ಕೋಟಕ್ ಮಹೀಂದ್ರ ಷೇರು: ಉತ್ತಮ ಗಳಿಕೆ

ಕೋಟಕ್ ಮಹೀಂದ್ರ ಬ್ಯಾಂಕ್‌ನ ಷೇರು ಶೇ.12ರಷ್ಟು ಗಳಿಕೆ ಕಂಡುಕೊಂಡಿದೆ.  ಕೋಟಕ್ ಮಹೀಂದ್ರ ಬ್ಯಾಂಕ್ ಸೋಮವಾರ ಪ್ರಕಟಿಸಿದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಾರ, ಬ್ಯಾಂಕ್‌ನ ನಿವ್ವಳ ಲಾಭ ಶೇ.22 ರಷ್ಟು ಹೆಚ್ಚಿದೆ. ಬ್ಯಾಂಕ್ 2,947 ರೂ.ಕೋಟಿ ಗಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬ್ಯಾಂಕ್ ಷೇರುಗಳ ಬೆಲೆ ಶೇ.12ಕ್ಕೂ ಹೆಚ್ಚು ಏರಿಕೆ ಕಂಡಿದೆ. ಜತೆಗೆ, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಆಟೊ ಷೇರುಗಳು ಸಹ ಗಳಿಕೆ ಕಂಡಿವೆ. ಇಂಡಸ್ ಇಂಡ್ ಬ್ಯಾಂಕ್‌ನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಸುದ್ದಿಯನ್ನು ಕೋಟಕ್ ಮಹೀಂದ್ರ ನಿರಾಕರಿಸಿಲ್ಲ. 7 ರೂ.ಸಾವಿರ ಕೋಟಿ ಬಂಡವಾಳ ಸಂಗ್ರಹ ಪ್ರಕ್ರಿಯೆಯಲ್ಲಿಸ್ವಾಧೀನವೂ ಸೇರಿಕೊಂಡಿದೆ. ಮೊತ್ತವನ್ನು ವಿವೇಚನೆಯಿಂದ ಬಳಸುವುದಾಗಿ ತಿಳಿಸಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top