New space policy may take local companies global: Sivan

India will draft a new space policy aimed at increasing private investments in the country’s space sector to build companies that are global in scale, Indian Space Research Organisation (Isro) chairman K Sivan told ET. The proposed regulations will be in addition to specific policies planned for launch vehicles, satellite navigation, human space mission and […]

ಮೂರು ದಿನ ಮಳೆ ಸಾಧ್ಯತೆ

ತುಂತುರು ಮಳೆ ಮತ್ತು ತಂಪಾದ ಗಾಳಿಯಿಂದ ಬೆಂಗಳೂರು ಗಡಗುಟ್ಟುತ್ತಿದೆ. ಎರಡು ದಿನದಿಂದ ಬಿಸಿಲು ಕಾಣೆಯಾಗಿದೆ. ಸಾಮಾನ್ಯವಾಗಿ 28 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆ.ಗೆ ಇಳಿಕೆಯಾಗಿದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆ.ಇತ್ತು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಳೆಯಾಗಲಿದ್ದು, ಇಬ್ಬನಿಯೂ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದ ಪ್ರಭಾವ ಈ ವಾತಾವರಣಕ್ಕೆ ಕಾರಣ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. Courtesyg: Google […]

ವಾಯುಮಾಪನ ಕೇಂದ್ರ ಕಡ್ಡಾಯಗೊಳಿಸಿದ ಎನ್‌ಜಿಟಿ

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಕೇಂದ್ರ ಇರಬೇಕು.ಇಂಥ ಕೇಂದ್ರಗಳನ್ನು ಮೂರು ತಿಂಗಳೊಳಗೆ ಸ್ಥಾಪಿಸಬೇಕು  ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ನ್ಯಾ. ಆದರ್ಶ ಕುಮಾರ್ ಗೋಯಲ್ ಅವರ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ, ಗಾಳಿಯ ಗುಣಮಟ್ಟ ಪರಿಶೀಲನೆ ವ್ಯವಸ್ಥೆ ಇಲ್ಲದಿರುವ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಮನುಷ್ಯರು ನಿರ್ವಹಿಸುವ ನಿಗಾ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿಗಾ ವ್ಯವಸ್ಥೆಯನ್ನು ಆರಂಭಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜವಾಬ್ದಾರಿ. ಗಾಳಿಯ ಗುಣಮಟ್ಟ ಸೂಚ್ಯಂಕ, ಪಿಎಂ(ಮಲಿನ ಕಣ) […]

ಎಚ್‌ಡಿಎಫ್‌ಸಿಯ ಡಿಜಿಟಲ್ ಸೇವೆಗೆ ತಡೆ

ಡಿಜಿಟಲ್ ಬ್ಯಾಂಕಿಂಗ್‌ನ ಯಾವುದೇ ಹೊಸ ಉಪಕ್ರಮಗಳನ್ನು ಜಾರಿಗೊಳಿಸದಂತೆ ಎಚ್‌ಡಿಎಫ್‌ಸಿಗೆ ಆರ್‌ಬಿಐ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ನ.೨೧ರಂದು ಎಚ್‌ಡಿಎಫ್‌ಸಿಯ ಇಂಟರ್‌ನೆಟ್/ಮೊಬೈಲ್ ಬ್ಯಾಂಕಿಂಗ್‌ನ ಮತ್ತು ಇನ್ನಿತರ ಪಾವತಿ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ನ ಡಿಜಿಟಲ್ ಸೇವೆಗಳಲ್ಲಿ ಸಮಸ್ಯೆ ಆಗುತ್ತಿದೆ. ದತ್ತಾಂಶ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ ನ. ೨೧ರಂದು ಸಮಸ್ಯೆಯುಂಟಾಗಿದೆ. ತಡೆರಹಿತ ಡಿಜಿಟಲ್ ಸೇವೆ ನೀಡಲು ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್  ತಿಳಿಸಿದೆ. Courtesyg: Google (photo)

ಕೆನರಾ ಬ್ಯಾಂಕ್: ಠೇವಣಿ ಬಡ್ಡಿ ಹೆಚ್ಚಳ

ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.2ರಷ್ಟು ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿ ದರ ನ.೨೭ ರಿಂದಲೇ ಅನ್ವಯಿಸಲಿವೆ ಎಂದು ತಿಳಿಸಿದೆ.ಎರಡರಿಂದ ಮೂರು ವರ್ಷ ಒಳಗಿನ ನಿಶ್ಚಿತ ಠೇವಣಿಗೆ ಶೇ.5.4,  ಮೂರರಿಂದ 10 ವರ್ಷ ಅವಧಿಗೆ ಶೇ.5.5ಕ್ಕೆ ಏರಿಕೆಯಾಗಿದೆ. ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚು ಬಡ್ಡಿ ಸಿಗಲಿದೆ . Courtesyg: Google (photo)

ಆನೆಗಳು ಮಾರಾಟಕ್ಕಿವೆ!

ಹೆಚ್ಚುತ್ತಿರುವ ಆನೆಗಳ ಸಂತತಿಗೆ ಕಡಿವಾಣ ಹಾಕಲು, ಬರ ಪರಿಸ್ಥಿತಿ ಹಿನ್ನೆಲೆಯಲಲಿ ಆಹಾರ ಕೊರತೆ ಮತ್ತು ಮಾನವರ ಜೊತೆ ಸಂಘರ್ಷ ಹೆಚ್ಚಳದ ಹಿನ್ನೆಲೆಯಲ್ಲಿ ನಮೀಬಿಯಾ ಸರ್ಕಾರ 170 ಆನೆಗಳ ಮಾರಾಟಕ್ಕೆ ಮುಂದಾಗಿದೆ. ಆಫ್ರಿಕದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ. ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗುಂಡಿಕ್ಕಿ ಕೊಲ್ಲುವುದಕ್ಕೆ ಜನ/ಪರಿಸರ ಕರ‍್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆನೆಗಳ ಮಾರಾಟಕ್ಕೆ  ಮುಂದಾಗಿದ್ದೇವೆ ಎಂದು ಪರಿಸರ ಸಚಿವ ಪೊಹಂಬಾ ಶಿಫಿಟಾ ತಿಳಿಸಿದ್ದಾರೆ. Courtesyg: Google (photo)

ಸೇವಾ ವಲಯದಲ್ಲಿ ಚೇತರಿಕೆ

ಸತತ ಎರಡನೇ ತಿಂಗಳಿನಲ್ಲೂ ದೇಶದ ಸೇವಾ ವಲಯದ ಬೆಳವಣಿಗೆ ಸಕಾರಾತ್ಮಕವಾಗಿದೆ. ಆದರೆ, ಚಟುವಟಿಕೆಗಳ ಸೂಚ್ಯಂಕ ಅಕ್ಟೋಬರ್‌ನಲ್ಲಿ ೫೪.೧ ಇತ್ತು. ನವೆಂಬರ್‌ನಲ್ಲಿ ೫೩.೭ಕ್ಕೆ ಇಳಿಕೆಯಾಗಿದೆ. ಸೂಚ್ಯಂಕ ೫೦ಕ್ಕಿಂತ ಮೇಲ್ಮಟ್ಟದಲ್ಲಿ ಇರುವುದು ಸ್ಥಿರ ಬೆಳವಣಿಗೆಯ ಸೂಚನೆ ಎಂದು ಐಎಚ್‌ಎಸ್ ಮರ್ಕಿಟ್ ತಿಳಿಸಿದೆ. ಫೆಬ್ರುವರಿ ಬಳಿಕ ಅಕ್ಟೋಬರ್‌ನಲ್ಲಿ ಸೂಚ್ಯಂಕ ೫೦ಕ್ಕಿಂತಲೂ ಹೆಚ್ಚಿದ್ದು, ನವೆಂಬರ್‌ನಲ್ಲೂ ಹೆಚ್ಚಳ ಮುಂದುವರಿದಿದೆ. ಸೆಪ್ಟೆಂಬರ್‌ವರೆಗೆ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಸೇವಾ ವಲಯ ಇದೀಗ ಚೇತರಿಸಿಕೊಳ್ಳುತ್ತಿದೆ. ಬೇಡಿಕೆ ಹೆಚ್ಚಳದಿಂದ ವಾಣಿಜ್ಯ ಚಟುವಟಿಕೆಗಳಿಗೆ ವೇಗ ದೊರೆತಿದ್ದು, ಉದ್ಯೋಗ ಸೃಷ್ಟಿಯಲ್ಲೂ ಏರಿಕೆಯಾಗಿದೆ ಎಂದು […]

Impact of Delhi-Mumbai trade corriodor

The Delhi-Mumbai Industrial Corridor is a proposed network of manufacturing hubs that would cover cities such as Jaipur and Ahmedabad across six states. Seen as India’s biggest infrastructure project, how will it impact the numerous cities and towns around it?A study of urbanization in north-western India predicts that the cores of megacities such as Delhi […]

Back To Top