ವೀಳ್ಯದೆಲೆಯ ಬೆಲೆ ಏರಿಕೆ
ವೀಳ್ಯದೆಲೆ ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಕಟ್ಟು(100 ಎಲೆಗಳು) ದರ 80 ರೂ. ತಲುಪಿತ್ತು. ಕೊರೊನಾ ಬಂದಾಗಿನಿAದಲೂ ಖರೀದಿಸುವವರಿಲ್ಲದೆ ರೈತರು ನಷ್ಟದಲ್ಲಿ ಪರದಾಡುದ್ದರು. ಈ ವರ್ಷ ಬೆಳೆಗಾರರಿಗೆ ಸಿಕ್ಕ ಹೆಚ್ಚಿನ ಬೆಲೆ ಇದು, ಚಳಿಗಾಲವಾಗಿದ್ದು ಕುಡಿಗಳನ್ನು ನೆಲಕ್ಕೆ ಹರಡುವುದರಿಂದ ವೀಳ್ಯದೆಲೆ ಇಳುವರಿ ಕುಸಿಯುತ್ತದೆ. ಈ ಸಮಯದಲ್ಲಿ ಬೆಲೆ ಹೆಚ್ಚಾಗುವುದು ಸರ್ವೇ ಸಾಮಾನ್ಯ ಎನ್ನುತ್ತಾರೆ ಬೆಳೆಗಾರು. ಹಳ್ಳಿ ಮರುಕಟ್ಟೆಗಳಲ್ಲಿ ಮಧ್ಯವರ್ತಿಗಳು ಇಲ್ಲದೇ ರೈತರೇ ನೇರವಾಗಿ ಮಾರಾಟ ಮಾಡುತ್ತಾರೆ. ತುಮಕೂರು, ಶಿರಾ, ಗುಬ್ಬಿ, ಮಧುಗಿರಿ ಸೇರಿದಂತೆ ವಿವಿಧ ಕಡೆಯ ಖರೀದಿದಾರರು ಬರುತ್ತಾರೆ. […]




