ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಕಡಿಮೆ
ದೇಶದ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಶೇ.೨೫ರಷ್ಟಿದ್ದು, ಜಾಗತಿಕ ಪ್ರಮಾಣ ಶೇ.೪೯ ಎಂದು ವಾಧ್ವಾನಿ ಫೌಂಡೇಶನ್‌ನ ಅಧ್ಯಯನ ತಿಳಿಸಿದೆ. ಮಹಿಳಾ ಉದ್ಯಮಶೀಲತೆ ದಿನ ಎಂದು ಆಚರಿಸಲ್ಪಡುವ ನ.೧೯ರಂದು ಸಂಸ್ಥೆ ಈ ಮಾಹಿತಿ ಬಿಡುಗಡೆಗೊಳಿಸಿದೆ. ದೇಶ ಮಹಿಳಾ ಉದ್ಯಮಿಗಳ ಪ್ರತಿಭೆಯನ್ನು ಬಳಸಿಕೊಂಡಿಲ್ಲ. ಈ ದೆಸೆಯಲ್ಲಿ ಕೆಲಸ ಮಾಡುವುದು ಈಗಿನ ಅಗತ್ಯ ಎಂದು ಭಾರತ ಮತ್ತು ಇತರ ದೇಶಗಳಲ್ಲಿ ಉದ್ಯಮಶೀಲತೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿರುವ ಸಂಸ್ಥೆ ಹೇಳಿದೆ. ದೇಶದಲ್ಲಿ ಉದ್ಯಮಶೀಲತೆ ಬೆಳೆಯುತ್ತಿದ್ದರೂ, ಮಹಿಳೆಯರ ಪ್ರಮಾಣ ಕಡಿಮೆ ಇದೆ.ಗ್ರಾಮೀಣ ಪ್ರದೇಶಕ್ಕೂ […]




