ಋತ-03 ಜಾಗತಿಕ ಪರಿಸರ ಚರಿತ್ರೆ

01. ಹಸಿರಿನೆಡೆಗೆ(10)

ಪರಿಸರ ಆಂದೋಲನ ೧೯೬೦ರ ಕೂಸು. ಇದು ಇನ್ನೂ ಕಾವು, ಚಲನೆ ಕಳೆದುಕೊಂಡಿಲ್ಲ. ಈ ಪ್ರತಿಭಟನೆಯ ದಶಕದ  ಬೇರೆಲ್ಲ ಹೋರಾಟಗಳು- ಯುದ್ಧವಿರೋಧವಾದ, ಪ್ರತಿ ಸಂಸ್ಕಿçತಿ ಮತ್ತು ನಾಗರಿಕ ಹಕ್ಕು ಹೋರಾಟ-ಇವೆಲ್ಲ ಈಗ ಕಳೆದುಹೋಗಿವೆ ಇಲ್ಲವೇ ದಾರಿ ಕಾಣದಂತಾಗಿವೆ. ಹೀಗಿದ್ದರೂ, ಪರಿಸರ ಆಂದೋಲನ ಬೆಳೆಯುತ್ತಲೇ ಇದೆ, ನಿರ್ಗಮನವನ್ನು ತಡೆಹಿಡಿದಿದೆ, ನಾಶವಾಗುವುದುನ್ನು ಪ್ರತಿರೋಧಿಸಿದೆ.

02. ಮರಳಿ ಮಣ್ಣಿಗೆ(14)

18 ಮತ್ತು 19ನೇ ಶತಮಾನದಲ್ಲಿ ಇಂಗ್ಲೆAಡ್ ಭೂ ರಚನೆ ಬದಲಾಯಿತು. ಕಲ್ಲಿದ್ದಲು ಗಣಿಗಳು, ಗಿರಿಣಿಗಳು, ರೈಲು ಹಳಿಗಳು, ಬಂದರುಗಳು ಹಾಗೂ ಕೈಗರಿಕೆಗಳು ವಿಸ್ತರಿಸಿ, ಇಂಗ್ಲೆAಡ್ ಪ್ರಪಂಚದ ಬಲಿಷ್ಠ ಆರ್ಥಿಕ ದೇಶ ಶಕ್ತಿಯಾಯಿತು. ಕೈಗಾರಿಕರಣದಿಂದ ನಗರೀಕರಣ ಆರಂಭವಾಗಿ ೧೮೦೧ರಿಂದ ೧೯೧೧ರ ಅವಧಿಯಲ್ಲಿ ನಗರವಾಸಿಗಳ ಸಂಖ್ಯೆ ಶೇ.೨೦ರಿಂದ ೮೦ಕ್ಕೆ ಹೆಚ್ಚಿತು. ಹಳ್ಳಿಗಳು ಬದಲಾಗಿ, ನಗರಗಳಿಗೆ ಉಣ್ಣೆ, ಹತ್ತಿ ಮತ್ತು ಧಾನ್ಯ ಪೂರೈಸುವ ಹೊಸ ಭೂಮಾಲೀಕರು ಹುಟ್ಟಿಕೊಂಡರು. ರೈತರು, ಕುರುಬರು ಮತ್ತು ಕರಕುಶಲಕರ್ಮಿಗಳು ನಗರಗಳಿಗೆ ವಲಸೆ ಬಂದರು.

03. ವೈಜ್ಞಾನಿಕ ಸಂರಕ್ಷಣೆ ಎಂಬ ಸಿದ್ಧಾಂತ(22)

ರ‍್ಸ್ಪ್ರಕಾಶನ ಸಂಸ್ಥೆ ಮ್ಯಾನ್ ಆ್ಯಂಡ್ ನೇಚರ್: ಫಿಸಿಕಲ್ ಜಿಯಾಗ್ರಫಿ ಆ್ಯಸ್ ಮಾಡಿಫೈಡ್ ಬೈಹ್ಯೂಮನ್ ಆ್ಯಕ್ಷನ್ ಎಂಬ ಪುಸ್ತಕವನ್ನು ಪ್ರಕಟಿಸಿತು. ಆ ಪುಸ್ತಕದ ಲೇಖಕವೆರ್ಮಾಂಟ್‌ನ ಪಂಡಿತ ಹಾಗೂ ರಾಯಭಾರಿ, ಜಾರ್ಜ್ ಪರ್ಕಿನ್ಸ್ ಮಾರ್ಷ್. ಹಲವು ವರ್ಷಗಳ ಸಂಶೋಧನೆಯ ಫಲವಾದ ಅ ಪುಸ್ತಕದ ಯಶಸ್ಸಿನ ಬಗ್ಗೆ ಸಂಶಯವಿದ್ದ ಮಾರ್ಷ್, ಪುಸ್ತಕದ ಹಕ್ಕನ್ನು ಅಮೆರಿಕದ ಸ್ವಾಸ್ಥö್ಯ ಪರಿಪಾಲನೆ ಆಯೋಗಕ್ಕೆ ಮಾರಿಬಿಟ್ಟ ಬಳಿಕ ಆತನ ಗೆಳೆಯರು ಹಕ್ಕನ್ನು ಮತ್ತೆ ಕೊಂಡು, ಮಾರ್ಷ್ಗೆ ವಾಪಾಸು ಕೊಟ್ಟರು.

04. ಕಾನನ ಕಲ್ಪನೆಯ ಬೇಳವಣಿಗೆ(30)

ಕಾನನ ಸಂರಕ್ಷಣೆ ಆಂದೋಲನಕ್ಕೆ ಪುರಾತನ ಪರಂಪರೆ ಇದೆ. ಒಂದು ಕಡೆ ಮನುಷ್ಯನ ಪ್ರವೇಶಕ್ಕೆ ನಿರ್ಬಂಧವಿರುವ, ದೇವತೆಗಳ ಆವಾಸಸ್ಥಾನ ಎನ್ನಲಾದ ಪವಿತ್ರ ಕಾಡುಗಳವೆ. ಇವನ್ನು ಕ್ರಿಶ್ಚಿಯನ್ನೇತರ ಎಲ್ಲ ಸಂಸ್ಕçತಿಗಳಲ್ಲಿ ನೇಪಾಳ/ಥೈಲಾಂಡ್‌ನ ಬೌದ್ಧರು, ಮೂಲನಿವಾ ಆಫ್ರಿಕನ್ನರು- ನೋಡಬಹುದು.

05. ಧನ ಸಮೃದ್ಧಿಯ ಇಕಾಲಜಿ(41)

ಕೊಠಡಿಯಲ್ಲಿ ಇಬ್ಬರು ಚರಿತ್ರಶಾಸ್ತçಜ್ಞರನ್ನು ಕೂರಿಸಿದಲ್ಲಿ ಚರ್ಚೆ ಶತ:ಸಿದ್ಧ. ಇನ್ನಬ್ಬರನ್ನು ಸೇರಿಸಿದಲ್ಲಿ ಸಿಗುವುದು ಕರ್ಕಶ ಸ್ವರ. ಅಪಸ್ವರ ಮತ್ತು ಅಭಿಪ್ರಾಯ ಭೇದಕ್ಕೆ ಹೆಸರಾದ ಈ ವರ್ಗ, ಆಧುನಿಕ ಪರಿಸರ ವಾದದ ಮೊದಲ  ಪ್ರವರ್ತಕರು ಯಾರು ಎನನುವ ವಿಷಯದಲ್ಲಿ ಮಾತ್ರ ಸಹಮತ ವ್ಯಕ್ತಪಡಿಸಿಸುತ್ತದೆ. ರಾಲ್ಫ್ಎಚ್. ಲುಟ್ಸ್ ಪ್ರಕಾರ, ಸೈಲೆಂಟ್ ಸ್ಟಿçಂಗ್ ಸಮಕಾಲೀನ ಪರಿಸರ ಆಂದೋಲನವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

06. ದಕ್ಷಿಣದ ಸವಾಲು(57)

ಪರಿಸರವಾದವು ಉತ್ತರದ ದೇಶಗಳಿಗೆ ಮಾತ್ರ ಸಂಬAಧಿಸಿದ ವಿಶಿಷ್ಟಪ್ರಸಂಗ ಎಂದು ಬಹುತೇಕರು ಅಂದುಕೊAಡಿದ್ದಾರೆ. ರಾಜಕೀಯ ಚಿಂತಕರು ರೊನಾಲ್ಡ್ ಇಂಗ್ಲೆಹಾರ್ಟ್, ಪರಿಸರವಾದವು ಭೌತವಾದದಿಂದ ಜೀವನದ ಗುಣಮಟ್ಟ ಸ್ವಯಂ ಅಭಿವ್ಯಕ್ತಿ ಮತ್ತು ಹೊಂದಿಸಿಕೊಳ್ಳುವಿಕೆಯೆಡೆಗೆ ನಡೆದ ಸ್ಥಿತ್ಯಂತರದ ಕೇಂದ್ರವಾಗಿತ್ತು ಎನ್ನತ್ತಾರೆ. ಈ ಸಿದ್ಧಾಂತದ ಉಪಸಿದ್ಧಾಂತವು ಬಡ ದೇಶಗಳು ತಮ್ಮದೇ ಆದ ಪರಿಸರ ಆಂದೋಲನಗಳನ್ನು ಸೃಷ್ಟಿಸಲಾರವು ಎನ್ನುತ್ತದೆ. ಮೂವರು ಹಿರಿಯ ಪಂಡಿತರ ಹೇಳಿಕೆಗಳನ್ನು ಗಮನಿಸಿ.

07. ಸಮಾಜವಾದ ಮತ್ತು ಪರಿಸವಾದ(69)

ಯುರೋಪ್, ಉತ್ತರ ಅಮೆರಿಕ, ಜಪಾನ್, ಆಸ್ಟೆçÃಲಿಯ ಮತ್ತು ನ್ಯೂಜಿಲೆಂಡ್‌ಗಳನ್ನು ಪ್ರಥಮ ಜಗತ್ತು ಹಾಗೂ ಆಫ್ರಿಕ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳನ್ನು ತೃತೀಯ ಜಗತ್ತು ಎನ್ನುತ್ತಾರೆ. ಈ ಎರಡರ ಮಧ್ಯೆ ಇರುವ ಎರಡನೇ ಜಗತ್ತು ಅಂದರೆ, ಕಬ್ಬಿಣದ ಪರದೆ ಹಿಂದಿರುವ ತೀವ್ರ ಬಡತನ ಹಾಗೂ ಅತಿ ಶ್ರೀಮಂತಿಕೆ ಎರಡೂ ಇಲ್ಲದ ಸಮಾಜವಾದಕ್ಕೆ ಬದ್ಧವಾದ ದೇಶಗಳು(೧೯೮೯ರಲ್ಲಿ ಬರ್ಲಿðನ್ ಗೋಡೆ ಬೀಳುವ ಮೊದಲು). ಸೋವಿಯತ್ ರಷ್ಯ ಎರಡನೆಯ ಜಗತ್ತಿನ ದೇಶಗಳ ಹಿರಿಯಣನಾಗಿತ್ತು.

08. ಜಗತ್ತು ಒಂದು ಅಥವಾ ಎರಡು?(75)

ಪ್ರಪಂಚದ ಅತ್ಯಂತ ದೊಡ್ಡ ಸಂರಕ್ಷಣೆ ಸಂಸ್ಥೆಯಾದ ವಿಶ್ವ ವನ್ಯಜೀವ ನಿಧಿ ತನ್ನ ೨೫ನೇ ವಾರ್ಷಿಕೊತ್ಸವವನ್ನು ಸೆಪ್ಟೆಂಬರ್ ೧೯೮೬ರಲಲಿ ವಿಶಿಷ್ಟರೀತಿಯಲ್ಲಿ ಆಚರಿಸಲು ನಿರ್ಧರಿಸಿತು. ಪ್ರಪಂಚದ ಐದು ದೊಡ್ಡ ಧರ್ಮಗಳಾದ ಕ್ರಿಶ್ಚಿಯನ್, ಇಸ್ಲಾಂ, ಹಿಂದೂ, ಬೌದ್ಧ ಮತ್ತು ಜುದಾಯಿಸಂನ ಪ್ರತಿನಿಧಿಗಳನ್ನು ಸಂತ ಫ್ರಾನ್ಸಿಸ್‌ನ ಹುಟ್ಟೂರಾದ ಇಟಲಿಯ ಅಸಿಸ್ಸಿಯಲ್ಲಿ ಸೇರಿಸಿತು.

09. ಜಗತ್ತು ಒಂದು ಅಥವಾ ಎರಡು?(36)

ಪ್ರಪಂಚದ ಅತ್ಯಂತ ದೊಡ್ಡ ಸಂರಕ್ಷಣೆ ಸಂಸ್ಥೆಯಾದ ವಿಶ್ವ ವನ್ಯಜೀವ ನಿಧಿ ತನ್ನ ೨೫ನೇ ವಾರ್ಷಿಕೊತ್ಸವವನ್ನು ಸೆಪ್ಟೆಂಬರ್ ೧೯೮೬ರಲಲಿ ವಿಶಿಷ್ಟರೀತಿಯಲ್ಲಿ ಆಚರಿಸಲು ನಿರ್ಧರಿಸಿತು. ಪ್ರಪಂಚದ ಐದು ದೊಡ್ಡ ಧರ್ಮಗಳಾದ ಕ್ರಿಶ್ಚಿಯನ್, ಇಸ್ಲಾಂ, ಹಿಂದೂ, ಬೌದ್ಧ ಮತ್ತು ಜುದಾಯಿಸಂನ ಪ್ರತಿನಿಧಿಗಳನ್ನು ಸಂತ ಫ್ರಾನ್ಸಿಸ್‌ನ ಹುಟ್ಟೂರಾದ ಇಟಲಿಯ ಅಸಿಸ್ಸಿಯಲ್ಲಿ ಸೇರಿಸಿತು.

10. ಪಾರಿಸರಿಕ ಮುಗ್ಧತೆಯ ಕಾಲ(38)

ಒಂದನೇ ಭಾಗದಲ್ಲಿ ವಿವರಿಸಿದ ಹಸಿರು ಕಾರ್ಯಸೂಚಿ ಒಂದು ನಮಗೆ ಆಕರ್ಷಕ ಎನ್ನಿಸಬಹುದು. ಆದರೆ, ಆಗ ಅದನ್ನು ಪರಿಗಣಿಸುವವರ ಸಂಖ್ಯೆ ಕಡಿಮೆ ಇತ್ತು. ಅದಕ್ಕೆ ಕಾರಣ, ಅದರ ದೌರ್ಬಲ್ಯಗಳಲ್ಲ. ೨ನೇ ಮಹಾಯುದ್ಧದ ಕಾಲದಲ್ಲಿ ನಡೆಯುತ್ತಿದ್ದ ಆಂದೋಲನವಾದ್ದರಿAದ, ಯುದ್ಧ ಅದನ್ನು ಮುಸುಕಿಬಿಟ್ಟಿತ್ತು, ೧೯೧೪-೧೮ರ ಯುದ್ಧಕ್ಕಿಂತ ಹೆಚ್ಚುಸಾವಿಗೆ ಕಾರಂವಾದ ೧೯೩೯-೪೫ರ ಯುದ್ಧದಫಲಿತಾಂಶ ಬೇರೆಯದಾಗಿತ್ತು. ಮೊದಲನೇ ಯುದ್ಧ ಯುರೋಪಿನ ಚಿಂತಕರಲ್ಲಿ ನಿರಾಶೆ ಕವಿಸಿದ್ದರೆ, ಎರಡನೇ ಯುದ್ಧದಲ್ಲಿ ಸಂಯುಕ್ತ ದಳದ ಗೆಲುವು ಮನು ಕುಲದ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿತ್ತು.

ಬೆಲೆ:- 80 ಪುಟ ಸಂಖ್ಯೆ:-80+4

 

Journalist,Translator,avid bibliophile

Leave a Reply

Your email address will not be published. Required fields are marked *

Back To Top