ರಾಜಧಾನಿಯ ರಸ್ತೆಗಳು ವಾಹನಗಳಿಂದ ಕಿಕ್ಕಿರಿದಿದ್ದು, ವಾಯುಮಾಲಿನ್ಯ ಅಧಿಕಗೊಂಡಿದೆ. ವಾಯುಮಾಲಿನ್ಯದ ಮೇಲೆ ನಿಗಾ ಇರಿಸಲು ಪಾಲಿಕೆ ೨೭೯ ಕೋಟಿ ರೂ. ವೆಚ್ಚದ ಕಾರ್ಯಯೋಜನೆಯನ್ನು ಸಿದ್ಧಗೊಳಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಯೋಜನೆಗೆ ಮೊದಲ ಕಂತು ೧೩೯ ರೂ.ಕೋಟಿ ಅನುದಾನ ಮಂಜೂರು ಮಾಡಿದೆ. ವಾಯು ಗುಣಮಟ್ಟಕ್ಕೆ ಸಂಬAಧಿಸಿದ ಸಮಗ್ರ ದತ್ತಾಂಶದ ಮೇಲೆ ನಿಗಾ ಇಡಲು ೪೪ ಕೋಟಿ ರೂ. ಹಾಗೂ ಕಸ ವಿಲೇವಾರಿಗೆ ೨೨.೨೨ ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಕೇಂದ್ರೀಕೃತ ನಿಯಂತ್ರಣ ಮತ್ತು ನಿರ್ವಹಣೆ ಕೇಂದ್ರ(ಸಿಸಿಸಿ)ಗಳ ಸ್ಥಾಪನೆ ಯೋಜನೆ ಉದ್ದೇಶ. ವಾಹನಗಳಿಂದ ಹೊಗೆ ಹೊರಸೂಸುವಿಕೆ ಪ್ರಮಾಣ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಕೆ, ಶಬ್ದಮಾಪಕ, ವಾತಾವರಣ ಸೇರುವ ಹೊಗೆಯ ಪ್ರಮಾಣ ಪತ್ತೆ ಹಚ್ಚುವ ಸಾಧನ, ರಸ್ತೆಯ ಕಸ ಗುಡಿಸುವ ಹಾಗೂ ನೀರು ಸಿಂಪಡಿಸುವ ಯಂತ್ರಗಳನ್ನು ಖರೀದಿ, ಕಸದ ದಹನದಿಂದ ವಾತಾವರಣಕ್ಕೆ ಸೇರ್ಪಡೆಯಾಗುವ ಅಂಶಗಳ ಪ್ರಮಾಣ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಕರ್ಯಯೋಜನೆ ಒಳಗೊಂಡಿದೆ. ನಗರದಲ್ಲಿ ಮರ-ಗಿಡ ಬೆಳೆಸುವುದು, ರಸ್ತೆ ಗುಂಡಿ ಮುಚ್ಚುವಿಕೆ, ಕತ್ತರಿಸಿದ ರಸ್ತೆಗಳ ವೈಜ್ಞಾನಿಕ ದುರಸ್ತಿಗೆ ನಿರ್ದಿಷ್ಟ ಕಾರ್ಯಕ್ರಮ, ವಾಯು ಗುಣಮಟ್ಟ ಕುರಿತ ಜಾಗೃತಿ ಅಭಿಯಾನ ಆಯೋಜನೆ, ರಸ್ತೆಗಳಲ್ಲಿ ವಾಹನಗಳು ಪಥ ಶಿಸ್ತು ಕಾಯ್ದುಕೊಳ್ಳುವುದು, ಬಸ್ ಬೇ ನಿರ್ಮಾಣ, ಟೆಂಡರ್ ಶ್ಯೂರ್ ರಸ್ತೆಗಳ ನಿರ್ಮಾಣ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ತೆರವು ಇತ್ಯಾದಿ ಯೋಜನೆಯಲ್ಲಿ ಸೇರಿದೆ. ಜುಲೈ ೨೦೧೮ರಲ್ಲಿ ನಡೆದ ಕರ್ಯಾಗಾರದಲ್ಲಿ ೪೦ ನಗರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಹಾ ನಗರಗಳ ವಾಯು ಗುಣಮಟ್ಟ ಸುಧಾರಣೆ ಕುರಿತು ಸಮಾಲೋಚನೆ ನಡೆದಿತ್ತು. ವಾಯು ಮಾಲಿನ್ಯ ನಿಯಂತ್ರಣಕ್ಕೆ ಟ್ರಾಫಿಕ್ ಜಂಕ್ಷನ್ಗಳಲ್ಲಿ ಕಾರಂಜಿ ನಿರ್ಮಾಣ ಹಾಗೂ ಕಾರಂಜಿಗಳಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬಳಸುವ ಉದ್ದೇಶವಿದೆ. ಈ ಕಾಮಗಾರಿಗಳಿಗೆ ಶೀಘ್ರವೇ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದ್ದು, ಟೆಂಡರ್ ಕರೆದು ಯೋಜನೆ ಅನುಷ್ಠಾನಗೊಳಿಸಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
Courtesyg: Google (photo)