ಜನ ಮರುಳೋ, ಜಾಹೀರಾತು ಮರುಳೋ!-
ಬಹುತೇಕ ಜಾಹೀರಾತು ಮಕ್ಕಳನ್ನು ಗುರಿಯಾಗಿಸಿವೆ. ಮಕ್ಕಳ ಮೇಲೆ ಪ್ರಭಾವ ಬೀರುವುದು, ಮನವೋಲಿಕೆ ಸುಲಭ. ಅವರನ್ನು ಗಿಡವಾಗಿರುವಾಗಲೇ ಬಗ್ಗಿಸಿದಲ್ಲಿ ಅಂದರೆ, ಎಳವೆಯಲ್ಲೇ ಉತ್ಪನ್ನಗಳ ಹುಲಾಮರಾಗಿಸಿದಲ್ಲಿ, ಅವರ ಜೀವಮಾನಡೀ ದಾಸರಾಗಿರುತ್ತಾರೆ. ತೊಟ್ಟಿಲಿನಿಂದ ಶವದಪೆಟ್ಟಿಗೆಯವರೆಗೆ ಎನ್ನುವ ಪದಪುಂಜ ಕಠಿಣ ಎನ್ನಿಸಬದುಹು. ಆದರೆ ಅದು ವಾಸ್ತವ. 15 ಮೇ 2018 ಸಂಚಿಕೆ-22 ಪುಟ-63
ಕಾಡು ಜನರ ಹಾಡು ಪಾಡು.
1995ರಲ್ಲಿ ಜವಹರಲಾಲ್ ನರಹರೂ ಉಷ್ಣಚಲಯ ಸಸ್ಯೋದ್ಯಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕೊನೆಯಮತ್ತೂರಿನ ರ‍್ಯ ವೈದ್ಯ ಫಾರ್ಮಸಿ ನಡುವೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದವೊAದು ಆಯಿತು. ಪಶ್ಚಿಮ ಘಟ್ಟದ ಕೆಲವೆಡೆ ಮಾತ್ರ ಲಭ್ಯವಾಗುವ ಮತ್ತು ನಿರ್ವಂಶದ ಭೀತಿ ಎದುರಿಸುತ್ತಿರುವ ಆರೋಗ್ಯ ಪಾಚ(ಟ್ರೆöÊಕೋಪಸ್ ಜೇಲ್ಯಾನ್ಸಿಯಸ್ ಎಸ್‌ಎಸ್‌ಪಿ ಟ್ರಾವಂಕೋರಿಯಸ್)ಎನ್ನುವ ಗಿಡ ಮೂಲಿಕೆಯಿಂದ ಔಷಧವನ್ನು ಉತ್ಪಾದಿಸಿ, ಮಾರಾಟ ಮಾಡುವುದು ಹಾಗೂ ಬಂದ ಲಾಭವನ್ನು ಹಂಚಿಕೊಳ್ಳುವುದು ಒಪ್ಪಂದದ ತಿರುಳು. – 01ಮೇ 2018 ಸಂಚಿಕೆ-21 ಪುಟ-66
ಕಾಡಿಗೆ ಸರ್ಕಾರದ ಹಚ್ಚಿದ ಕಿಚ್ಚು.
ಕರುಡ ಅರಣ್ಯ ನೀತಿ: ವ್ಯವಹಾರದ್ದೇ ಮೇಲುಗೈ, ಸಂರಕ್ಷಣೆಯ ನಿರ್ಲಕ್ಷö್ಯ ಯಾವ ದೃಷ್ಟಿಯಿಂದ ನೋಡಿದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ(ಎAಇಫ್‌ಸಿಸಿ)ದ ಉದ್ದೇಶಿತ ಅರಣ್ಯ ನೀತಿ ಕರಡು ಪರಿಸರ ಪೂರಕವಾಗಿ ಕಾಣುತ್ತಿಲ್ಲ. ಸರ್ಕಾರದ ದಾಖಲೆಗಳು ಅದರ ಉದ್ದೇಶ, ಆದ್ಯತೆಗಳು ಹಾಗೂ ರ‍್ಯತಂತ್ರದ ಮಾರ್ಗಸೂಚಿ ಇದ್ದಂತೆ,ಒAದು ವೇಳೆ ಹಳೆಯ ಕರ‍್ಯತಂತ್ರ ವಿಫಲಗೊಂಡಿದ್ದರೆ ಇಲ್ಲವೇ ಪರಿಸ್ಥಿತಿ ಬದಲಾಗಿದ್ದರೆ, ಅವುಗಳನ್ನು ಪುಬರ್‌ಪರಿಶೀಲನೆ ಮಾಡಬೇಕಾಗುತ್ತದೆ. – 01ಮೇ 2018 ಸಂಚಿಕೆ-21 ಪುಟ-48
ರಸ್ತೆಗೆ ಭತ್ತದ ಗದೆಗಳ ಆಪೋಷನ.
ಕಾರು ವೇಗವಾಗಿ ಓಡಿಸಲು ನಮಗೆ ಒಳ್ಳೆಯ ರಸ್ತೆಬೇಕು, ನಳವನ್ನು ತಿರುಗಿಸಿದ ತಕ್ಷಣ ನೀರು ಬರಬೇಕು, ಸ್ವಿಚ್ ಒತ್ತಿದ ತಕ್ಷಣ ದೀಪ ಬೆಳಗಬೇಕು ಈ ಎಲ್ಲ ಬೇಕುಗಳನ್ನು ಪೂರೈಸಲು ಕಾಡಿನ ನಾಶ, ವನ್ಯಜೀವಿಗಳ ಹತ್ಯೆ, ರೈತರ ಭೂಮಿ ಸ್ವಾಧೀನ ಇತ್ಯಾದಿ ನಡೆಯುತ್ತಿದೆ. – 15ಏಪ್ರಿಲ್ 2018 ಸಂಚಿಕೆ-20 ಪುಟ-66
ರೈತ ಸಂಘಟನೆಗಳು ವೋಟ್ ಬ್ಯಾಂಕ್ ಆಗಲಿ.
ಪ್ರದೇಶದ ಯಾವುದೇ ರಾಜ್ಯ/ಪ್ರಾಂತ್ಯದ ರೈತರಿರಲಿ, ಅವರ ಸಮಸ್ಯೆ ಒಂದು. ಬೆಳೆಗೆ ವೈಜ್ಞಾನಿಕ ಬೆಲೆ, ಲಾಭದಾಯಕವಾದ ಕನಿಷ್ಠ ಬೆಂಬಲ ಬೆಲೆಯಲ್ಲಿ ಉತ್ಪನ್ನ ಖರೀದಿ, ಒಳಸುರಿಗಳ ಬೆಲೆ ಕಡಿತ, ಅಗತ್ಯ ಸಮಯದಲ್ಲಿ ಸಾಲ ಸೌಲಭ್ಯ. ಮಂಡಸೂರಿನ ರೈತರು ಕೇಳಿದ್ದು ಅದನ್ನೇ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಗೋಲಿಬಾರ್ ಬಳಿಕ ಎಂದಿನAತೆ ಪರಿಹಾರ ಘೋಷಣೆ, ಸಮಸ್ಯೆ ಬಗೆಹರಿಸುವ ಭರವಸೆ… – 01 ಏಪ್ರಿಲ್ 2018 ಸಂಚಿಕೆ-19 ಪುಟ-66
ಮರದ ದತ್ತು ಅರಣ್ಯ ಸಂರಕ್ಷಣೆ ಮಾಡುವುದೇ?
ಕರ್ನಾಟಕದಲ್ಲಿ ಅರಣ್ಯದ ವಿಸ್ತೀರ್ಣ ಹೆಚ್ಚಳಗೊಂಡಿದೆ ಎಂದು ಸರ್ಕಾರದ ಇಲಾಖೆಯ ವರದಿಯೊಂದು ಹೇಳಿದೆ. ಅದನ್ನು ಎಷ್ಟು ನಂಬಬೇಕೋ ಗೋತ್ತಿಲ್ಲ. ಸರ್ಕಾರಗಳ ಮರ ನೆಡುವಿಕೆ ಕಾರ್ಯಕ್ರಮಗಳು ಕಡತದಲ್ಲಿ ಮಾತ್ರವಿದ್ದು, ಬಿಡುಗಡೆಯಾದ ಅನುದಾನ ಅಂತರ್ಧಾನವಾಗುವುದು ಮಾತ್ರ ಖಚಿತ. ಸಮೂಹದ ಪಾಲ್ಗೋಳ್ಳುವಿಕೆ ಇಲ್ಲದ ಇಂಥ ಯೋಜನೆಗಳ ಬಗ್ಗೆ ಜನರಿಗೆ ಉತ್ಸಾಹ ಗುಟ್ಟುವುದೇ ಇಲ್ಲ. -15ಮಾರ್ಚ್ 2018 ಸಂಚಿಕೆ-18 ಪುಟ-66
ಏತ್ತು ಏರಿಗೆ ಎಳೆದರೆ ಕೋಣ ನೀರಿಗೆ..-
ಕೇಂದ್ರ ಪರಿಸರ ಮಂತ್ರಾಲಯ ಎರಡು ವರ್ಷಕ್ಕೊಮ್ಮೆ ಅರಣ್ಯ ವರದಿ(ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್)ಯನ್ನು ಪ್ರಕಟಿಸುತ್ತದೆ. ಉಪಗ್ರಹದ ನೆರವಿನಿಂದ ಸಿದ್ಧ ಈ ವರದಿ ಪ್ರಕಾರ, ದೇಶದ ಶೇ.೨೪ರಷ್ಟು ಭೂಪ್ರದೇಶದಲ್ಲಿ ಅರಣ್ಯ ಇಲ್ಲವೇ ಮರಗಳು ಇವೆಯಂತೆ. ಎರಡು ವರ್ಷಗಳ ಮಾಹಿತಿ ಅರಣ್ಯ ಪ್ರದೇಶ ಶೇ.೧ರಷ್ಟು ಹೆಚ್ಚಳ ಆಗಿದೆ ಎನ್ನುತ್ತದೆ ವರದಿ. 01ಮಾರ್ಚ್ 2018 ಸಂಚಿಕೆ-17 ಪುಟ-66
ವಾಯು ಮಾಲಿನ್ಯಕ್ಕೆ ಚೀನಾದ ಉತ್ತರ.
ಚೀನಾ ಹಿಂದಿನ ನಾಲ್ಕು ರಾಜ್ಯಧಾನಿಗಳಲ್ಲಿ ಒಂದಾದ ಕ್ಸಿಯಾನ್, ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ದ.ಇದರಲ್ಲಿ ಅತ್ಯಂತ ಪ್ರಸಿದ್ಧಿ ಒಡೆದಿರುವುದು ನಲವತ್ತು ಮೀಟರ್ ಎತ್ತರದ ಕಂಚಿನ ಗಂಟೆಗಳನ್ನುಳ್ಳ ಗಂಟೆ ಗೋಪುರ. ಸಂಜೆ ಆದ ತಕ್ಷಣ ಗಂಟೆ ಬಾರಿ ಸುತ್ತದೆ. ಹದಿನಾಲ್ಕನೇ ಶತಮಾನದಲ್ಲಿ ಪುರಾತನ ರೇಷ್ಮೆ ಮಾರ್ಗದ ಆರಂಭ ಸ್ಥಳವಾಗಿತ್ತು ಈ ಗೋಪುರ. […]
ಬರುವ ಚುನಾವಣೆಯಲ್ಲಿ ರೈತನೇ ನಿರ್ಣಾಯಕ.
ಕಳೆದ ವರ್ಷ ದಿಲ್ಲಿಯಲ್ಲಿ ಒಂದು ಮುಂಜಾವು, ಎಲ್ಲೆಲ್ಲೂ ರೈತರ ತಲೆಗಳೇ ಕಾಣಿಸುತ್ತಿದ್ದವು. ಅವಾವುದಕ್ಕೂ ಜೀವವಿರಲಿಲ್ಲಿ. ೨೦೧೭ರ ಏಪ್ರಿಲ್ ಹಾಗೂ ಜುಲೈನ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ರುಂಡಗಳನ್ನು ತಮಿಳುನಾಡಿನ ರೈತರು ತೆಗೆದುಕೊಂಡು ಬಂದು ರಾಜಧಾನಿಯ ನಟ್ಟನಡುವೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. – 15ಫೆಬ್ರವರಿ2018 ಸಂಚಿಕೆ-16 ಪುಟ-30