ಮತ ಕಳವು ಮತ್ತು ಚುನಾವಣೆ ಆಯೋಗದ ವಿಶ್ವಾಸಾರ್ಹತೆ ಪ್ರಶ್ನೆ
ರಾಹುಲ್ ಗಾಂಧಿ ಆಗಸ್ಟ್ 7, 2025 ರಂದು ಪತ್ರಿಕಾಗೋಷ್ಠಿಯಲ್ಲಿ ʻ1,00,250 ಮತ ಕಳವುʼ ಆರೋಪ ಹೊರಿಸಿದರು. ಆದರೆ, ಈ ಕುರಿತು ತನಿಖೆ ನಡೆಸದ ಚುನಾವಣೆ ಆಯೋಗವು ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕೆಂದು ರಾಹುಲ್ ಅವರಿಗೆ ನೋಟಿಸ್ ನೀಡಿತು; ಸಂದೇಶವಾಹಕನಿಗೆ ಗುಂಡಿಕ್ಕಿ ಸಂದೇಶವನ್ನು ನಿರ್ಲಕ್ಷಿಸಲು ಮುಂದಾಯಿತು. ಇಂಡಿಯಾ ಒಕ್ಕೂಟ ಮತ ಕಳವು ಪ್ರತಿಭಟಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ; ಇದೇ ಹೊತ್ತಿನಲ್ಲಿ ʻಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮತಪಟ್ಟಿ ಸಿದ್ಧಪಡಿಸಲಾಗಿತ್ತುʼ ಎಂದ ಸಚಿವ ಕೆ.ಎನ್.ರಾಜಣ್ಣ […]
ಚುನಾವಣೆ ಆಯೋಗದ ಕುತಂತ್ರ ಮತ್ತು ವೋಟ್‌ಬಂದಿ
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ʻಅದೊಂದು ಸಾಂವಿಧಾನಿಕ ಹೊಣೆಗಾರಿಕೆʼ ಎಂದಿರುವ ಸುಪ್ರೀಂ ಕೋರ್ಟ್(ಜುಲೈ 10,2025 ರಂದು), ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ತೀರ್ಪಿನಿಂದ ಉತ್ತೇಜಿತವಾಗಿರುವ ಆಯೋಗ, ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ವಿಡಿಯೋ ಮಾಡಿದ್ದ ಪತ್ರಕರ್ತ/ಯುಟ್ಯೂಬರ್ ಅಜಿತ್ ಅಂಜುಂ ಮೇಲೆ ಜುಲೈ 15ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿದ್ದ ಪ್ರತಿ ಪಕ್ಷಗಳು, ಸುಪ್ರೀಂ ಮೆಟ್ಟಿಲೇರಿವೆ. ಜುಲೈ 28ರಂದು ಈ ಸಂಬಂಧ ವಿಚಾರಣೆ ಬಾಕಿ […]

