ಪಾವತಿ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುವವರು(ಪಿಎಸ್‌ಒ) ಹಣ ಪಾವತಿಗೆ ಹೊಸ ಕ್ಯೂಆರ್ ಕೋಡ್‌ಗಳನ್ನು ಬಿಡುಗಡೆ ಮಾಡಬಾರದು ಎಂದು ಆರ್‌ಬಿಐ ಹೇಳಿದೆ. ಅಂಗಡಿ, ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್ ಮೂಲಕ ಹಣ ಪಾವತಿ ಮಾಡಲು ಕ್ಯೂಆರ್ ಕೋಡ್ ಬಳಸಲಾಗುತ್ತದೆ. ಹಾಲಿ ಯುಪಿಐ ಕ್ಯೂಆರ್ ಮತ್ತು ಭಾರತ್ ಕ್ಯೂಆರ್ ಎಂಬ ಎರಡು ಕ್ಯೂಆರ್ ಕೋಡ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ.