ಮೆಟಾಕ್ಕೆ ಶತ ಕೋಟಿ ದಂಡ: ಸಾಮಾಜಿಕ ಮಾಧ್ಯಮಗಳಿಗೆ ಅಂಕುಶ ಅಗತ್ಯ
ಅಮೆರಿಕದ ಕ್ಯಾಲಿಫೋರ್ನಿಯಾ, ಕೊಲರಾಡೋ, ಕೆಂಟುಕಿ, ನ್ಯೂಜೆರ್ಸಿ ಸೇರಿದಂತೆ 29 ರಾಜ್ಯಗಳು 2023ರಲ್ಲಿ ಮೆಟಾ ವಿರುದ್ಧ ಪ್ರಕರಣ ದಾಖಲಿಸಿದ್ದವು. ನ್ಯಾಯಾಲಯ ಆಗಸ್ಟ್ 26, 2026ರಂದು ನೀಡಿದ ತೀರ್ಪಿನಲ್ಲಿ 47 ರಾಜ್ಯಗಳಿಗೆ 17.1 ಶತಕೋಟಿ ಡಾಲರ್(ಅಂದಾಜು 1,62,757.80 ಕೋಟಿ ರೂ.) ಪರಿಹಾರ ನೀಡಬೇಕೆಂದು ಹೇಳಿದೆ. ಇದೊಂದು ಅವಿಸ್ಮರಣೀಯ ಆದೇಶವಾಗಿದ್ದು, ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಜಗತ್ತಿ ನೆಲ್ಲೆಡೆಯ ದೇಶಗಳಿಗೆ ಮಾರ್ಗದರ್ಶಿ ಸೂತ್ರವೊಂದನ್ನು ನೀಡಿದೆ. ʻಮೆಟಾ ಪೋಷಕರಿಗೆ ಗೊತ್ತಾಗದಂತೆ 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ದತ್ತಾಂಶ ಸಂಗ್ರಹಿಸಿದೆ. ಆಮೂಲಕ ಮಕ್ಕಳ ಖಾಸಗಿತನಕ್ಕೆ […]
ಮೆಟಾ ಸತ್ಯಾಂಶ ಪರಿಶೀಲಕರನ್ನು ನಿವಾರಿಸುತ್ತಿರುವುದೇಕೆ?
ಜನವರಿ 7, 2025ರಂದು ಮೆಟಾ ಸಿಇಇ ಮಾರ್ಕ್ ಎಲಿಯಟ್ ಜುಕರ್ಬರ್ಗ್, ʻಮೆಟಾ ಸತ್ಯಾಂಶ ಪರಿಶೀಲಕ(ಫ್ಯಾಕ್ಟ್ ಚೆಕರ್)ರನ್ನು ತೆಗೆದುಹಾಕಲಿದೆ. ಅವರು ರಾಜಕೀಯ ಪಕ್ಷಪಾತ ತೋರುತ್ತಿದ್ದು, ನಂಬಿಕೆ ಹುಟ್ಟಿಸುವ ಬದಲು ಅದನ್ನು ನಾಶಮಾಡುತ್ತಿದ್ದಾರೆ. ಮೆಟಾ ಮುಖ್ಯವಾಹಿನಿ ಸಂವಾದವನ್ನು ಸ್ಪರ್ಶಿಸದ ವಿಷಯಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಿದೆ,ʼ ಎಂದು 5 ನಿಮಿಷಗಳ ವಿಡಿಯೋದಲ್ಲಿ ಹೇಳಿದರು. ಸತ್ಯಾಂಶ ಪರಿಶೀಲಕರ ಬದಲು ಎಲಾನ್ ಮಸ್ಕ್ ಅವರ ʻಎಕ್ಸ್ʼ ಅಳವಡಿಸಿಕೊಂಡಿರುವ ʻಕಮ್ಯುನಿಟಿ ನೋಟ್ಸ್ʼ ವ್ಯವಸ್ಥೆ ಅಳವಡಿಕೆಗೆ ಮೆಟಾ ಮುಂದಾಗಿದೆ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆಯೊಂದರ ಬದಲು ಗ್ರಾಹಕರು ಸುಳ್ಳಿನ […]

