ಭ್ರಷ್ಟಾಚಾರದ ಅನಿರ್ವಾಯತೆ-ಶಿವ್ ವಿಶ್ವನಾಥನ್ ಅನುವಾದ:ಶಶಿಧರ ಡೋಂಗ್ರೆ
ಭ್ರಷ್ಟಾಚಾರದ ಅನಿವಾರ್ಯತೆ ಮೂಲ: ಶಿವ್ ವಿಶ್ವನಾಥನ್ ಅನುವಾದ: ಶಶಿಧರ ಡೋಂಗ್ರೆ ಭ್ರಷ್ಟಾಚಾರದ ಬಗೆಗಿನ ನನ್ನ ನಿಲುವು ವೆಬರ್ ನಂತರದಲ್ಲಿ ಚಾಲ್ತಿಯಲ್ಲಿರುವ `ಆಧುನಿಕತೆ ಎಂದರೆ ಭ್ರಷ್ಟಾಚಾರವಿಲ್ಲದಿರುವುದು’ ಎಂಬ ಕಲ್ಪನೆಗೆ ಸವಾಲು ಎಸೆಯುವಂಥದ್ದು. ಆಧುನಿಕತೆಯ ಬಗೆಗಿನ ಪಾಶ್ಚಿಮಾತ್ಯ ಸಿದ್ಧಾಂತದ ಪ್ರಕಾರ, ಆಧುನಿಕ ಮತ್ತು ಹಿಂದಿನ ಕಾಲಗಳು ಒಂದಕ್ಕೆ ಇನ್ನೊಂದು ಹೆಣೆದುಕೊಂಡಿರದೆ, ಪ್ರತ್ಯೇಕವಾಗಿರುತ್ತದೆ. ಆದರೆ, ನಮ್ಮ ಸಮಾಜದಲ್ಲಿ ಹೊಸತು ಮತ್ತು ಹಳೆಯದೆರಡೂ ಒಟ್ಟಿಗೆ ಇದ್ದು ಒಂದಕ್ಕೊAದು ಬೆಸೆದುಕೊಂಡಿರುತ್ತದೆ ಮತ್ತು ಭ್ರಷ್ಟಾಚಾರವೆಂಬುದು ಈ ಹೆಣಿಗೆಯ ಒಂದು ಸೂಚಿಯಾಗಿದೆ. ಪಶ್ಚಿಮ ಕೂಡ ಸಂಪೂರ್ಣವಾಗಿ ಆಧುನಿಕವಾಗಿಲ್ಲ […]