ಹವಾಮಾನ ಬದಲಾವಣೆ ಎಂಬ ತೂಗು ಕತ್ತಿ ಪ್ಯಾರಿಸ್ ಒಪ್ಪಂದಕ್ಕೆ ಐದರ ಹರೆಯ
-ಮಾಧವ ಐತಾಳ್ ಜಗತ್ತಿನ 196 ದೇಶಗಳು ಐತಿಹಾಸಿಕ ಎನ್ನಬಹುದಾದ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ, ಐದು ವರ್ಷ ಸಂದಿದೆ. ಈ ದೇಶಗಳು ಜಾಗತಿಕ ತಾಪಮಾನ ಹೆಚ್ಚಳ 2100ರೊಳಗೆ 2 ಡಿಗ್ರಿ ಸೆಲ್ಸಿಯಸ್ ದಾಟದಂತೆ ನೋಡಿಕೊಳ್ಳಲು ಸಮ್ಮತಿಸಿದವು ಹಾಗೂ ಉಷ್ಣತೆ ಹೆಚ್ಚಳವನ್ನು ಕೈಗಾರಿಕಾ ಕ್ರಾಂತಿಯ ಮೊದಲಿಗಿಂತ 1.5ಡಿಗ್ರಿ ಸೆಲ್ಸಿಯಸ್ ಒಳಗೆ ಇರಿಸಲು ಪ್ರಯತ್ನಿಸುವುದಾಗಿ ಹೇಳಿಕೊಂಡವು. ಪ್ಯಾರಿಸ್ ಒಪ್ಪಂದ ಒಂದೆರಡು ದಿನದಲ್ಲಿ ಆಗಿದ್ದಲ್ಲ. ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಜಗತ್ತಿನಲ್ಲಿ 196 ದೇಶಗಳು 2016ರ ಡಿಸೆಂಬರ್ […]




