ಎಲ್ಲ ಬ್ಯಾಂಕ್ ಖಾತೆಗಳು 2021ರ ಮಾ.31ರೊಳಗೆ ಆಧಾರ್ ಸಂಖ್ಯೆಯೊAದಿಗೆ ಜೋಡಣೆಯಾಗಿರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ. ಭಾರತೀಯ ಬ್ಯಾಂಕ್‌ಗಳ ಒಕ್ಕೂಟ(ಐಬಿಎ)ದ 73ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ವಿತ್ತೀಯ ಸೇರ್ಪಡೆ ಸಂಪೂರ್ಣವಾಗಿಲ್ಲ. ಎಲ್ಲ ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಜೋಡಣೆಯಾಗಿಲ್ಲ. ಅಗತ್ಯವಿರುವೆಡೆ ಪ್ರತಿ ಖಾತೆಯನ್ನೂ ಪ್ಯಾನ್‌ಗೆ ಜೋಡಿಸಿರುವಂತೆ, ಬ್ಯಾಂಕ್‌ಗಳಲ್ಲಿರುವ ಎಲ್ಲ ಖಾತೆಗಳನ್ನು ಮಾ.31,2021ರೊಳಗೆ ಆಧಾರ್‌ಗೆ ಜೋಡಿಸಬೇಕು. ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಬೇಕು. ರುಪೇ ಕಾರ್ಡ್ ಬಳಕೆಯನ್ನು ಉತ್ತೇಜಿಸಬೇಕು ಹಾಗೂ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ)ವನ್ನು ದೇಶದ ಬ್ರ‍್ಯಾಂಡ್ ಆಗಿ ರೂಪಿಸಬೇಕು ಎಂದು ಹೇಳಿದ್ದಾರೆ.
Courtesyg: Google (photo)