನ್ನು ತಡೆಯುವ ಸಾಮರ್ಥ್ಯ ಹೊಂದಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಫಲಿತಾಂಶ ಕೆಲ ವಾರಗಳಲ್ಲಿ ಬರಲಿದೆ. ಯುವಜನರಲ್ಲೂ ಲಸಿಕೆ ರೋಗನಿರೋಧಕ ಶಕ್ತಿ […]
ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಕಡಿಮೆ
ದೇಶದ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಶೇ.೨೫ರಷ್ಟಿದ್ದು, ಜಾಗತಿಕ ಪ್ರಮಾಣ ಶೇ.೪೯ ಎಂದು ವಾಧ್ವಾನಿ ಫೌಂಡೇಶನ್‌ನ ಅಧ್ಯಯನ ತಿಳಿಸಿದೆ. ಮಹಿಳಾ ಉದ್ಯಮಶೀಲತೆ ದಿನ ಎಂದು ಆಚರಿಸಲ್ಪಡುವ ನ.೧೯ರಂದು ಸಂಸ್ಥೆ ಈ ಮಾಹಿತಿ ಬಿಡುಗಡೆಗೊಳಿಸಿದೆ. ದೇಶ ಮಹಿಳಾ ಉದ್ಯಮಿಗಳ ಪ್ರತಿಭೆಯನ್ನು ಬಳಸಿಕೊಂಡಿಲ್ಲ. ಈ ದೆಸೆಯಲ್ಲಿ ಕೆಲಸ ಮಾಡುವುದು ಈಗಿನ ಅಗತ್ಯ ಎಂದು ಭಾರತ ಮತ್ತು ಇತರ ದೇಶಗಳಲ್ಲಿ ಉದ್ಯಮಶೀಲತೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿರುವ ಸಂಸ್ಥೆ ಹೇಳಿದೆ. ದೇಶದಲ್ಲಿ ಉದ್ಯಮಶೀಲತೆ ಬೆಳೆಯುತ್ತಿದ್ದರೂ, ಮಹಿಳೆಯರ ಪ್ರಮಾಣ ಕಡಿಮೆ ಇದೆ.ಗ್ರಾಮೀಣ ಪ್ರದೇಶಕ್ಕೂ […]
ಎಲ್ಲಿಂದಲಾದರೂ ಕೆಲಸಕ್ಕೆ ಶೀಘ್ರವೇ ಅವಕಾಶ: ಸಚಿವ
ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ವರ್ಕ್ ಫ್ರಮ್ ಹೋಂ ಮಾತ್ರವಲ್ಲ; ವರ್ಕ್ ಫ್ರಂ ಎನಿವೇರ್(ಮನೆಯಿಂದ ಅಲ್ಲದೆ ಎಲ್ಲಿಂದಲಾದರೂ) ಅನುಕೂಲ ಕಲ್ಪಿಸಲು ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ೨೩ ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಲಾಕ್‌ಡೌನ್ ವೇಳೆ ಸಂದರ್ಭದಲ್ಲಿ ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ, ಶೇ.೭ ರಷ್ಟು ಅಭಿವೃದ್ಧಿ ಸಾಧಿಸಿ ತೋರಿಸಿದ್ದಾರೆ. ಎಲ್ಲಿ ್ಲಂದಲಾದರೂ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ […]