Tag: ಕವಿತೆ

ಮೀರುವುದು ಕ್ರಿಯಾಪದ

 – ವೆಂಕಟ್ರಮಣ ಗೌಡ ಬರೆಯುವುದಿದೆ ಕಥೆಯೊಂದನು ಅವಳೆದೆಯೊಳಗಿನ ಹೂದೋಟವ ತಂದಿರಿಸಿ ಸುಡು ಹಗಲಲಿ ಮೆರೆಸಿ ಮಧುರಾತ್ರಿಯನು ಎಲ್ಲ ಮರೆಯುವಂತೆ ಆಹಾ ಎನ್ನಬೇಡ ರಮ್ಯತೆಯ ಅಧಿದೇವತೆಯೆ, ಮರೆಯುವುದೆಂದರೆ ಇಲ್ಲಿ ನೆನಪುಗಳ ಅಗ್ನಿಪರೀಕ್ಷೆ ಕೇಳು ರಮ್ಯದೇವತೆಯೆ, ಸುಂದರ ಸುಳ್ಳುಗಳ ಹೊದ್ದ ನಿನ್ನಂತಲ್ಲ ಅವಳು ಅವಳೊಳಗಿವೆ ನಿನ್ನ ಬಿನ್ನಾಣವನೆಲ್ಲ ಬಯಲಿಗಿಳಿಸುವ ನಿಗಿನಿಗಿ ಕ್ರಿಯಾಪದಗಳು ಕಥೆ ಬರೆಯುವುದೆಂದರೂ ಹೀಗೆಯೇ ಕ್ರಿಯಾಪದಗಳ ನಡುವೆ ಕನಲುವುದು ಮೊಗೆಮೊಗೆದು ನೆನಪುಗಳೊಳಗೆ ಬಂಧಿಯಾಗುವುದು ವಿಫಲ ಪ್ರೇಮದ ಅಸಹನೀಯತೆಯಲ್ಲಿ ಬೆಳಗುವುದು ಬರೆಯುವುದಿದೆ ಕಥೆಯೊಂದನು ಬರೆಯಲನುವಾಗುವುದನ್ನೇ ಕಾದು ಮೀರುವುದನ್ನು

ಈ ರಂಗವಲ್ಲಿಯಾಟ

ದಿವ್ಯಾ ಮಂಡೀರ   ಸಾವು ನೆಮ್ಮದಿಯಂತೆ ಸುದೀರ್ಘ ಕತ್ತಲಲ್ಲಿ ನಿಶ್ಚಲವಾಗಿ ಮಲಗುವುದಂತೆ ವಾಸ್ತವತೆಯ ಭೀಕರ ಕತ್ತಲನ್ನು ಮರೆತು ಪ್ರೀತಿ, ಬದುಕು, ಹರಯ, ದ್ವೇಷ-ರೋಷಗಳ ನಡುವೆ ಒಮ್ಮೆ ಸತ್ತು ನೋಡು ಎಂದಿದ್ದ ಕವಿಯನ್ನೊಮ್ಮೆ ಕೇಳಬೇಕೆನ್ನಿಸಿದೆ * ಇದು ಹೊಲಿಗೆ ಸಂಬಂಧಗಳು ಇಲ್ಲಿ ಬದುಕಬೇಕು ನೋವು, ನಿರಾಸೆ, ಭರವಸೆ, ಕನಸುಗಳನ್ನು ಕೇಳಿಕೊಳ್ಳಬೇಕು ಈ ದ್ವಂದ್ವಗಳಿಗೆ ಒಂದಿಷ್ಟು ಉತ್ತರ ಜಡ್ಡುಗಟ್ಟಿದ ಕಲ್ಲುಬಂಡೆಗೆಲ್ಲಿ ತಿಳಿಯಬೇಕು ಕಲ್ಲುಬಾಳೆಯ ನವಿರು ಭಾವಗಳು ರಾತ್ರಿಗಳು ಖಾಲಿಯಾಗುತ್ತಲೇ ಇವೆ ಎದೆಯೊಳಗಿನ ಸಣ್ಣ ಭಯಕ್ಕೆ ಹರೆಯದ್ದು ನಿರ್ಲಿಪ್ತ ನಗು * […]

Back To Top