ಮಮತಾ ಬ್ಯಾನರ್ಜಿ ಅವರ ʻಆಟʼ ಈ ಚುನಾವಣೆಯಲ್ಲೂ ನಡೆಯುವುದೇ?
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಐಆರ್, ಆಡಳಿತ ವಿರೋಧಿ ಅಲೆ, ರಾಜ್ಯಪಾಲರ ಪ್ರವೇಶ, ಕಣಕ್ಕಿಳಿದಿರುವ ಗಣ ಸಮೂಹ ಮತ್ತು ಚುನಾವಣೆ ಆಯೋಗ ಸಾರಾಸಗಟು ಅಧಿಕಾರಶಾಹಿಯನ್ನು ವರ್ಗಾಯಿಸಿರುವುದು ತೃಣಮೂಲ ಕಾಂಗ್ರೆಸ್‌ಗೆ ತಿರುಗುಬಾಣ ಆಗುವುದೇ? ಅಥವಾ, ಟಿಎಂಸಿ ಪ್ರತಿಪಾದಿಸುವ ಬಂಗಾಳಿ ಉಪರಾಷ್ಟ್ರೀಯತೆಗೆ ಜನ ಮಣೆ ಹಾಕುವರೇ? ರಾಜ್ಯದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ್ ಮೋರ್ಚಾ(ಬಿಜಿಪಿಎಂ) ಡಾರ್ಜಿಲಿಂಗ್ ಬೆಟ್ಟ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಟಿಎಂಸಿ 3 ಅವಧಿಯಿಂದ […]
ಸ್ಪೀಕರ್, ಮುಖ್ಯ ಚುನಾವಣೆ ಆಯುಕ್ತ ಮತ್ತು ಸುಳ್ಳುಗಳ ಸುಗ್ಗಿ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಅಂದುಕೊಂಡಂತೆ ಬಿದ್ದುಹೋಗಿದೆ. ಲೋಕಸಭೆ-ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಗೆ ಮಾತನ್ನಾಡಲು ಅವ ಕಾಶ ನೀಡದ ಹಾಗೂ ಮಾತನ್ನಾಡುತ್ತಿದ್ದಾಗ ಧ್ವನಿವರ್ಧಕ ಬಂದ್ ಮಾಡುವ ಸ್ಪೀಕರ್‌ಗೆ ಮುಖಭಂಗ ಆಗಿದೆ. ಇದೇ ಹೊತ್ತಿಗೆ ಪ್ರತಿಪಕ್ಷಗಳು ಮುಖ್ಯ ಚುನಾವಣೆ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು ಎಂದು ನೋಟಿಸ್ ನೀಡಿವೆ. ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಹಿನ್ನೆ ಲೆಯಲ್ಲಿ ಆಯೋಗದ ಮುಖ್ಯಸ್ಥರ ಪಕ್ಷಪಾತ ಪ್ರವೃತ್ತಿಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಹಿಂದಿನ ಎಲ್ಲ ಸ್ಪೀಕರ್‌ಗಳು […]
ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ ಸೋಲಲಿ
ಕೇರಳ ಈಗ ʻಕೇರಳಂʼ ಆಗಿದೆ. ಪಶ್ಚಿಮ ಬಂಗಾಳಕ್ಕಿಲ್ಲದ ಹೆಸರು ಬದಲಾವಣೆ ಭಾಗ್ಯ ರಾಜ್ಯಕ್ಕೆ ಲಭಿಸಿದೆ. ಇದೇ ಹೊತ್ತಿನಲ್ಲಿ ʻಕೇರಳ ಸ್ಟೋರಿ 2: ಗೋಸ್ ಬಿಯಾಂಡ್ʼ ಎನ್ನುವ ಸುಳ್ಳುಗಳೇ ತುಂಬಿರುವ ಪ್ರೊಪಗಾಂಡ ಸಿನೆಮಾ ಕೂಡ ಬಿಡುಗಡೆಯಾಗಿದೆ. ಈಮೂಲಕ ಬಿಜೆಪಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿ ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಮತ್ತು ಇತರೆಡೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿವೆ; ಆಡಳಿತ ವಿರೋಧ ಅಲೆಯ ಹಿನ್ನೆಲೆಯಲ್ಲಿ ಎಡರಂಗ ನೇತೃತ್ವದ ಸರ್ಕಾರ ಹಿನ್ನಡೆ ಅನುಭವಿಸಿದೆ. ಪ್ರಶ್ನೆ ಏನೆಂದರೆ, ಗೆಲುವಿನ ಸಾಧ್ಯತೆ ಇರುವಾಗ […]
ತಮಿಳುನಾಡು ಚುನಾವಣೆ: ದ್ರಾವಿಡ ವಿ/ಎಸ್ ರಾಷ್ಟ್ರೀಯವಾದಿ ಸಿದ್ಧಾಂತದ ಹಣಾಹಣಿ
ತಮಿಳುನಾಡು ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರನ್ನು ಕರೂರು ಕಾಲ್ತುಳಿತ ಹಾಗೂ ವಿಚ್ಛೇದನ ಪ್ರಕರಣಗಳು ಕಾಡುತ್ತಿವೆ. ಎಐಎಡಿಎಂಕೆ ನಿಶ್ಶಕ್ತವಾಗಿದೆ ಮತ್ತು ಬಿಜೆಪಿಯ ಕೋಮುವಾದಿ ಸಂಕ ಥನಗಳಿಗೆ ಜನ ಮರುಳಾದಂತೆ ಕಾಣುತ್ತಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ)ವು ಕಾಂಗ್ರೆಸ್‌ಗೆ 28 […]
ಚುನಾವಣೆ ಆಯೋಗದ ಕುತಂತ್ರ ಮತ್ತು ವೋಟ್‌ಬಂದಿ
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ʻಅದೊಂದು ಸಾಂವಿಧಾನಿಕ ಹೊಣೆಗಾರಿಕೆʼ ಎಂದಿರುವ ಸುಪ್ರೀಂ ಕೋರ್ಟ್(ಜುಲೈ 10,2025 ರಂದು), ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ತೀರ್ಪಿನಿಂದ ಉತ್ತೇಜಿತವಾಗಿರುವ ಆಯೋಗ, ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ವಿಡಿಯೋ ಮಾಡಿದ್ದ ಪತ್ರಕರ್ತ/ಯುಟ್ಯೂಬರ್ ಅಜಿತ್ ಅಂಜುಂ ಮೇಲೆ ಜುಲೈ 15ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿದ್ದ ಪ್ರತಿ ಪಕ್ಷಗಳು, ಸುಪ್ರೀಂ ಮೆಟ್ಟಿಲೇರಿವೆ. ಜುಲೈ 28ರಂದು ಈ ಸಂಬಂಧ ವಿಚಾರಣೆ ಬಾಕಿ […]
ಆಪ್ ಅಪಜಯ ಮತ್ತು ಮೈತ್ರಿಕೂಟದ ಭವಿಷ್ಯ
ಕಂಪ್ಟ್ರೋಲರ್ ಆಂಡ್ ಆಡಿಟರ್ ಜನರಲ್ ಆಗಿದ್ದ ವಿನೋ ದ್ ರೈ ಅವರು ಯುಪಿಎ-2 ಸರ್ಕಾರ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ವರದಿ ನೀಡಿದ್ದರು. ವರದಿಯನ್ನು ಮುಂದಿಟ್ಟು ಕೊಂಡು ಅಣ್ಣಾ ಹಜಾರೆ, ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್, ಬಾಬಾ ರಾಮದೇವ್ ಹೋರಾಟ ಆರಂಭಿಸಿ ದರು; ಸುಬ್ರಮಣಿಯಂ ಸ್ವಾಮಿ ಪ್ರಕರಣವನ್ನು ನ್ಯಾಯಾಂಗ ಕ್ಕೆ ಕೊಂಡೊಯ್ದರು. ಡಿಸೆಂಬರ್ 2017ರಲ್ಲಿ ʻಇದೊಂದು ಕಲ್ಪಿತ ಪ್ರಕರಣʼ ಎಂದ ಸಿಬಿಐ ವಿಶೇಷ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ಅಷ್ಟರೊಳಗೆ, ಕೇಜ್ರಿವಾಲ್ […]
ʻಒಂದು ದೇಶ ಒಂದು ಚುನಾವಣೆʼ ರಾಜಕೀಯ ಉತ್ತರದಾಯಿತ್ವಕ್ಕೆ ಹಿನ್ನಡೆ
ʻಒಂದು ದೇಶ ಒಂದು ಚುನಾವಣೆ(ಒಂದೇ ಒಂಚು)ʼ ಕಾರ್ಯನೀತಿಯ ಅನುಷ್ಠಾನಕ್ಕೆ ಮೂರು ಕಾಯಿದೆಗಳ ತಿದ್ದುಪಡಿಗೆ ಒಕ್ಕೂಟ ಸರ್ಕಾರ ಮುಂದಾಗಿದೆ. ಮಸೂದೆಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಅನುಮತಿ ಅಗತ್ಯವಿದೆ. ಇದು 1983 ರಿಂದ ಚರ್ಚೆಯಲ್ಲಿರುವ ಪರಿಕಲ್ಪನೆ. ಆಗ ಕಾನೂನು ಆಯೋಗ ತನ್ನ ವರದಿಯಲ್ಲಿ ʼಏಕಕಾಲದಲ್ಲಿ ಚುನಾವಣೆಯಿಂದ ವೆಚ್ಚ ಇಳಿಕೆ ಆಗಲಿದೆ. ಚುನಾವಣೆಗೆ ಸರ್ಕಾರಿ ನೌಕರರ ನಿಯೋಜನೆ ಕಡಿಮೆಯಾಗುವುದರಿಂದ, ಉತ್ಪಾದಕತೆ ಹೆಚ್ಚಲಿದೆ. ರಾಜಕೀಯ ಪಕ್ಷಗಳು ಆಡಳಿತದತ್ತ ಗಮನ ನೀಡಲು ಸಾಧ್ಯವಾಗುತ್ತದೆʼ ಎಂದು ಹೇಳಿತ್ತು. ಆನಂತರ 1999ರಲ್ಲಿ ಕಾನೂನು ಆಯೋಗ ತನ್ನ 177ನೇ […]

