ಬ್ರಿಟನ್‌ನಿಂದ ಬಂದವರಲ್ಲಿ ಕೋವಿಡ್ ಪತ್ತೆ
ಹೊಸ ಸ್ವರೂಪದ ಕೊರೊನಾ ಕಾಣಿಸಿಕೊಂಡಿರುವ ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ 10 ಮಂದಿ ಕೋವಿಡ್ ಬಂದಿರುವುದು ದೃಢಪಟ್ಟಿದೆ. ಅಲ್ಲಿಂದ ಮರಳಿದವರಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 14 ಜನರ ಪೈಕಿ ಐವರು ಶಿವಮೊಗ್ಗದವರಾಗಿದ್ದು, ಚಿಕ್ಕಮಗಳೂರಿನ ಎರಡು ವರ್ಷದ ಮಗು ಹಾಗೂ ಪುರುಷರೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಉಳಿದವರು ಬೆಂಗಳೂರಿನವರಾಗಿದ್ದಾರೆ. ಅಲ್ಲಿಂದ ಬಂದವರಲ್ಲಿ ಈವರೆಗೆ ಒಟ್ಟು 1,419 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. 744 ಮಂದಿಗೆ ಸೋಂಕು ತಗುಲಿಲ್ಲ ಎಂದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 661 ಮಂದಿ ವರದಿಗೆ ಎದುರು ನೋಡುತ್ತಿದ್ದಾರೆ. […]




