Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಆನ್‌ಲೈನ್ ಕಂಟೆಂಟ್ ಮೇಲೆ ನಿರ್ಬಂಧ

ಅAತರ್‌ಜಾಲದಲ್ಲಿ ಪ್ರಸಾರವಾಗುವ ಸುದ್ದಿ, ಸಿನಿಮಾ, ಪ್ರಚಲಿತ ವ್ಯವಹಾರ ಕಾರ್ಯಕ್ರಮ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ವಿಡಿಯೋ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾನಂಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೂ ಇದು ಅನ್ವಯವಾಗಲಿದೆ. ಈ ಸಂಬಂಧ ಅಧಿಸೂಚನೆಯನ್ನು ಸಂಪುಟ ಕಾರ್ಯಾಲಯ ಹೊರಡಿಸಿದ್ದು, ಪರ-ವಿರೋಧ ವ್ಯಕ್ತವಾಗಿದೆ. ಆನ್‌ಲೈನ್ ಮಾಧ್ಯಮಗಳು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವ ವ್ಯಾಪ್ತಿಗೆ ಬರಲಿದ್ದು, ಸಂಬAಧಿಸಿದ ಕರ‍್ಯನೀತಿಯನ್ನು ಸಚಿವಾಲಯ ರೂಪಿಸಲಿದೆ. 1961ರ ನಿಯಮಗಳಿಗೆ […]

ತಯಾರಿಕಾ ವಲಯಕ್ಕೆ 2 ಲಕ್ಷ ಕೋಟಿ ಪ್ಯಾಕೇಜ್

ಹತ್ತು ಪ್ರಮುಖ ಉದ್ಯಮಗಳಿಗೆ ಉತ್ಪಾದನೆ ಆಧರಿತ ಉತ್ತೇಜನೆ ಯೋಜನೆ(ಪಿಎಲ್‌ಐ)ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೂರಸಂಪರ್ಕ,ಆಟೊಮೊಬೈಲ್,ಔಷಧೋದ್ಯಮ ಸೇರಿದಂತೆ ಹತ್ತು ಪ್ರಮುಖ ತಯಾರಿಕಾ ಕ್ಷೇತ್ರಕ್ಕೆ ಪಿಎಲ್‌ಐ ಅಡಿ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ನೀಡಲಾಗುತ್ತದೆ. ಯೋಜನೆ ದೇಶಿ ಉತ್ಪಾದನೆಗೆ ಉತ್ತೇಜನ, ಆಮದು ಪ್ರಮಾಣ ಕಡಿಮೆಗೊಳಿಸಲು ಮತ್ತು ಉದ್ಯೋಗ ಸೃಷ್ಟಿಗೆ ಇದರಿಂದ ನೆರವಾಗಲಿದೆ. ಯೋಜನೆ ದೇಶದ ತಯಾರಿಕಾ ವಲಯವನ್ನು ಸ್ಪರ್ಧಾತ್ಮಕಗೊಳಿಸಲು ಸಹಾಯ ಮಾಡಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. […]

ಲಾನಿನೊ: ರಾಜ್ಯದಲ್ಲಿ ಚಳಿ ಹೆಚ್ಚಳ

ಫೆಸಿಪಿಕ್ ಸಾಗರದಲ್ಲಿ ನೀರಿನ ಮೇಲ್ಮೆ ತಾಪಮಾನ ಕಡಿಮೆಯಾಗಿರುವುದರಿಂದ ರಾಜ್ಯದಲ್ಲಿ ಹಿಂಗಾರು ಕ್ಷೀಣಿಸಿದ್ದು, ಚಳಿ ಹೆಚ್ಚುತ್ತಿದೆ. ಫೆಸಿಪಿಕ್ ಸಾಗರದ ನಿನೊ-3 ಭಾಗದಲ್ಲಿ ನೀರಿನ ಉಷ್ಣಾಂಶ 0.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ ಹವಾಮಾನದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಲಾನಿನೊ ಎನ್ನಲಾಗುತ್ತದೆ. ಉತ್ತರದಿಂದ ಬೀಸುವ ಗಾಳಿಯಿಂದಾಗಿ ತಾಪಮಾನ ಕಡಿಮೆ ಆಗುತ್ತದೆ. ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಅತಿ ಕಡಿಮೆ ತಾಪಮಾನ ದಾಖಲಾಗುತ್ತದೆ. ಲಾನಿನೊದಿಂದ ಬೀದರ್‌ನಲ್ಲಿ ಬುಧವಾರ 7.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 , […]

ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಮುಂದೆ

ಗುತ್ತಿಗೆ ಆಧರಿತ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಮುಂಚೂಣಿಯಲ್ಲಿವೆ ಎಂದು ಟೆಕ್‌ಫೈಂಡರ್ ಕಂಪನಿಯ ಸಮೀಕ್ಷೆ ಹೇಳಿದೆ.ಕೋವಿಡ್‌ನಿಂದ ಕಂಪನಿಗಳು ಕೆಲವು ಬದಲಾವಣೆ ಮಾಡಿಕೊಂಡಿವೆ. ಇದರಿಂದ ಗುತ್ತಿಗೆ ಆಧರಿತ ಉದ್ಯೋಗಾವಕಾಶ ಹೆಚ್ಚುತ್ತಿದೆ ಎಂದು ಗುತ್ತಿಗೆ ಆಧಾರದ ಉದ್ಯೋಗ ಒದಗಿಸುವಲ್ಲಿ ಕಂಪನಿಗಳಿಗೆ ನೆರವಾಗುವ ಟೆಕ್‌ಫೈಂಡರ್ ಹೇಳಿದೆ. ಗುತ್ತಿಗೆ ಆಧರಿತ ಉದ್ಯೋಗದ ಒಟ್ಟು ಬೇಡಿಕೆಯಲ್ಲಿ ಬೆಂಗಳೂರು ಮತ್ತು ದಾವಣಗೆರೆ ಶೇ.29ರಷ್ಟು ಪಾಲು ಹೊಂದಿವೆ. ತೆಲಂಗಾಣದ ಹೈದರಾಬಾದ್ ಮತ್ತು ವಾರಂಗಲ್ ಶೇ.24, ಮಹಾರಾಷ್ಟç  ಶೇ.18, ತಮಿಳುನಾಡು ಶೇ.15 ಹಾಗೂ ದೆಹಲಿ ಶೇ.14 ಪಾಲು […]

ಕೃಷಿ ವರಮಾನ ಹೆಚ್ಚಳ ಸಾಧ್ಯತೆ: ಕ್ರಿಸಿಲ್

ಕೋವಿಡ್ ಕೃಷಿ ಚಟುವಟಿಕೆ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಇದರಿಂದ ಕೃಷಿ ವರಮಾನ ಹೆಚ್ಚಳ ನಿರೀಕ್ಷಿಸಿದ್ದು, ಟ್ರ್ಯಾಕ್ಟರ್‌ ಮಾರಾಟದಲ್ಲೂ ಏರಿಕೆ ಕಂಡುಬರಲಿದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಅಭಿಪ್ರಾಯಪಟ್ಟಿದೆ. ಟ್ರ್ಯಾಕ್ಟರ್‌ ಮಾರಾಟ ಶೇ.1ರಷ್ಟು ಕುಸಿಯಲಿದೆ ಎಂದು ಕ್ರಿಸಿಲ್ ಅಂದಾಜು ಮಾಡಿತ್ತು. ಆದರೆ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ನಿರೀಕ್ಷೆಗಿಂತ ವೇಗವಾಗಿ ಚೇತರಿಕೆ ಕಾಣಲಿದ್ದು, ಶೇ.10-12ರಷ್ಟು ಪ್ರಗತಿ ಸಾಧ್ಯವಾಗಲಿದೆ. ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಮುಂಗಾರು ಬಿತ್ತನೆ ಗರಿಷ್ಠ ಮಟ್ಟದಲ್ಲಿದೆ. ಇದರಿಂದ ಕೃಷಿ ವರಮಾನ ಹೆಚ್ಚಾಗಲಿದೆ. ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಟ್ರ್ಯಾಕ್ಟರ್‌ ಉದ್ಯಮ […]

FMGC companies gear up

Consumer goods companies are ramping up distribution in India’s smaller towns and villages, where sales are rising thanks to reverse migration, increased minimum support prices, government stimulus measures for the rural economy and a normal monsoon.  Companies are trying out new pack sizes, leveraging online sales, and customizing products to expand their reach in the […]

Air pollution commission: too little, too late?

As Delhi and adjoining areas in the National Capital Region entered into their worst season with air quality crossing the ‘severe’ mark, the Centre brought an Ordinance to set up a new ‘air pollution commission’. This is the first time the Centre has formed a legislative commission for air pollution under the Environment Protection Act […]

ಸೆನ್ಸೆಕ್ಸ್ ಆರೋಹಣ: 43 ಸಾವಿರ ದಾಟಿದ ಸೂಚ್ಯಂಕ

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಗಳಿಕೆ ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿದೆ. ತಾನು ಅಭಿವೃದ್ಧಿ ಪಡಿಸಿರುವ ಲಸಿಕೆ ಕೋವಿಡ್ ತಡೆಯುವಲ್ಲಿ ಶೇ. 90ರಷ್ಟು ಪರಿಣಾಮಕಾರಿ ಎನ್ನುವ ಫೈಝರ್ ಕಂಪನಿಯ ಹೇಳಿಕೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ ಸತತ ಏಳನೇ ವಹಿವಾಟು ಅವಧಿಯಲ್ಲೂ ಏರಿಕೆ ದಾಖಲಿಸಿದ್ದು, ಮಂಗಳವಾರ 680 ಅಂಶ ಜಿಗಿತಗೊಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 43.277 ಅಂಶ ತಲುಪಿದೆ. ಅದೇ ರೀತಿ, ರಾಷ್ಟ್ರೀಯ ಷೇರುಪೇಟೆ(ಬಿಎಸ್‌ಇ) ಸೂಚ್ಯಂಕ ನಿಫ್ಟಿ170 […]

Back To Top