ಎಲೆಕ್ಟ್ರಾನಿಕ್ ಸಿಸ್ಟ್ಂ ಡಿಸೈನ್ ಮ್ಯಾನುಫ್ಯಾಕ್ಷರಿಂಗ್(ಇಎಸ್ಡಿ) ಸ್ಟಾರ್ಟ್ಅಪ್ನ ಹುಬ್ಬಳ್ಳಿ ಇಎಸ್ಡಿಎಂ ಎಕ್ಸ್ಚೇಂಜ್ ಡಿ.೨ ರಂದು ಮಧ್ಯಾಹ್ನ ೨ಕ್ಕೆ ಆನ್ಲೈನ್ ಮೂಲಕ ಉದ್ಘಾಟನೆಯಾಗಲಿದೆ. ಎಲೆಕ್ಟ್ರಾನಿಕ್ಸ್ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ, ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಸತ್ಯಗುಪ್ತಾ, ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್ ಮಾತನಾಡಲಿದ್ದಾರೆ.
ಕೆಎಲ್ಇ ವಿಶ್ವವಿದ್ಯಾಲಯದ ನವೀನ ಉದ್ಯಮ ಮತ್ತು ತಂತ್ರಜ್ಞಾನ ಕೇಂದ್ರವು ೮೦ಕ್ಕೂ ಅಧಿಕ ಸ್ಟಾರ್ಟ್ ಅಪ್ಗಳ ಆರಂಭಕ್ಕೆ ನೆರವಾಗಿದೆ. ಕರ್ನಾಟಕ ಇನ್ನೋವೇಷನ್ ಆ್ಯಂಡ್ ಟೆಕ್ನಾಲಜಿ ಸರ್ವೀಸಸ್(ಕೆಐಟಿಎಸ್), ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ಸ್(ಐಇಎಸ್ಎ) ಜೊತೆಗೂಡಿ ಯೂನಿಕ್ ಇನ್ಕ್ಯುಬೇಷನ್ ಕೇಂದ್ರವನ್ನು ಕೆಎಲ್ಇ ವಿಶ್ವವಿದ್ಯಾಲಯದ ಟೆಕ್ ಪಾರ್ಕ್ನಲ್ಲಿ ಆರಂಭಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ೩.೨ ಕೋಟಿ ರೂ. ಅನುದಾನ ನೀಡಿದೆ.
Courtesyg: Google (photo)