ʻಒಂದು ದೇಶ ಒಂದು ಚುನಾವಣೆʼ ರಾಜಕೀಯ ಉತ್ತರದಾಯಿತ್ವಕ್ಕೆ ಹಿನ್ನಡೆ
ʻಒಂದು ದೇಶ ಒಂದು ಚುನಾವಣೆ(ಒಂದೇ ಒಂಚು)ʼ ಕಾರ್ಯನೀತಿಯ ಅನುಷ್ಠಾನಕ್ಕೆ ಮೂರು ಕಾಯಿದೆಗಳ ತಿದ್ದುಪಡಿಗೆ ಒಕ್ಕೂಟ ಸರ್ಕಾರ ಮುಂದಾಗಿದೆ. ಮಸೂದೆಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಅನುಮತಿ ಅಗತ್ಯವಿದೆ. ಇದು 1983 ರಿಂದ ಚರ್ಚೆಯಲ್ಲಿರುವ ಪರಿಕಲ್ಪನೆ. ಆಗ ಕಾನೂನು ಆಯೋಗ ತನ್ನ ವರದಿಯಲ್ಲಿ ʼಏಕಕಾಲದಲ್ಲಿ ಚುನಾವಣೆಯಿಂದ ವೆಚ್ಚ ಇಳಿಕೆ ಆಗಲಿದೆ. ಚುನಾವಣೆಗೆ ಸರ್ಕಾರಿ ನೌಕರರ ನಿಯೋಜನೆ ಕಡಿಮೆಯಾಗುವುದರಿಂದ, ಉತ್ಪಾದಕತೆ ಹೆಚ್ಚಲಿದೆ. ರಾಜಕೀಯ ಪಕ್ಷಗಳು ಆಡಳಿತದತ್ತ ಗಮನ ನೀಡಲು ಸಾಧ್ಯವಾಗುತ್ತದೆʼ ಎಂದು ಹೇಳಿತ್ತು. ಆನಂತರ 1999ರಲ್ಲಿ ಕಾನೂನು ಆಯೋಗ ತನ್ನ 177ನೇ […]