ಆರ್ಥಿಕ ಉತ್ತೇಜನ ಪ್ಯಾಕೇಜ್ ಅನಿವಾರ್ಯ
ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದು ಮುಖ್ಯವಾಗಲಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲಾನ್ ತಿಳಿಸಿದಾರೆ. ವಿತ್ತೀಯ ಉತ್ತೇಜನ ಜಾರಿಯಲ್ಲಿರುವುದರಿಂದ ಮತ್ತೊಂದು ಸುತ್ತಿನ ಪ್ಯಾಕೇಜ್ ನೀಡಿ, ವಿತ್ತೀಯ ಕೊರತೆ ಹೆಚ್ಚಿಸುವುದು ಬೇಡ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುವ ಮೂಲಕ ಮಹತ್ವದ ಕೆಲಸ ಮಾಡಿದೆ. ಯೋಜನೆಗಳಿಗೆ ನೀಡಲಾದ ಮೊತ್ತವನ್ನು ಆದಷ್ಟು ಬೇಗ ವೆಚ್ಚ ಮಾಡಲು ಆರಂಭಿಸಬೇಕು ಎಂದು ಪಿಟಿಐ […]




