ಡಿಜಿಟಲ್ ಇಂಡಿಯಾದಿಂದ ಜೀವನ ಶೈಲಿ ಬದಲು
ಡಿಜಿಟಲ್ ಇಂಡಿಯಾ ದೇಶದ ಜೀವನವಿಧಾನವಾಗಿ ಬದಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ೨೩ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ಆರಂಭವಾದ ಡಿಜಿಟಲ್ ಇಂಡಿಯಾ, ಬಡವರು ಹಾಗೂ ನಿರ್ಲಕ್ಷಿತ ವರ್ಗದವರ ಜೀವನದಲ್ಲಿ ಪರಿವರ್ತನೆ ತಂದಿದೆ. ಭೀಮ್ ಪಾವತಿ ಆ್ಯಪ್ ಇದಕ್ಕೊಂದು ಸಾಕ್ಷಿ. ಡಿಜಿಟಲ್ ಇಂಡಿಯಾ ಮಾನವ ಕೇಂದ್ರಿತ ಯೋಜನೆಯಾಗಿದ್ದು, ಮನುಷ್ಯರ ಘನತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜನರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದಲ್ಲದೆ, ಸರ್ಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕೋವಿಡ್ […]




