ಯುಎಪಿಎ; ಜಾಮೀನು ಇಲ್ಲವೇ ಸೆರೆವಾಸದ ದ್ವಂದ್ವ
ಅಕ್ರಮ ಚಟುವಟಿಕೆ ತಡೆ ಕಾಯಿದೆ(ಯುಎಪಿಎ) ಅಡಿ ಬಂಧಿತರಿಗೆ ಜಾಮೀನು ನೀಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಎರಡು ಪೀಠಗಳು ವಿಭಿನ್ನ ತೀರ್ಪು ನೀಡಿರುವುದರಿಂದ, ಆದೇಶದ ಪರಾಮರ್ಶನಕ್ಕೆ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ. ಸಯೀದ್ ಅಹ್ಮದ್ ಅಬ್ದುಲ್ ವಾಹಿದ್ ಚೌಧರಿ ವಿ/ಎಸ್ ಮಹಾರಾಷ್ಟ್ರ ಸರ್ಕಾರ(2026) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾ.ಮಾಧವ ಜಾಮದಾರ ಅವರು ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಹಕ್ಕು; ಪೊಲೀಸರು ಪ್ರಜೆಗಳ ಸೇವಕರೇ ಹೊರತು ಸರ್ಕಾರದ ಉನ್ನತ ಅಧಿಕಾರಿಗಳ ಸೇವಕರಲ್ಲ ಎಂದು ಜುಲೈ 3, 2026ರಂದು ಹೇಳಿದ್ದಾರೆ. […]
ಯುಜಿಸಿ, ಸುಪ್ರೀಂ ಮತ್ತು ಸಮಾನತೆಯ ಅವಸಾನ
ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೊಸ ನಿಯಮಗಳನ್ನು ವಿರೋಧಿಸಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೇಲ್ಜಾತಿಗಳು- ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳು ಪ್ರತಿಭಟನೆ ಆರಂಭಿಸಿದ್ದರು. ಬಿಜೆಪಿಯ ರಾಜಕೀಯ ಶಿಲ್ಪದ ಬುನಾದಿಯಾದ ಯುವಜನರಲ್ಲಿ ಜಾತಿ ಆಧರಿತ ಧ್ರುವೀಕರಣವು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆ ಇತ್ತು. ಆದರೆ, ಸುಪ್ರೀಂ ತೀರ್ಪಿನಿಂದ 2026ರಲ್ಲಿ ನಡೆಯ ಲಿರುವ ಮತ್ತು 2027ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಬೇಕಿರುವ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿದ್ದ ಕಂಟಕವೊಂದು ನಿವಾರಣೆ ಆಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ […]
ಅರಾವಳಿ ಪರ್ವತಶ್ರೇಣಿ ಮೇಲೆ ಉದ್ಯಮದ ಕಾಕದೃಷ್ಟಿ
ಸುಪ್ರೀಂ ಕೋರ್ಟ್ ಡಿಸೆಂಬರ್ 29, 2025ರಂದು ಅರಾವಳಿಯ ಹೊಸ ವ್ಯಾಖ್ಯೆಗೆ ತಡೆ ನೀಡಿದೆ ಮತ್ತು ಈ ಸಂಬಂಧ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಬೇಕೆಂದು ಹೇಳಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ. ಆದರೆ, ಪ್ರಶ್ನೆ ಇರುವುದು- ಪರಿಸರ ಮಂತ್ರಾಲಯದ ಅಧಿಕಾರಿಗಳು ನೀಡಿದ ವ್ಯಾಖ್ಯೆಯನ್ನು ನ್ಯಾಯಾಲಯ ಈಮೊದಲು ಒಪ್ಪಿದ್ದಾದರೂ ಏಕೆ? ನ್ಯಾಯಾಲಯಕ್ಕೆ ವಾಸ್ತವ ಸಂಗತಿ ತಿಳಿಸದೆ ಮುಚ್ಚಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನದೇ ಸಚಿವಾಲಯದ ಅಡಿ ಬರುವ ಭಾರತೀಯ ಅರಣ್ಯ ಸಮೀಕ್ಷೆ(ಎಫ್‌ಎಸ್‌ಐ)ಯ ಶಿಫಾರಸುಗಳನ್ನು ಕೂಡ ಪರಿಸರ ಸಚಿವಾಲಯ […]
ಸುಪ್ರೀಂ ತೀರ್ಪು ಮತ್ತು ಮಸುಕಾಗುತ್ತಿರುವ ಸಂವಿಧಾನದ ಬೆಳಕು
ನವೆಂಬರ್ 20ರಂದು ಎರಡು ಚರಿತ್ರಾರ್ಹ ಘಟನೆಗಳು ನಡೆದವು- ಪಟಣಾದಲ್ಲಿ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಅವಧಿಗೆ ಅಧಿಕಾರ ಸ್ವೀಕರಿಸಿದರು ಮತ್ತು ಮುಖ್ಯ ನ್ಯಾಯಮೂರ್ತಿ ಆರ್. ಎಸ್. ಗವಾಯಿ ನೇತೃತ್ವದ ಸಂವಿಧಾನ ಪೀಠವು ರಾಜ್ಯಪಾಲರು-ರಾಷ್ಟ್ರಪತಿ ಅವರಿಗೆ ಕಡತವೊಂದಕ್ಕೆ ಸಹಿ ಹಾಕಲು ಕಾಲಾವಧಿ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ನಿತೀಶ್ ಕುಮಾರ್ ಮತ್ತು ಮೈತ್ರಿ ಪಕ್ಷ ಬಿಜೆಪಿ, ಚುನಾವಣೆಯನ್ನು ತಂತ್ರಗಾರಿಕೆ ಮತ್ತು ಕುಶಲತೆಯಿಂದ ತಿರುಚಿ ಜಯ ಸಾಧಿಸಿತು; ಪ್ರತಿಪಕ್ಷಗಳು ತಂತ್ರಕ್ಕೆ ಶರಣಾದವು. ಆದರೆ, ಸುಪ್ರೀಂ ಕೋರ್ಟ್ ತೀರ್ಪು […]
ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ
ಗ್ರಾಮೀಣರ ಉಪಾದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ 20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ […]
ಹವಾಮಾನ ಬದಲಾವಣೆ ವಿರುದ್ಧ ರಕ್ಷಣೆಗೆ ಕಾನೂನಿಗೆ ಮುನ್ನುಡಿ
ಅಂಕೋಲಾ ಬಳಿ ಗುಡ್ಡ ಜರಿದು ನದಿಯಲ್ಲಿ ತೇಲಿಹೋದ ಮತ್ತು ಮಣ್ಣಿನಲ್ಲಿ ಮುಚ್ಚಿಹೋದ 11 ಮಂದಿಗೆ ಕಣ್ಣೀರಾಗೋಣ. 90 ಡಿಗ್ರಿ ಕೋನದಲ್ಲಿ ಗುಡ್ಡೆ ಕೆತ್ತಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ- ಎಂಜಿನಿಯರ್‌ಗಳಿಗೆ ವಿಷಾದ ವ್ಯಕ್ತಪಡಿಸೋಣ. ಇಂಥ ಮಾನವ ಪ್ರೇರಿತ ಪರಿಸರ ದುರಂತಗಳ ನಡುವೆಯೇ ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟಗಳು, ಹಿಮಾಲಯ, ವಿಂಧ್ಯ, ಅರಾವಳಿ ಮತ್ತಿತರ ಬೆಟ್ಟಸಾಲುಗಳ ಜೊತೆಗೆ ಮನುಷ್ಯರನ್ನೂ ಕಾಪಿಡಬಲ್ಲ ಸಣ್ಣದೊಂದು ಬೆಳಕಿನ ಕಿಂಡಿಯೊಂದು ಕಾಣಿಸಿಕೊಂಡಿದೆ. 2024-25ರ ಬಜೆಟ್‌ಗೆ ಮುನ್ನ ಮಂಡನೆಯಾದ ಆರ್ಥಿಕ ಸಮೀಕ್ಷೆ ಕೂಡ ಹವಾಮಾನ ಬದಲಾವಣೆ ಮತ್ತು […]

