ಭಾರತ ಗ್ರಾಮೀಣ ಅಭಿವೃದ್ಧಿಗೆ ಅರ್ಪಿಸಿಕೊಂಡ ಅಗಾಧ ಜೀವ- ಜೆ.ಸಿ.ಕುಮಾರಪ್ಪ
–ಸಂತೋಷ ಕೌಲಗಿ, ಜನಪದ ಸೇವಾ ಟ್ರಸ್ಟ್, ಮೇಲುಕೋಟೆ-571431 ೧೯೨೯ರ ಮೇ ತಿಂಗಳಿನ ೯ ನೇ ದಿನ. ಅಹಮದಾಬಾದಿನಲ್ಲಿ ಸುಡು ಬೇಸಿಗೆ. ಮಧ್ಯಾಹ್ನ ೨.೩೦. ಸಾಬರಮತಿ ಆಶ್ರಮದ ಮರದ ಕೆಳಗೆ ಸಗಣಿ ಸಾರಿಸಿದ ನೆಲದ ಮೇಲೆ ಹಿರಿಯರೊಬ್ಬರು ಕುಳಿತು ನೂಲುತ್ತಿ ದ್ದಾರೆ. ಸುಡುಬಿಸಿಲಿನಲ್ಲೂ ಸೂಟು-ಬೂಟುಧಾರಿಯಾಗಿದ್ದ ಯುವಕನೊಬ್ಬ ಅವರು ನೂಲುವುದನ್ನೇ ದಿಟ್ಟಿಸುತ್ತ ನಿಂತಿದ್ದಾನೆ. ೨.೩೦ ಕ್ಕೆ ಸರಿಯಾಗಿ ಆ ಹಿರಿಯರು “ನೀವು ಕುಮಾರಪ್ಪ ಅವರೇ?”ಎಂದು ಕೇಳುತ್ತಾರೆ. ಅಲ್ಲಿಯವರೆಗೂ ನೂಲುತ್ತಿದ್ದ ವ್ಯಕ್ತಿ ಯಾರೆಂದು ಗೊತ್ತಿಲ್ಲದೆ, ನೂಲುವುದನ್ನೇ ನೋಡುತ್ತ ನಿಂತಿದ್ದ ಸೂಟುಬೂಟುಧಾರಿಗೆ ತನ್ನನ್ನು ಮಾತನಾಡಿಸಿದ್ದು […]




