ಈಡೇರದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ವಾಗ್ದಾನ
ʻಪ್ರತಿಯೊಂದು ಕ್ಷಣವೂ ಕ್ರಿಯೆಯ ಸಮಯ. ಸುರಂಗದ ಕೊನೆಯಲ್ಲಿ ಕಂಡುಬರುವ ಬೆಳಕು ನಮಗೆ ದಕ್ಕದೆ ಇರಬಹುದು; ಆದರೆ, ಅದರ ಮಿನುಗುವಿಕೆ ಮತ್ತು ಪ್ರತಿಫಲನಗಳಿಂದ ನಮ್ಮ ದಾರಿ ಕಂಡುಕೊಳ್ಳಬಹುದುʼ ದೇಶ ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದೆ. ಅಮೆರಿಕದಲ್ಲಿ ಟ್ರಂಪ್ 2.0 ಆರಂಭಗೊಂಡಿದೆ. ಭಾರತದಲ್ಲಿ ಪ್ರಗತಿಪರ ಚಳವಳಿಗಳು ಮಕಾಡೆ ಮಲಗಿವೆ. ಎರಡೂ ದೇಶಗಳು ಪ್ರಜಾಪ್ರಭುತ್ವದ ಆದರ್ಶಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಹೆಣಗಾಡುತ್ತಿವೆ; ಅದರಲ್ಲಿ ಎಡವುತ್ತಿವೆ. ಇಂಥ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್(ಎಂಎಲ್‌ಕೆ) ಅವರ ಬದುಕಿನಿಂದ ನಾವು ಕಲಿಯಬೇಕಿದೆ. 1963 ರಲ್ಲಿ […]
ಮೆಟಾ ಸತ್ಯಾಂಶ ಪರಿಶೀಲಕರನ್ನು ನಿವಾರಿಸುತ್ತಿರುವುದೇಕೆ?
ಜನವರಿ 7, 2025ರಂದು ಮೆಟಾ ಸಿಇಇ ಮಾರ್ಕ್ ಎಲಿಯಟ್ ಜುಕರ್‌ಬರ್ಗ್, ʻಮೆಟಾ ಸತ್ಯಾಂಶ ಪರಿಶೀಲಕ(ಫ್ಯಾಕ್ಟ್ ಚೆಕರ್)ರನ್ನು ತೆಗೆದುಹಾಕಲಿದೆ. ಅವರು ರಾಜಕೀಯ ಪಕ್ಷಪಾತ ತೋರುತ್ತಿದ್ದು, ನಂಬಿಕೆ ಹುಟ್ಟಿಸುವ ಬದಲು ಅದನ್ನು ನಾಶಮಾಡುತ್ತಿದ್ದಾರೆ. ಮೆಟಾ ಮುಖ್ಯವಾಹಿನಿ ಸಂವಾದವನ್ನು ಸ್ಪರ್ಶಿಸದ ವಿಷಯಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಿದೆ,ʼ ಎಂದು 5 ನಿಮಿಷಗಳ ವಿಡಿಯೋದಲ್ಲಿ ಹೇಳಿದರು. ಸತ್ಯಾಂಶ ಪರಿಶೀಲಕರ ಬದಲು ಎಲಾನ್ ಮಸ್ಕ್ ಅವರ ʻಎಕ್ಸ್ʼ ಅಳವಡಿಸಿಕೊಂಡಿರುವ ʻಕಮ್ಯುನಿಟಿ ನೋಟ್ಸ್ʼ ವ್ಯವಸ್ಥೆ ಅಳವಡಿಕೆಗೆ ಮೆಟಾ ಮುಂದಾಗಿದೆ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆಯೊಂದರ ಬದಲು ಗ್ರಾಹಕರು ಸುಳ್ಳಿನ […]
ಟ್ರಂಪ್ 2.0 : ಮಾಗಾದ ಮುನ್ನಡೆ ಮತ್ತು ವಲಸೆ ಪ್ರಶ್ನೆ
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೆ ವಾಪಸಾಗಿದ್ದಾರೆ. ಅಮೆರಿಕದ ರಾಜಕೀಯದಲ್ಲಿ ನಗಣ್ಯ ಎಂದು ಪರಿಗಣಿಸಿದ್ದ ರಾಜಕೀಯ ಚಳವಳಿಯೊಂದು ಟ್ರಂಪ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ʻಮಾಗಾʼ(ಮೇಕ್ ಅಮೆರಿಕ ಗ್ರೇಟ್ ಎಗೇನ್, ಎಂಎಜಿಎ). ಅಮೆರಿಕದ 40ನೇ ಅಧ್ಷಕ್ಷ ರೊನಾಲ್ಡ್ ರೇಗನ್ ʻಲೆಟ್ಸ್ ಮೇಕ್ ಅಮೆರಿಕ ಗ್ರೇಟ್ ಎಗೇನ್ʼ ಘೋಷಣೆಯನ್ನು ಬಳಸಿದ ಮೊದಲಿಗರು(1981-89). ಟ್ರಂಪ್ ಪ್ರಕಾರ, ಅವರನ್ನು ಹೊರತುಪಡಿಸಿದರೆ, ರೇಗನ್ ಅಮೆರಿಕದ ಅತ್ಯುತ್ತಮ ಅಧ್ಯಕ್ಷರಲ್ಲಿ ಕೊನೆಯವರು. ಮಾಗಾದಂಥ ಚಳವಳಿಗಳಿಗೆ ಹಲವು ಪೂರ್ವನಿದರ್ಶನ ಮತ್ತು ಪರ್ಯಾಯಗಳಿದ್ದರೂ, ಅಮೆರಿಕದಲ್ಲಿ ಮಾಗಾದ ಮುನ್ನಡೆಗೆ […]