ಅಹಮದನ 407
ಅಂಜನಾ ಹೆಗಡೆ ಸಾವಿತ್ರಕ್ಕ ಎರಡೇ ದೋಸೆ ತಿಂದು ಚಹಾವನ್ನೂ ಕುಡಿಯದೇ ಗಡಿಬಿಡಿಯಲ್ಲಿ ಬಚ್ಚಲುಮನೆಗೆ ಹೋಗಿ ಬಿಸಿನೀರಿನಲ್ಲಿ ಕೈ ತೊಳೆದು ಸೆರಗಿನಿಂದ ಒರೆಸಿಕೊಳ್ಳುತ್ತ ಜಗಲಿಗೆ ಓಡಿದಳು. ರಾಮಣ್ಣ ಎಡಗೈಯಲ್ಲಿ ತೊಗರು ತುಂಬಿದ ಚೊಂಬನ್ನು ಹಿಡಿದುಕೊಂಡು ಹಳೆಯ ಬ್ರಷ್ಶಿನಿಂದ ಅಡಿಕೆಚೀಲಗಳ ಮೇಲೆ ಸೊಸೈಟಿಯ ನಂಬರನ್ನೂ, ಪರಮಣ್ಣನ ಹೆಸರನ್ನೂ ಬರೆದು ಒಂದೊಂದೇ ಚೀಲವನ್ನು ಎಳೆದು ಪಕ್ಕಕ್ಕಿಡುತ್ತಿದ್ದ. ಪರಮಣ್ಣ ಮಾತ್ರ ಆರಾಮಾಗಿ ನಾಲ್ಕೈದು ದೋಸೆಗಳನ್ನು ಬೆಲ್ಲ-ತುಪ್ಪದಲ್ಲದ್ದಿ ತಿಂದು, ಒಂದು ಲೋಟ ಚಹಾ ಕುಡಿದು ಕವಳದ ಬಟ್ಟಲು ಹಿಡಿದು ಆರಾಮಕುರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ […]