ರೈತ ಹೋರಾಟ ನ್ಯಾಯಯುತ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಅಹಿಂಸಾತ್ಮಕವಾದ ಪ್ರತಿಭಟನೆ ನಡೆಸಲು ಸಂಪೂರ್ಣ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹರಿಸುವುದಕ್ಕಾಗಿ ಕೃಷಿ ಪರಿಣತರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ತಾನು ರಚಿಸಲಿರುವುದರಿಂದ, ಮೂರು ಕಾಯ್ದೆಗಳ ಜಾರಿಯನ್ನು ಸರ್ಕಾರವು ತಡೆ ಹಿಡಿಯಬಹುದು ಎಂಬ ಸಲಹೆಯನ್ನೂ ನ್ಯಾಯಾಲಯವು ಮುಂದಿಟ್ಟಿದೆ.

ಮುಕ್ತ ಸಂಚಾರ ಮತ್ತು ಅಗತ್ಯ ವಸ್ತುಗಳು ಹಾಗೂ ಇತರ ಪೂರೈಕೆಗಳನ್ನು ಪಡೆದುಕೊಳ್ಳುವ ಜನರ ಮೂಲಭೂತ ಹಕ್ಕನ್ನು ರೈತರ ಪ್ರತಿಭಟನೆಯ ಹಕ್ಕು ಮೊಟಕು ಮಾಡಬಾರದು. ಪ್ರತಿಭಟನೆಯ ಹಕ್ಕು ಎಂದರೆ ನಗರ ಪ್ರವೇಶದ ಮಾರ್ಗಗಳನ್ನು ಬಂದ್ ಮಾಡುವುದು ಅಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು ಹೇಳಿದೆ. ರೈತರು ಮತ್ತು ಸರ್ಕಾರದ ಪ್ರತಿನಿಧಿಗಳು ಮಾತುಕತೆ ನಡೆಸಿದರೆ ಮಾತ್ರ ಪ್ರತಿಭಟನೆಯ ಉದ್ದೇಶ ಈಡೇರಲು ಸಾಧ್ಯ. ಈ ಮಾತುಕತೆಗೆ ನೆರವು ನೀಡಲು ಬಯಸುವುದಾಗಿಯೂ ಪೀಠ ಸ್ಪಷ್ಟಪಡಿಸಿತು. ಸಮಿತಿ ರಚಿಸುವುದಾಗಿ ಪೀಠವು ಬುಧವಾರವೇ ಹೇಳಿತ್ತು. ಕಾಯ್ದೆಗಳ ಜಾರಿಯನ್ನು ತಡೆ ಹಿಡಿಯಬೇಕು ಎಂಬ ಸಲಹೆಯನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ವಿರೋಧಿಸಿದರು. ಕಾಯ್ದೆಗಳನ್ನು ತಡೆ ಹಿಡಿದರೆ ರೈತರು ಸಂಧಾನಕ್ಕೆ ಬರುವುದೇ ಇಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ರೈತರಿಗೆ ತೋಮರ್ ಪತ್ರ:- ರೈತರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯುವ ಭರವಸೆ ಕೊಟ್ಟಿದ್ದಾರೆ. ಆರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಗೊಂಡಿರುವ ರೈತಪರ ಕ್ರಮಗಳನ್ನು ವಿವರಿಸಿದ್ದಾರೆ. ಕಾಯ್ದೆ ಪ್ರತಿ ಹರಿದ ಕೇಜ್ರಿವಾಲ್ ದೆಹಲಿ ವಿಧಾನಸಭೆಯ ಅಧಿವೇಶನವು ಗುರುವಾರ ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಧಿವೇಶನದಲ್ಲಿ ಹರಿದು ಹಾಕಿದರು. ಮೂರು ಕಾಯ್ದೆಗಳನ್ನು ತಿರಸ್ಕರಿಸುವ ನಿರ್ಣಯವನ್ನು ವಿಧಾನಸಭೆಯು ಅಂಗೀಕರಿಸಿತು. ಬಳಿಕ, ಎಎಪಿ ಶಾಸಕರು ಸ್ಪೀಕರ್ ಪೀಠದ ಮುಂದೆ ಜಮಾಯಿಸಿ ಮೂರೂ ಕಾನೂನುಗಳನ್ನು ರದ್ದುಪಡಿಸುವಂತೆ ಘೋಷಣೆ ಕೂಗಿದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top