ರೇಷ್ಮೆ-ಮಾವು ಸಂಸ್ಕರಣಾ ಘಟಕ ಸ್ಥಾಪನೆ
ಸುಸಜ್ಜಿತ ರೇಷ್ಮೆ ಮಾರುಕಟ್ಟೆ ಮತ್ತು ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ರಾಮನಗರ ಮತ್ತು ಚನ್ನಪಟ್ಟಣದ ನಡುವೆ 11 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೆ ನಬಾರ್ಡ್ ₹ 50 ಕೋಟಿ ಸಾಲ ನೀಡದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಈ ಜಾಗದಲ್ಲಿ ರೇಷ್ಮೆಯ ದ್ವಿತಳಿ, ಮಿಶ್ರತಳಿ ಗೂಡು ಖರೀದಿ ಕೇಂದ್ರಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುವುದು. ರೈತರು ರಾತ್ರಿ ವೇಳೆ ತಂಗಲು ವಸತಿ ವ್ಯವಸ್ಥೆ ಜತೆಗೆ ಸುಲಭ ಹಣಕಾಸು ವ್ಯವಹಾರಕ್ಕೆ ಬ್ಯಾಂಕಿAಗ್ ವ್ಯವಸ್ಥೆ […]




