ಚಿಲ್ಲರೆ ಹಣದುಬ್ಬರ ದರ ಮೇಲ್ಮಟ್ಟದಲ್ಲಿ ಇರುವುದರಿಂದ ಆರ್‌ಬಿಐ ರೆಪೊ ದರ ತಗ್ಗಿಸುವ ಸಾಧ್ಯತೆ ಕಡಿಮೆ. ದರ ಹೆಚ್ಚಳ ಸಾಧ್ಯತೆ ಕೂಡ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಆರ್‌ಬಿಐ ಗವರ್ನರ್ ಮತ್ತು ಆರು ಸದಸ್ಯರ ಹಣಕಾಸು ನೀತಿ ಸಮಿತಿ ಡಿ.3ರಿಂದ ಸಭೆ ಸೇರಲಿದೆ. ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಶೇ.6ರಷ್ಟಿದ್ದ ಚಿಲ್ಲರೆ ಹಣದುಬ್ಬರ ದರವನ್ನು ತಗ್ಗಿಸಲು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿತ್ತು. ಆದರೆ, ಫೆಬ್ರವರಿ ನಂತರ ರೆಪೊ ದರದಲ್ಲಿ 115 ಅಂಶಗಳಷ್ಟು ಇಳಿಕೆ ಮಾಡಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.7.61 ಇದ್ದು, ಇದು 2014ರ ಮೇ(ಶೇ.8.33) ನಂತರದ ಅತಿ ಹೆಚ್ಚು ಪ್ರಮಾಣ.
Courtesyg: Google (photo)