ಬೊಮ್ಮನಾಯಕನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಲಾಭ
ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ. ಎಂ. ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು, ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಬಗ್ಗೆ ತಿಳಿಸಿದರು. ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು. ೨೦೧೯-೨೦ ನೇ ಸಾಲಿನಲ್ಲಿ ಸಂಘ ೧೧,೮೧,೨೩೩ ರೂ. ನಿವ್ವಳ ಲಾಭ ಗಳಿಸಿರುವುದಕ್ಕೆ […]




