ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡ ವಿದ್ವಾಂಸ, ಭಾಷಾ ವಿಜ್ಞಾನಿ, ವಿಮರ್ಶಕ ಪ್ರೊ.ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಅವರ ‘ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ 1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಕೆವಿ ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓಎಲ್ ನಾಗಭೂಷಣಸ್ವಾಮಿ, ಡಾ.ಹಳೆಮನಿ ನಾಗರಾಜ್ ಮತ್ತು […]
ಬೆಳಕಿನಲಿ ಪ್ರಕಾಶಿಸುವ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’
ಶಾಂತಾರಾಮ ನಾಯಕ, ಹಿಚಕಡ ಹಸಿರು ಸಿರಿಯ ಕಣಜ ಅಚವೆಯ ಸುಂದರ ಪರಿಸರದ ರಸ ರೋಮಾಂಚನಗೊಳಿಸುವ ವಿಭೂತಿ ಜಲಪಾತದ ಧುಮ್ಮಿಕ್ಕುವ ಬೆಳ್ನೊರೆಯ ಜಲಧಾರೆಯ ನಡುವಿಂದ ಕವಿ ಫಾಲ್ಗುಣ ಗೌಡರ ಕಾವ್ಯಧಾರೆ ಹರಿದು ಬಂದು ಓದುಗರ ಮನ ತಣಿಸಿದೆ. ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನ ಹೆಮ್ಮೆಯ ಕವಿ ಪ್ರಿಯ ಜಯಂತ ಕಾಯ್ಕಿಣಿಯವರು ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನಕ್ಕೆ ಮನ್ನುಡಿಯ ಕಿರೀಟ ತೊಡಿಸಿ ‘ಬಿಡುಗಡೆ ಮಾಡಿ ತುಂಬಾ ಪ್ರೀತಿ ಅಭಿಮಾನದಿಂದ ಮುನ್ನುಡಿಯ ಶಿಫಾರಸು ನೀಡಿರುವರು. ಅದು ಒಂದು ಮೋಹಕ […]
ಮೋಹಕತೆಯಾಚೆಗಿನ ಕವಿತೆಗೆ ಕೈಚಾಚಿದ ಧ್ಯಾನ
ವೆಂಕಟ್ರಮಣ ಗೌಡ “ಈ ಚಿಟ್ಟೆ ಕಾಡಿದ ಹಾಗೆ” ಸುಚಿತ್ರಾ ಹೆಗಡೆ ಅವರ ಕವಿತೆಗಳ ಮೊದಲ ಸಂಕಲನ. ಅದೇ ಹೆಸರಿನ ಕವಿತೆಯ ಪ್ರಸ್ತಾಪದೊಂದಿಗೆ ಈ ಪುಸ್ತಕದ ಕುರಿತು ಕೆಲವು ಮಾತುಗಳನ್ನು ಹೇಳಲು ನನಗೆ ಇಷ್ಟ. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಕನ್ನಡ ಕಾವ್ಯವನ್ನು ಎಂದೆಂದೂ ಆವರಿಸಿಕೊಂಡೇ ಇರುವ ದಿವ್ಯ. ‘ಪಾತರಗಿತ್ತಿ ಪಕ್ಕ ನೋಡಿದ್ಯೇನ ಅಕ್ಕ’ ಎಂದು ಶುರುವಾಗುವ ಅದು, ‘ಗಾಳಿ ಕೆನೀಲೇನ ಮಾಡಿದ್ದಾರ ತಾನ’ ಎಂದು ವಿಸ್ತರಿಸಿಕೊಳ್ಳುತ್ತ, ಕೊನೆಗೆ ‘ಇನ್ನು ಎಲ್ಲಿಗೋಟ? ನಂದನದ ತೋಟ!’ ಎಂದು ಅನೂಹ್ಯವಾದುದರ, ಅತೀತವಾದುದರ ಕಡೆಗೆ […]
ಉಮೇಶ ನಾಯ್ಕರ ಕವಿತೆಗಳು: ನಿಷ್ಕಳಂಕ ಜಗಳದಲ್ಲಿನ ನಿಶ್ಚಯ
ವೆಂಕಟ್ರಮಣ ಗೌಡ ‘ಕತ್ತಲ ಧ್ಯಾನಿಸಿದ ನಂತರ’ ಉಮೇಶ ನಾಯ್ಕ ಅವರ ಎರಡನೇ ಕವನ ಸಂಕಲನ (ಪ್ರಕಟಣೆ ವರ್ಷ: 2021). ಇದಕ್ಕೂ 9 ವರ್ಷಗಳ ಕೆಳಗೆ ಅವರ ಮೊದಲ ಸಂಕಲನ ‘ಪೂರ್ಣ ಸತ್ಯವಲ್ಲ ರಸ್ತೆಗಳು’ (2012) ಪ್ರಕಟವಾಗಿತ್ತು. ಮೊದಲನೆಯದರಲ್ಲಿ 40 ಮತ್ತು ಎರಡನೆಯ ಸಂಕಲದಲ್ಲಿ 45 ಕವಿತೆಗಳಿವೆ. ‘ಲೆಕ್ಕಕ್ಕೆ ಅಷ್ಟಾಗಿವೆ’ ಎಂದು ತಮ್ಮನ್ನು ತಾವೇ ಅಣಕಿಸಿಕೊಂಡು ನಕ್ಕುಬಿಡುವ ಜಾಯಮಾನ ಅವರದು. ಹೊಸ ಸಂಕಲನದ ನೆಪದಲ್ಲಿ ಅವರ ಒಟ್ಟಾರೆ ಕವಿತೆಗಳ ಬಗ್ಗೆ ಬರೆಯುವುದು ಇಲ್ಲಿ ನನ್ನ ಉದ್ದೇಶ. ನನ್ನ ಮತ್ತು […]