State govts may use bank guarantees to buy vaccine

The Centre has advised the state governments to explore using bank guarantees to finance the cost of buying Covid-19 vaccines. Taking the cue, some of the states have broached the idea with the pharmaceutical companies manufacturing them. These guarantees will offer the states the option to spread the cost of paying for the vaccines over […]

ವಾಟ್ಸ್ಆ್ಯಪ್‌ನಿಂದ ಆರೋಗ್ಯ ವಿಮೆ

ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ವಿಮೆಯನ್ನು ವಾಟ್ಸ್ಆ್ಯಪ್ ಮೂಲಕ ಖರೀದಿಸುವ ಸೌಲಭ್ಯ ತಿಂಗಳಾAತ್ಯ ಲಭ್ಯವಾಗಲಿದೆ. ಎಸ್‌ಬಿಐ ಜನರಲ್ ಆರೋಗ್ಯ ವಿಮೆ ಖರೀದಿ ವರ್ಷಾಂತ್ಯ ಲಭ್ಯವಾಗಲಿದೆ. ಎಚ್‌ಡಿಎಫ್‌ಸಿ ಪಿಂಚಣಿ ಮತ್ತು ಪಿನ್‌ಬಾಕ್ಸ್ ಜೊತೆ ಒಪ್ಪಂದ ಮಾಡಿಕೊಂಡು, ನಿವೃತ್ತಿ ನಂತರದ ಬದುಕಿಗೆ  ಉಳಿತಾಯದ ಸೌಲಭ್ಯವನ್ನೂ ನೀಡಲಾಗುವುದು. ಭಾರತದ ಬಳಕೆದಾರರಿಗೆ ನಾನಾ ಹಣಕಾಸು ಸೇವೆಗಳನ್ನು ಒದಗಿಸುವ ಪ್ರಯತ್ನದ ಒಂದು ಭಾಗ ಇದು ಎಂದು ವಾಟ್ಸ್ಆ್ಯಪ್ ತಿಳಿಸಿದೆ. 40 ಕೋಟಿಗಿಂತ ಅಧಿಕ ಬಳಕೆದಾರರಿರುವ ಭಾರತ ಅತಿ ದೊಡ್ಡ ಮಾರುಕಟ್ಟೆ. ಸರಳ, ವಿಶ್ವಾಸಾರ್ಹ ಹಾಗೂ […]

ವರ್ಷಕ್ಕೆ ನಾಲ್ಕು ಬಾರಿ ಜೆಇಇ

2021ರಿಂದ ವರ್ಷದಲ್ಲಿ ನಾಲ್ಕು ಬಾರಿ ಜೆಇಇ(ಮುಖ್ಯ ಪರೀಕ್ಷೆ) ಆಯೋಜಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಅಂಕ ಗಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ. ಕನ್ನಡ, ತಮಿಳು, ತೆಲುಗು ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಯುತ್ತದೆ. ೨೦೨೧ರ ಮೊದಲ ಜೆಇಇ (ಮುಖ್ಯ ಪರೀಕ್ಷೆ) ಫೆ.೨೩ರಿಂದ ೨೬ರವರೆಗೆ ನಡೆಯಲಿದೆ ಎಂದರು. Courtesyg: Google (photo)

ಡಿಜಿಟಲ್ ಹಬ್‌ಗೆ ಫಿಯಟ್ ಹೂಡಿಕೆ

ಫಿಯಟ್ ಕ್ರಿಸ್ಲರ್‌ ಆಟೊಮೊಬೈಲ್ಸ್ ಕಂಪನಿ ಹೈದರಾಬಾದ್‌ನಲ್ಲಿ ಜಾಗತಿಕ ಡಿಜಿಟಲ್ ಕೇಂದ್ರ ಸ್ಥಾಪನೆಗೆ 1,103 ಕೋಟಿ ರೂ.ಹೂಡಿಕೆ ಮಾಡಲಿದೆ. ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಕೇಂದ್ರವನ್ನು ಬಳಸಿಕೊಳ್ಳುವುದಾಗಿ ಕಂಪನಿ ಹೇಳಿದೆ. ಉತ್ತರ ಅಮೆರಿಕದ ಹೊರಗಿನ ಅತಿ ದೊಡ್ಡ ಡಿಜಿಟಲ್ ಕೇಂದ್ರ ಇದಾಗಲಿದ್ದು, ಒಂದು ಸಾವಿರ ಉದ್ಯೋಗ ಸೃಷ್ಟಿಸಲಿದೆ. ಕಂಪನಿಯ ಜಾಗತಿಕ ತಂಡದ ಭಾಗವಾಗಿ ಹೈದರಾಬಾದ್‌ನ ಕೇಂದ್ರ ಕಾರ್ಯಾಚರಣೆ ನಡೆಸಲಿದ್ದು, ದೇಶದ ಅತ್ಯುತ್ತಮ ಡಿಜಿಟಲ್ ಪ್ರತಿಭೆಗಳನ್ನು ಆಕರ್ಷಿಸಲಿದೆ ಎಂದು ಎಫ್‌ಸಿಎ ಉತ್ತರ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ಸಿಐಒ ಮಮತಾ […]

ಮಾನವ ಅಭಿವೃದ್ಧಿ ಸೂಚ್ಯಂಕ: ಕಳಪೆ ಸಾಧನೆ

ವಿಶ್ವಸಂಸ್ಥೆಯ 2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶ 129 ರಿಂದ 130ನೇ ಸ್ಥಾನಕ್ಕೆ ಕುಸಿದಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ಗರಿಷ್ಠ ಅಂಕ ೧. ದೇಶ 0.645 ಅಂಕ ಪಡೆದಿದೆ. 2019ರಲ್ಲಿ 0.647 ಅಂಕ ಪಡೆದಿತ್ತು. ದೇಶ ಮಧ್ಯಮ ಅಭಿವೃದ್ಧಿಯ ದೇಶಗಳ ವರ್ಗದಲ್ಲಿದೆ. 2018ರಲ್ಲಿ 0.431 ಅಂಕ ಪಡೆದಿದ್ದರಿಂದ ಕಡಿಮೆ ಅಭಿವೃದ್ಧಿ ವಿಭಾಗದಲ್ಲಿ ಗುರುತಿಸಿಕೊಂಡಿತ್ತು. ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ವರದಿಯಲ್ಲಿ ಈ ಮಾಹಿತಿ ಇದೆ. Courtesyg: Google (photo)

ಅಡುಗೆ ಅನಿಲ ದರ ಮತ್ತೆ ಏರಿಕೆ

ಅಡುಗೆ ಅನಿಲ(ಎಲ್‌ಪಿಜಿ)ದ ದರ ಪ್ರತಿ ಸಿಲಿಂಡರ್‌ಗೆ 50 ರೂ. ಏರಿಕೆಯಾಗಿದೆ. ಇದು ಹಾಲಿ ತಿಂಗಳಿನಲ್ಲಿ ನಡೆದ ಎರಡನೆಯ ದರ ಏರಿಕೆ. 14.2 ಕೆಜಿ ಸಬ್ಸಿಡಿರಹಿತ ಸಿಲಿಂಡರ್ ದರ 644 ರಿಂದ 694 ರೂ.ಗೆ ಏರಿಕೆಯಾಗಿದೆ. ಡಿಸೆಂಬರ್ 1ರಂದು ದರ 50 ರೂ. ಹೆಚ್ಚಳ ಆಗಿತ್ತು. ೫ ಕೆಜಿ ಸಿಲಿಂಡರ್ 18 ರೂ. ಹಾಗೂ 19 ಕೆಜಿ ಸಿಲಿಂಡರ್ ದರ 36.50 ರೂ. ರಷ್ಟು ಹೆಚ್ಚಾಗಿತ್ತು. ವಿಮಾನ ಇಂಧನ ದರ ಶೇ.೬.೩ರಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಪ್ರತಿ ಕಿಲೊ ಲೀಟರಿಗೆ […]

ಚಿನ್ನ, ಬೆಳ್ಳಿ ದರ ಏರಿಕೆ

ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ದರ ಹೆಚ್ಚಳಗೊಂಡಿದೆ. 10 ಗ್ರಾಂ ಚಿನ್ನದ ದರ 215ರೂ. ಹೆಚ್ಚಾಗಿದ್ದು, 49,059 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆಜಿಗೆ 1,185ರೂ. ಏರಿಕೆಯಾಗಿದ್ದು, 64,822 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. Courtesyg: Google (photo)

ಷೇರು ಮಾರುಕಟ್ಟೆ ಸೂಚ್ಯಂಕದ ನಾಗಾಲೋಟ

ಷೇರು ಮಾರುಕಟ್ಟೆ ಸೂಚ್ಯಂಕಗಳು ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆ ಮಾತ್ರವಲ್ಲದೆ, ಮುಂಬೈ ಷೇರು ಪೇಟೆಯಲ್ಲಿ ಕೂಡ ಭರ್ಜರಿ ವಹಿವಾಟು ನಡೆಯಿತು. ಬಿಎಸ್‌ಇ ಸೆನ್ಸೆಕ್ಸ್ 403 ಅಂಶ ಏರಿಕೆ ಕಂಡು, ದಿನದ ಅಂತ್ಯಕ್ಕೆ 46,666 ಹಾಗೂ ನಿಫ್ಟಿ ಸೂಚ್ಯಂಕ 114 ಅಂಶ ಜಿಗಿದು, 13,682ರಲ್ಲಿ ಕೊನೆಗೊಂಡಿತು. ಬಿಎಸ್‌ಇ ಮತ್ತು ನಿಫ್ಟಿ ಗುರುವಾರದ ಕೊನೆಯಲ್ಲಿ ದಾಖಲೆಯ ಮಟ್ಟ ತಲುಪಿವೆ. ಎಚ್‌ಡಿಎಫ್‌ಸಿ, ಒಎನ್‌ಜಿಸಿ, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಟೈಟಾನ್, ಟಿಸಿಎಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು […]

ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ

ನವೀಕರಿಸಬಹುದಾದ ಇಂಧನದಿAದ ಬಡತನ ನಿವಾರಣೆ ಸಾಧ್ಯವಾಗಲಿದೆ. ಇದನ್ನು ಆರೋಗ್ಯ, ಶಿಕ್ಷಣ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾ ನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಇಂಧನದ ಆವಿಷ್ಕಾರಕ್ಕೆ ವೇದಿಕೆ ಒದಗಿಸಲು ಸೆಲ್ಕೊ ಫೌಂಡೇಷನ್ ಪ್ರಾರಂಭಿಸಿರುವ ಗ್ಲೋಬಲ್ ಎಸ್‌ಡಿಜಿ೭ ಹಬ್ಸ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಧನಕ್ಕೆ ಬೇಡಿಕೆ ದಿನೇದಿನೇ ಹೆಚ್ಚುತ್ತಿದ್ದು, ಕೆಲವೇ ವರ್ಷಗಳಲ್ಲಿ ಪಳೆಯುಳಿಕೆ ಇಂಧನ ಬರಿದಾಗಲಿದೆ. ಗ್ರಾಮೀಣ ಬಡಜನರನ್ನು ಮೇಲಕ್ಕೆತ್ತುವ ಯೋಜನೆಗಳಿಗೆ ಬೆಂಬಲ ನೀಡಬೇಕಿದೆ. ನವೀಕರಿಸಬಹುದಾದ […]

Back To Top