ಮೋಹಕತೆಯಾಚೆಗಿನ ಕವಿತೆಗೆ ಕೈಚಾಚಿದ ಧ್ಯಾನ
ವೆಂಕಟ್ರಮಣ ಗೌಡ “ಈ ಚಿಟ್ಟೆ ಕಾಡಿದ ಹಾಗೆ” ಸುಚಿತ್ರಾ ಹೆಗಡೆ ಅವರ ಕವಿತೆಗಳ ಮೊದಲ ಸಂಕಲನ. ಅದೇ ಹೆಸರಿನ ಕವಿತೆಯ ಪ್ರಸ್ತಾಪದೊಂದಿಗೆ ಈ ಪುಸ್ತಕದ ಕುರಿತು ಕೆಲವು ಮಾತುಗಳನ್ನು ಹೇಳಲು ನನಗೆ ಇಷ್ಟ. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಕನ್ನಡ ಕಾವ್ಯವನ್ನು ಎಂದೆಂದೂ ಆವರಿಸಿಕೊಂಡೇ ಇರುವ ದಿವ್ಯ. ‘ಪಾತರಗಿತ್ತಿ ಪಕ್ಕ ನೋಡಿದ್ಯೇನ ಅಕ್ಕ’ ಎಂದು ಶುರುವಾಗುವ ಅದು, ‘ಗಾಳಿ ಕೆನೀಲೇನ ಮಾಡಿದ್ದಾರ ತಾನ’ ಎಂದು ವಿಸ್ತರಿಸಿಕೊಳ್ಳುತ್ತ, ಕೊನೆಗೆ ‘ಇನ್ನು ಎಲ್ಲಿಗೋಟ? ನಂದನದ ತೋಟ!’ ಎಂದು ಅನೂಹ್ಯವಾದುದರ, ಅತೀತವಾದುದರ ಕಡೆಗೆ […]
ಉಮೇಶ ನಾಯ್ಕರ ಕವಿತೆಗಳು: ನಿಷ್ಕಳಂಕ ಜಗಳದಲ್ಲಿನ ನಿಶ್ಚಯ
ವೆಂಕಟ್ರಮಣ ಗೌಡ ‘ಕತ್ತಲ ಧ್ಯಾನಿಸಿದ ನಂತರ’ ಉಮೇಶ ನಾಯ್ಕ ಅವರ ಎರಡನೇ ಕವನ ಸಂಕಲನ (ಪ್ರಕಟಣೆ ವರ್ಷ: 2021). ಇದಕ್ಕೂ 9 ವರ್ಷಗಳ ಕೆಳಗೆ ಅವರ ಮೊದಲ ಸಂಕಲನ ‘ಪೂರ್ಣ ಸತ್ಯವಲ್ಲ ರಸ್ತೆಗಳು’ (2012) ಪ್ರಕಟವಾಗಿತ್ತು. ಮೊದಲನೆಯದರಲ್ಲಿ 40 ಮತ್ತು ಎರಡನೆಯ ಸಂಕಲದಲ್ಲಿ 45 ಕವಿತೆಗಳಿವೆ. ‘ಲೆಕ್ಕಕ್ಕೆ ಅಷ್ಟಾಗಿವೆ’ ಎಂದು ತಮ್ಮನ್ನು ತಾವೇ ಅಣಕಿಸಿಕೊಂಡು ನಕ್ಕುಬಿಡುವ ಜಾಯಮಾನ ಅವರದು. ಹೊಸ ಸಂಕಲನದ ನೆಪದಲ್ಲಿ ಅವರ ಒಟ್ಟಾರೆ ಕವಿತೆಗಳ ಬಗ್ಗೆ ಬರೆಯುವುದು ಇಲ್ಲಿ ನನ್ನ ಉದ್ದೇಶ. ನನ್ನ ಮತ್ತು […]