Tag: ಕಥೆ

ನೋರಾ

ವಿಜಯಲಕ್ಷ್ಮೀ ದಾನರಡ್ಡಿ   “ನಿನ್ನಲ್ಲಿ ಶಕ್ತಿ ಇಲ್ಲ ಎಂದು ಹೇಳಲಿಲ್ಲ. ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದೆ. ಒಳ್ಳೆಯ ಬರಹಕ್ಕೆ ಹೆಚ್ಚು ಶ್ರಮ ಹಾಕಬೇಕು” ಇವೇ ಸಾಲುಗಳು ಹಗಲು-ರಾತ್ರಿಯೆನ್ನದೆ ನನ್ನನ್ನು ಕಾಡಿ ನಿದ್ರಾಹೀನಳನ್ನಾಗಿ ಮಾಡಿದ್ದವು. ನಾನು ಮಾಡಿದ ಬರಹದ ಬಗ್ಗೆ ನನಗೇ ತೃಪ್ತಿ ಇಲ್ಲವೆಂದಾಗ ನನ್ನ ಗುರುಗಳಿಂದ ಅದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ! ಯೋಚಿಸುತ್ತಲೇ ಮನಸ್ಸಿಲ್ಲದ ಮನಸ್ಸಿನಿಂದ ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ಊಟಕ್ಕೆ ಕುಳಿತೆನು. ನನ್ನ ಗುರುಗಳು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟು ನೀಡಿದ ಒಂದೇ […]

ನೋಟವೊಂದೆ ಸಾಕು

ಮಾಧವಿ ಭಂಡಾರಿ ಕೆರೆಕೋಣ ಬಿಸಿಲ ಜಳ ಜಾಸ್ತಿಯಾದಂತೆ ರೈಲಿನ ಹೊರಗಡೆಯಿಂದ ಕಿತ್ತ ಕಣ್ಣನ್ನು ಪುಸ್ತಕದಲ್ಲಿ ನೆಟ್ಟೆ. ಎದುರಿನ ಬರ್ತ್‍ನ ಕಿಟಕಿ ಸೀಟ್ ಖಾಲಿಯಾಗೇ ಇತ್ತು. ಯಾರೋ ಕುಳಿತು ಎದ್ದುದರ ಗುರುತಾಗಿ ಒಂದು ನ್ಯೂಸ್ ಪೇಪರ್ ಅಲ್ಲಿ ಇತ್ತು. ಎತ್ತಿ ಒಗೆಯುವ ಬಸ್ಸಿನಲ್ಲೇ ಓದುವ ನನಗೆ ರೈಲು ಆರಾಮ ಖುರ್ಚಿಯಲ್ಲಿ ಕುಳಿತಂತೆ ಭಾಸವಾಯಿತು. ಓದು ನಿರಾತಂಕವಾಗಿ ಸಾಗಿತು. ಒಂದಿಷ್ಟು ಸಮಯದ ನಂತರ ಧಡಕ್ಕನೆ ಯಾರೋ ಬಂದು ಕುಳಿತ ಸದ್ದು ನನ್ನ ಧ್ಯಾನಸ್ಥ ಓದಿಗೆ ಭಂಗ ತಂದರೂ ಒಂದು ಕ್ಷಣ […]

ಅಹಮದನ 407

ಅಂಜನಾ ಹೆಗಡೆ ಸಾವಿತ್ರಕ್ಕ ಎರಡೇ ದೋಸೆ ತಿಂದು ಚಹಾವನ್ನೂ ಕುಡಿಯದೇ ಗಡಿಬಿಡಿಯಲ್ಲಿ ಬಚ್ಚಲುಮನೆಗೆ ಹೋಗಿ ಬಿಸಿನೀರಿನಲ್ಲಿ ಕೈ ತೊಳೆದು ಸೆರಗಿನಿಂದ ಒರೆಸಿಕೊಳ್ಳುತ್ತ ಜಗಲಿಗೆ ಓಡಿದಳು. ರಾಮಣ್ಣ ಎಡಗೈಯಲ್ಲಿ ತೊಗರು ತುಂಬಿದ ಚೊಂಬನ್ನು ಹಿಡಿದುಕೊಂಡು ಹಳೆಯ ಬ್ರಷ್ಶಿನಿಂದ ಅಡಿಕೆಚೀಲಗಳ ಮೇಲೆ ಸೊಸೈಟಿಯ ನಂಬರನ್ನೂ, ಪರಮಣ್ಣನ ಹೆಸರನ್ನೂ ಬರೆದು ಒಂದೊಂದೇ ಚೀಲವನ್ನು ಎಳೆದು ಪಕ್ಕಕ್ಕಿಡುತ್ತಿದ್ದ. ಪರಮಣ್ಣ ಮಾತ್ರ ಆರಾಮಾಗಿ ನಾಲ್ಕೈದು ದೋಸೆಗಳನ್ನು ಬೆಲ್ಲ-ತುಪ್ಪದಲ್ಲದ್ದಿ ತಿಂದು, ಒಂದು ಲೋಟ ಚಹಾ ಕುಡಿದು ಕವಳದ ಬಟ್ಟಲು ಹಿಡಿದು ಆರಾಮಕುರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ […]

Back To Top