ರಸಗೊಬ್ಬರ, ಬಿತ್ತನೆ ಬೀಜ ಕೊರತೆ : ಕೃಷಿ ಸಂಕಷ್ಟದ ಸಣ್ಣ ತುಣುಕು
ರಾಜ್ಯದೆಲ್ಲೆಡೆ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದೊಂದು ವಾರ್ಷಿಕ ಕಾರ್ಯಕ್ರಮದಂತೆ ಆಗಿಬಿಟ್ಟಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೇ 30, 2008ರಂದು ಅಧಿಕಾರ ಸ್ವೀಕರಿಸಿತ್ತು. ಹಾವೇರಿಯ ಎಪಿಎಂಸಿ ಅಂಗಳದಲ್ಲಿ ಮುಂಗಾರು ಪೂರ್ವ ಬಿತ್ತನೆಗೆ ಸಬ್ಸಿಡಿ ರಸಗೊಬ್ಬರಗಳ ಕೊರತೆಯನ್ನು ಪ್ರತಿಭಟಿಸಿದ ರೈತರ ಮೇಲೆ ಪೊಲೀಸರು ಜೂನ್ 10 ರಂದು ಗುಂಡು ಹಾರಿಸಿದರು. ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನಟ್ಟಿ ಬಲಿಯಾಗಿ, 13 ಮಂದಿ ಗಾಯಗೊಂಡರು. ಸರ್ಕಾರ ವಿಚಾರಣೆಗೆ ನೇಮಿಸಿದ ಸುಪ್ರೀಂ ಕೋರ್ಟ್ ನಿವೃತ್ತ […]
ಪ್ರತಿದಿನ 2,000 ರೈತರು ಬೇಸಾಯದಿಂದ ಹೊರಗೆ
ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ(ಇಂಡಿಯನ್ ರೋಲರ್, ಕೊರಾಸಿಯಸ್ ಬೆಂಗಾಲೆನ್ಸಿಸ್)ನ ವೈಶಿಷ್ಟ್ಯವೇನೆಂದರೆ, ಅವನು ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಷಾದ ರಾಜ್ಯ ಪಕ್ಷಿಯೂ ಹೌದು. ಒಡಿಷಾದಲ್ಲಿ ನೀಲಕಂಠನನ್ನು ತಿಹಾ ಎಂದು ಕರೆಯುತ್ತಾರೆ. ಬೇಡಿದ್ದನ್ನು ನೀಡುತ್ತಾನೆ ಎಂದು ರೈತರು ನಂಬಿರುವುದರಿಂದ, ದಸರಾ ಹಬ್ಬದಂದು ನೀಲಕಂಠನನ್ನು ನೋಡುವ ಸಂಪ್ರದಾಯವಿದೆ. ಆದರೆ, ಈ ವರ್ಷ ಮತುಪಲಿ ಗ್ರಾಮದ ರೈತ ಪಿತಬಷಾ, ಹಕ್ಕಿ ಯನ್ನು ನೋಡಲು ಹೋಗಲಿಲ್ಲ. ಏಕೆ ಎಂಬ ಪ್ರಶ್ನೆಗೆ ʼನಾನು ಬೇಡಿಕೊಳ್ಳುವುದನ್ನು ನಿಲ್ಲಿಸಿದ್ದೇನೆʼ ಎಂಬ ಪ್ರತಿಕ್ರಿಯೆ ಬಂದಿತು. 2025ರ ಸೆಪ್ಟೆಂಬರ್‌ನಲ್ಲಿ ಸುರಿದ ನಿರಂತರ […]
ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ
ಗ್ರಾಮೀಣರ ಉಪಾದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ 20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ […]

