ಒಕ್ಕೂಟ ವ್ಯವಸ್ಥೆ

01.ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ(06)

ನಡವಳಿಕೆಯ ನೆಲೆಯಲ್ಲಿ ನೋಡಿದಾಗ ಎರಡು ಬಗೆಯ ಒಪ್ಪುಕೂಟಗಳನ್ನು ಕಾಣಬಹುದು

೧.ಸಡಿಲ ಒಪ್ಪುಕೂಟ

೨. ಸದೃಢ ಒಪ್ಪುಕೂಟ

ಸಡಿಲ ಒಪ್ಪುಕೂಟದಲ್ಲಿ ನಾಡುಗಳು ಕಾಲಕಾಲಕ್ಕೆ ತಮ್ಮ ಜನರ ಆಶಯಗಳಿಗೆ ತಕ್ಕಂತೆ ಕೂಟವನ್ನು ಸೇರುವ ಅಥವ ಬಿಡುವ ತೀರ್ಮಾನಗಳನ್ನು ಕಯ್ಗೊಳ್ಳಬಹುದು.

02. ರಾಷ್ಟ್ರೀಯತೆ ಮತ್ತು ಅಭಿವೃದ್ಧಿ(13)

ನಾನಾ ರಾಜರ ಆಡಳಿತ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ಭಿನ್ನವಾಗಿದ್ದ ಈ ಎಲ್ಲ ಭೂ ಪ್ರದೇಶಗಳನ್ನೂ ಒಟ್ಟುಗುಡಿಸಿ, ಸಮಗ್ರತೆಯ ರೂಪ ಕೊಟ್ಟಿದ್ದು ಬ್ರಿಟಿಷರು. ಅದಾಗಲೇ ಯುರೋಪ್ ಹಾಗೂ ಇಂಗ್ಲೆಂಡಿನಲ್ಲಿ ರಾಷ್ಟ್ರೀಯತೆ ಯ ಕಲ್ಪನೆ ಮೂಡಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಅಂದರೆ, ೧೯ನೇ ಶತಮಾನದ ಅಂತ್ಯ ಹಾಗೂ ೨೦ನೇ ಶತಮಾನದ ಆರಂಭದಲ್ಲೇ ಯುರೋಪ್ ಹಾಗೂ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಂಡಿತು.

03. ಹದಿನೈದನೇ ಹಣಕಾಸು ಆಯೋಗದ ಮೇಲೆ ಒತ್ತಡ(೧೮)

ಹದಿನೈದನೇ ಹಣಕಾಸು ಆಯೋಗ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವುದರಲ್ಲಿದೆ. ಆಯೋಗ ಭೇಟಿ ಕೊಟ್ಟ ಬಹುತೇಕ ರಾಜ್ಯಗಳ ಸರ್ಕಾರಗಳು ತಮಗೆ ತೆರಿಗೆಯಲ್ಲಿ ಹೆಚ್ಚು ಪಾಲು ಹಂಚಬೇಕು ಎಂದು ಒತ್ತಾಯಿಸಿವೆ. ಪ್ರಾಥಮಿಕ ಶಿಕ್ಷಣ, ಆರೋಗ್ಯ ಸೇವೆ, ಕೃಷಿ, ನೀರು ಸರಬರಾಜು, ನಗರಾಭಿವೃದ್ಧಿ ಮತ್ತಿತರ ಸಂವಿಧಾನ ನಿಗದಿಡಿಸಿದ ಸೇವೆಗಳನ್ನು ಕಲ್ಪಿಸಲು ಸಂಪನ್ಮೂಲ ಹೊಂದಿಸಿಕೊಳ್ಳಲು ರಾಜ್ಯಗಳಿಗೆ ಇರುವ ಸೀಮಿತ ಅವಕಾಶ ಮತ್ತು ಹೆಚ್ಚುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ಕುರಿತು ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.

04.ಒಕ್ಕೂಟ ಶಿಲ್ಪಕ್ಕೆ ನಿರಂತರ ಧಕ್ಕೆ(23)

೩೭೦ನೇ ವಿಧಿಯಡಿ ಜಮ್ಮು-ಕಾಶ್ಮೀರ ತನ್ನದೇ ಆದ ಸಂವಿಧಾನ, ಶಾಶ್ವಾತ ನಿವಾಸಿಗಳು ಎನ್ನುವುದಕ್ಕೆ ತನ್ನದೇ ವಿವರಣೆ, ಆಸ್ತಿಯನ್ನು ಹೊರಗಿನವರು ಖರೀದಿಸಬಾರದೆಂಬ ನಿರ್ಬಂಧ ಹಾಗೂ ರಾಜ್ರದ ಶಾಸನಸಭೆ ಅಂಗೀಕರಿಸಿದ ಬಳಿಕವಷ್ಟೇ ದೇಶದ ಕಾನೂನು ರಾಜ್ಯಕ್ಕೆ ಅನ್ವಯವಾಗುತ್ತಿತ್ತು,

05. ರಾಜ್ಯಗಳಿಗೆ ನ್ಯಾಯಸಮ್ಮತತ ಪಾಲು(31)

ಎಲ್ಲ ರಾಜ್ಯಗಳ ಸಾರ್ವಜನಿಕ ಸೇವೆಯಲ್ಲಿ ಸಮಾನತೆಯನ್ನು ತರುಚುದು ಈ ಪ್ರಯತ್ನದ ಪ್ರಮುಖ ಉದ್ದೇಶ ಆದರೆ, ಸಮಾನತೆಗೆ ಹೆಚ್ಚು ಆದ್ಯತೆ ನೀಡಿದರೆ, ರಾಜ್ರಗಳು ಆರ್ಥಿಕ ಕರ‍್ಯಸಾಮರ್ಥ್ಯ ಹೆಚ್ಚಳಕ್ಕೆ ಪ್ರಯತ್ನ ಪಡದೆ ಇರುಚ ಸಾಧ್ಯತೆಯಿದೆ ಇದರಿಂದ ರಾಜ್ಯ ಹಾಗೂ ದೇಶ ದುಬಾರಿ ದಂಡ ತೆರಬೇಕಾಗುತ್ತದೆ.

06. ಒಕ್ಕೂಟ ವ್ಯವಸ್ಥೆಯ ವೈವಿಧ್ಯ (38)

ಅವರ ಪ್ರಕಾರ, ಒಕ್ಕೂಟವೊಂದರಲ್ಲಿ ಒಂದು ವಿಸ್ತಾರವಾದ ಪ್ರದೇಶದಲ್ಲಿ ವಾಸಿಸುವ ಎಲ್ಲ ನಾಗರಿಕರಿಗೂ ಸ್ವಯಂ ಆಡಳಿತ ಹೊಂದುವ ಅವಕಾಶವಿದೆ. ಆಡಳಿತ ನಡೆಸುವವರು ಹಾಗೂ ಆಡಳಿತಕ್ಕೆ ಒಳ್ಳಪಡುವವವರಿಗೆ ಏಕ ರೀತಿಯ ಪೌರತ್ವ, ಸ್ವಾತಂತ್ರ್ಯ ಇರುತ್ತದೆ. ಮತ್ತು, ನಾಗರಿಕರು ಇಕ್ಕೂಟ ವ್ಯವಸ್ಥೆ ತಮ್ಮೆಲ್ಲ ಸಮಸ್ಯೆಗಳಗೆ ಉತ್ತರವೆಂದು ಭಾವಿಸುತ್ತಾರೆ.

07. ಸಂವಿಧಾನ, ಪಕ್ಷ ರಾಜಕಾರಣ ಮತ್ತು ಒಕ್ಕೂಟ ವ್ಯವಸ್ಥೆ(44)

ಭಾರತ ಸೇರಿದಂತೆ ಒಕ್ಕೂಟ ವ್ಯವಸ್ಥೆಯನ್ನು ಆಯ್ದುಕೊಂಡ ಎಲ್ಲ ದೇಶಗಳಲ್ಲಿ ಅದು ರಾಜಕೀಯ ಅದು ರಾಜಕೀಯ ಹೊಂದಾಣಿಕೆಯ ಫಲ. ರಾಜ್ಯಗಳ ಗಡಿ ಗುರುತಿಸುವಿಕೆ, ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಂಬAಧದಲ್ಲಿ ಎಳೆದಾಟಗಳು ದೇಶದಲ್ಲಿ ಪ್ರಾಜಾಸತ್ತಾತ್ಮಕ ಕ್ರೋಡೀಕರಣಕ್ಕೆ ಕಾರಣವಾಗಿದ್ದವು. ಒಕ್ಕೂಟ ಎನ್ನುವ ಆಡಳಿತಾತ್ಮಕ ಕ್ಷಮತೆ ಅಥವಾ ಆರ್ಥಿಕ ನಿರ್ವಹಣೆಗೆ ಪರಿಪೂರ್ಣ ಎನ್ನಬಹುದಾದ ನೀಲನಕ್ಷೆಯನ್ನು ಕೊಡುವುದಿಲ್ಲ.

ಭಾಗ-೨

08. ಸಾಂಸ್ಕೃತಿಕ ಸ್ವರಾಜ್ಯ(59)

ಕರ್ನಾಟಕದ ಜನ ಹಲವು ವರ್ಷಗಳಿಂದ ಅತ್ಯಂತ ಪ್ರೀತಿಯಿಂದ ಕಟ್ಟಿ ಬೆಳೆಸಿದ ಕಟ್ಟಿ ಬೆಳೆಸಿದ ಸಣ್ಣ ರಣಗಭೂಮಿ ರೆಪರ್ಟರಿಗಳ ಸರಪಳಿಯ ಹೆಸರೇ ರಂಗಾಯಣ. ಪ್ರಸ್ತುತ ಮಲೆನಾಡು, ಕರಾವಳಿ, ಹೈದರಾಬಾದ್ ಕರ್ನಾಟಕ ಹಾಗೂ ಶವಮೊಗ್ಗದಲ್ಲಿ ನಾಲ್ಕು ರಂಗಶಾಲೆಗಳಿದ್ದು, ಇನ್ನಷ್ಟು ರಂಗಶಾಲೆಗಳನ್ನು ಸ್ಥಾಪಿಸಬೇಕೆಂಬ ಪ್ರಸ್ತಾವವಿದೆ.

09. ಅರಣ್ಯ ಕಾಯಿದೆಗೆ ತಿದ್ದುಪಡಿ: ಹಕ್ಕುಗಳ ಅರಣ್ಯರೋದನ(62)

ಪ್ರಭುತ್ವದ ದಮನಕಾರಿ ನೀತಿ ಹಾಗೂ ಶೋಷಣೆ ವಿರುದ್ಧದ ಜಾಗೃತಿ ಹಾಗೂ ಸಂಘಟಿತ ಹೋರಾಟ ಬುಡಕಟ್ಟು ಜನರಿಂದಲೇ ಪ್ರಾರಂಭವಾಗುತ್ತದೆ. ಬ್ರಿಟಿಷ್ ಪ್ರಭುತ್ವದ ವಿರುದ್ಧದ ಸಂತಾಲರ ಬಂಡಾಯ ಬುಡಕಟ್ಟು ಪ್ರಪ್ಞೆಯ ಉದಯಕ್ಕೆ ಕಾರಣವಾಯಿತು. ೧೮೫೭ರ ಸಿಪಾಯಿ ದಂಗೆಯು ಬ್ರಿಟಿಷ್ ರಾಜ್ ವಿರುದ್ಧ ಇದ್ದರೆ, ಸಂತಾಲರ ಬಂಡಾಯ ಬ್ರಿಟಿಷ್ ಆಟಳಿತ, ಜಮೀನ್ದಾರರು ಮತ್ತು ಲೇವಾದೇವಿಗಾರರ ವಿರುದ್ಧ ಇದ್ದಿತ್ತು.

10. ಬಡತನದ ಕ್ಲೀಷೆಗಳ ವಿರುದ್ಧಸಮರ(67)

ಜಗತ್ತಿನ ಗೌರವಾನಿತ್ವ ಅರ್ಥಶಾಸ್ತ್ರಜ್ಞರ ಸಾಲಿನಲ್ಲಿ ನಿಲ್ಲುವ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರಗಗ ದಫ್ಲೋ ದಂಪತಿ ಹಾಗೂ ಮೈಕಲ್ ಕ್ರೆಮರ್‌ಗೆ ಅರ್ಥಶಾಸ್ತ್ರ ನೊಬೆಲ್ ಸಂದಿದೆ. ಬಡವರ ಬದುಕು, ಅದರ ಸಂಕೀರ್ಣತೆ ಹಾಗು ಅದರ ಹಲವು ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಕಳೆದೆರಡು ದಶಕಗಳಿಂದ ದಂಪತಿ ಶ್ರಮಿಸುತ್ತಿದ್ದಾರೆ. ಬಡತನದ ಅಸಮರ್ಪಕ ಅರಿವಿನಿಂದ ಅದರ ವಿರುದ್ಧದ ಎಲ್ಲ ಸಮರಗಳೂ ಹೇಗೆ ನಿಷ್ಪ್ರಯೋಜಕವಾಗುತ್ತಿವೆ ಎಂಬುದನ್ನು ಸಂಶೂಧನೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ.

 

11. ತೀವ್ರ ಅಭಿವೃದ್ಧಿಯ ಶಕೆ ಮರಳುವ ಸಾಧ್ಯತೆ ಇಲ್ಲ(72)

ಭಾರತೀಯ ಸಂಜಾತ ಡಾ. ಅಭಿಜಿತ್ ವಿನಾಯಕ್ ಬ್ಯಾನರ್ಜಿ, ಅಬ್ದುಲ್ ಲತೀಫ್ ಜಮೀಲ್-ಪಾವರ್ಟಿ ಆಕ್ಷನ್ ಲ್ಯಾಬ್(ಜೆ-ಪಿಎಎಲ್)ನ ಸಹ ಸಂಸ್ಥಾಪಕ. ಪ್ರಸ್ತುತ ಎಂಐಟಿಯಲ್ಲಿ ಫೋರ್ಡ್ ಪ್ರತಿಷ್ಠಾನದ ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಪ್ರೊಫೆಸರ್. ಈ ಮೊದಲು ಹಾರ‍್ವರ್ಡ್ ಹಾಗೂ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು.

ಬೆಲೆ: ರೂ. 100, ಪುಟ ಸಂಖ್ಯೆ: 80+4

 

 

Journalist,Translator,avid bibliophile

Leave a Reply

Your email address will not be published. Required fields are marked *

Back To Top