‘ನಮ್ಮ ಕಾರ್ಗೋ’ ಸೇವೆ ಹಾಗೂ ರಕ್ತದಾನದ ಬಸ್‌ಗೆ ಸಿಎಂ ಚಾಲನೆ
ಬೆಂಗಳೂರು,ಫೆ.26- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೂತನ ಪಾರ್ಸಲ್ ಕಾರ್ಗೊ ಸೇವೆ ಮತ್ತು ಕೆಎಸ್‍ಆರ್‍ಟಿಸಿ, ಕಿದ್ವಾಯಿ, ರೋಟರಿ ಸಹಯೋಗದೊಂದಿಗೆ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗೊ ಸೇವೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಆದಾಯವನ್ನು ಕಂಡುಕೊಂಡಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು. ರಾಜ್ಯದ ಕೆಎಸ್‍ಆರ್‍ಟಿಸಿ ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಪ್ರತಿದಿನ 51 ಲಕ್ಷ ಕಿ.ಮೀ […]




