ಚಂದ್ರನ ಮೇಲ್ಮೈಯಿಂದ ಕಲ್ಲು ತರಲು ಸಿದ್ಧವಾದ ಚೀನಾ
ಚಂದ್ರನ ಮೇಲ್ಮೈಯಿಂದ ಕಲ್ಲುಗಳನ್ನು ತರಲು ಮಾನವರಹಿತ ನೌಕೆಯೊಂದನ್ನು ಚೀನಾ ನ.25ರಂದು ಉಡಾವಣೆಗೊಳಿಸಲಿದೆ. ಕಳೆದ ನಾಲ್ಕು ದಶಕಗಳ ಬಳಿಕ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ತರುವ ಮೊದಲ ಯೋಜನೆ ಇದಾಗಿದೆ. 2022ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸುವ ಗುರಿ ಹೊಂದಿರುವ ಚೀನಾ ಮಾನವಸಹಿತ ಚಂದ್ರಯಾನದ ಯೋಜನೆಯನ್ನೂ ಹಾಕಿಕೊಂಡಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚುಮಾಡಿದೆ. ಚಂದ್ರನ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯ ಚಟುವಟಿಕೆ, ಚಂದ್ರನ ರಚನೆಯನ್ನು ಅಧ್ಯಯನ ನಡೆಸುವ ಉದ್ದೇಶದಿಂದ ಮೇಲ್ಮೈಯಲ್ಲಿರುವ ಕಲ್ಲುಗಳು, ಮಣ್ಣನ್ನು(ಎರಡು ಕೆ.ಜಿ) ಚಾಂಗ್‌ಇ–5 ಪ್ರೊಬ್ ಹೊತ್ತು ತರಲಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯ […]




