Tag: Supreme Court

ಜಾತಿಯೆಂಬುದು ಕಣ್ಣಿಗೆ ಇರಿಯುವ ವಾಸ್ತವ, ನಿವಾರಣೆಯಾಗದ ಜಾಡ್ಯ

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಒಂದು ವರ್ಗದ ಜನರು, ಧನಾಡ್ಯರು ಹಾಗೂ ಪ್ರತಿಪಕ್ಷ ಬಿಜೆಪಿ ಸಮೀಕ್ಷೆಯನ್ನು ಹೀನಯಿಸಿದ್ದಲ್ಲದೆ, ಸಮಾಜವನ್ನು ಒಡೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತರಾದ ಎಚ್‌.ಎಚ್‌. ರೇಣುಕಾರಾಧ್ಯ ಅವರ ಅನುಭವವು ಜಾತಿ ತನ್ನ ಬೇರನ್ನು ಎಷ್ಟು ಆಳವಾಗಿ ಬಿಟ್ಟಿದೆ ಎಂಬು ದನ್ನು ತೋರಿಸಿಕೊಡುತ್ತದೆ. ಇದೇ ಹೊತ್ತಿನಲ್ಲಿ ಅಧ್ಯಯನವೊಂದು ನಗರಗಳಲ್ಲಿ ಪೌರತ್ವವು ಕಾಗದದ ಮೇಲೆ ಮಾತ್ರ ಸಮಾನವಾಗಿದೆ; ಆದರೆ, ಆಚರಣೆಯಲ್ಲಿ ಅಸಮಾನವಾಗಿದೆ ಎಂದು ಹೇಳಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರ್ಕಾರವು […]

ಸುಪ್ರೀಂ ಕೋರ್ಟಿಗೆ ಭಿನ್ನಮತದ ಮೆರುಗು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನವು ಸನಾತನ ಮನಸ್ಥಿತಿಯ ಗಂಭೀರ ಪ್ರಕರಣ. ಸನಾತನ ಧರ್ಮಕ್ಕೆ ಅಪಮಾನ ವನ್ನು ಸಹಿಸುವುದಿಲ್ಲ ಎಂದು ಈ ಪ್ರಯತ್ನ ನಡೆಸಿದ ಕ್ರಿಮಿ ಹೇಳಿದೆ. ಆತ ಅಪ್ರಬುದ್ಧನಲ್ಲ; ಮಾನಸಿಕ ಅಸ್ವಸ್ಥನಲ್ಲ; ಅಕ್ಷರಸ್ಥ ಮತ್ತು ವೃತ್ತಿಯಲ್ಲಿ ವಕೀಲ. ನ್ಯಾಯಾಲಯದ ತೀರ್ಮಾನ ತಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎನ್ನುವ ಅಸಹನೆಯು ಗುಂಪು ಹಲ್ಲೆಗಳು ಮತ್ತು ಬುಲ್ಡೋಜರ್‌ ನ್ಯಾಯದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಜಾಸತ್ತೆಗೆ ಧಕ್ಕೆಯುಂಟು ಮಾಡುತ್ತಿದೆ. ದೇಶದ ನಾಯಕತ್ವ ವಹಿಸಿದವರ […]

ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ʻಆಪರೇಷನ್‌ ಸಿಂಧೂರʼ ಸರ್ಕಾರ-ಪ್ರತಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಗದ್ದಲದಿಂದ ನ್ಯಾಯಾಂಗ, ಕಾರ್ಯಾಂಗ ಮತ್ತು ನ್ಯಾಯಾಧೀಶರ ನೇಮಕ-ವರ್ಗಾವಣೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದ ನ್ಯಾಯಾಧೀಶ ನ್ಯಾ.ಯಶವಂತ್‌ ವರ್ಮಾ ಅವರ ಪ್ರಕರಣ ಹಿನ್ನೆಲೆಗೆ ಸರಿದಿದೆ. ಮಾರ್ಚ್‌ 14, 2025ರಂದು ದಿಲ್ಲಿ ಹೈಕೋರ್ಟಿನ ಹಿರಿಯ ನ್ಯಾಯಾಧೀಶ ನ್ಯಾ. ಯಶವಂತ್‌ ವರ್ಮಾ ಅವರ ಅಧಿಕೃತ ನಿವಾಸದ ಹೊರ ಮನೆಯಲ್ಲಿ ಸುಟ್ಟ 500 ರೂ. ನೋಟುಗಳ ಚೀಲಗಳು ಸಿಕ್ಕಿದವು. ಸುಪ್ರೀಂ ಕೋರ್ಟ್‌ ಮು.ನ್ಯಾ. ಸಂಜೀವ್‌ ಖನ್ನಾ ಅವರು ಈ […]

ಚುನಾವಣೆ ಆಯೋಗದ ಕುತಂತ್ರ ಮತ್ತು ವೋಟ್‌ಬಂದಿ

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ʻಅದೊಂದು ಸಾಂವಿಧಾನಿಕ ಹೊಣೆಗಾರಿಕೆʼ ಎಂದಿರುವ ಸುಪ್ರೀಂ ಕೋರ್ಟ್‌(ಜುಲೈ 10,2025 ರಂದು), ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ತೀರ್ಪಿನಿಂದ ಉತ್ತೇಜಿತವಾಗಿರುವ ಆಯೋಗ, ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ವಿಡಿಯೋ ಮಾಡಿದ್ದ ಪತ್ರಕರ್ತ/ಯುಟ್ಯೂಬರ್‌ ಅಜಿತ್‌ ಅಂಜುಂ ಮೇಲೆ ಜುಲೈ 15ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿದ್ದ ಪ್ರತಿ ಪಕ್ಷಗಳು, ಸುಪ್ರೀಂ ಮೆಟ್ಟಿಲೇರಿವೆ. ಜುಲೈ 28ರಂದು ಈ ಸಂಬಂಧ ವಿಚಾರಣೆ ಬಾಕಿ […]

ರಾಜ್ಯಪಾಲರ ʻಪಾಕೆಟ್‌ ವಿಟೋʼ ಅಧಿಕಾರ ಅಂತ್ಯ

ಸುಪ್ರೀಂ ಕೋರ್ಟ್‌ನ ಒಂದು ಮಹತ್ವದ ತೀರ್ಪು ರಾಜ್ಯಪಾಲರ ʻಪಾಕೆಟ್ ವಿಟೋ’ವನ್ನು ಕೊನೆಗೊಳಿಸಿದೆ. ಆದರೆ, ಕಪಾಳಮೋಕ್ಷದಿಂದ ಬುದ್ದಿ ಕಲಿಯದ ತಮಿಳುನಾಡು ರಾಜ್ಯಪಾಲ ಆರ್‌.ಎನ್.‌ರವಿ ಅವರು ಮದುರೈನ ಕಾಲೇಜೊಂ ದರಲ್ಲಿ ʻಜೈ ಶ್ರೀರಾಂʼ ಎಂದು ಮೂರು ಬಾರಿ ಘೋಷಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ವಿವಾದ ಸೃಷ್ಟಿಸಿದ್ದಾರೆ. ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬಿಜೆಪಿ ಆಯ್ಕೆಯಾದ ತಮಿಳುನಾಡಿನ ರಾಜ್ಯಪಾಲ ಆರ್.‌ಎನ್. ರವಿ, ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರದ ಮಗ್ಗಲುಮುಳ್ಳಾಗಿ ಪರಿಣಮಿಸಿದ್ದರು. ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಹೊರನಡೆದಿದ್ದು ಸೇರಿದಂತೆ, ಹಲವು […]

Back To Top