ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ಡಿ.೨ರಂದು ಪ್ರಾಯೋಗಿಕ ಉಡಾವಣೆ ನಡೆಯಿತು. ಭಾರತೀಯ ನೌಕಾಪಡೆ ಆರು ವಾರಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು. ಭಾರತ ಮತ್ತು ರಷ್ಯಾ ಸಹಭಾಗಿತ್ವದ ಉದ್ಯಮವಾದ ಬ್ರಹ್ಮೋಸ್ ಏರೊಸ್ಪೇಸ್‌ನಲ್ಲಿ ಈ ಸೂಪರ್ ಸಾನಿಕ್ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇವನ್ನು ಜಲಾಂತರ್ಗಾಮಿ ನೌಕೆ, ಹಡಗು, ವಿಮಾನ ಹಾಗೂ ಭೂಮಿಯಿಂದ ಉಡಾವಣೆ ಮಾಡಬಹುದು.
ಭಾರತ ಲಡಾಖ್ ಮತ್ತು ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸೇರಿದಂತೆ ಇನ್ನಿತರ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಿದೆ. ಇವು ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ಷಿಪಣಿಗಳು ಎನಿಸಿಕೊಂಡಿವೆ. ಭಾರತ ಕಳೆದ ಎರಡೂವರೆ ತಿಂಗಳಲ್ಲಿ ರುದ್ರಂ-1 ರಡಾರ್ ನಿಗ್ರಹ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದೆ. ಶಬ್ದಕ್ಕಿಂತ ಎರಡು ಪಟ್ಟು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ರುದ್ರಂ-1, ರಡಾರ್‌ಗಳು ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ನಾಶಗೊಳಿಸಬಲ್ಲದು.
Courtesyg: Google (photo)