ಬೌನ್ಸ್ನಿಂದ 4000 ಇವಿ ವಾಹನ
ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ನವೋದ್ಯಮ ಕಂಪನಿ ಬೌನ್ಸ್, ಫೆಬ್ರವರಿಗೆ ಮುನ್ನ ನಾಲ್ಕು ಸಾವಿರ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಸೇವೆಗೆ ಮುಕ್ತಗೊಳಿಸುತ್ತೇನೆ ಎಂದು ಹೇಳಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಬೌನ್ಸ್ ಕಂಪನಿ ಸೇವೆಗೆ ಸಿದ್ಧಗೊಳಿಸಿರುವ ದ್ವಿಚಕ್ರ ವಾಹನಗಳ ಪೈಕಿ ಶೇ.೫೦ರಷ್ಟು ವಿದ್ಯುತ್ ಚಾಲಿತ. 2021ರಲ್ಲಿ ಸಾಂಪ್ರದಾಯಿಕ ಇಂಧನ ಬಳಸುವ ದ್ವಿಚಕ್ರ ವಾಹನಗಳ ಸೇವೆಯನ್ನು ಪೂರ್ತಿಯಾಗಿ ನಿಲ್ಲಿಸಿ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಮಾತ್ರ ಸೇವೆಗೆ ಲಭ್ಯವಾಗಿಸುವ ಗುರಿ ಹೊಂದಿದೆ. ಕೋವಿಡ್ ವೇಳೆಯನ್ನು ನಮಗೆ ಪ್ರಯೋಜನವಾಗುವಂತೆ ಬಳಸಿಕೊಂಡೆವು. […]




