ಡಿಜಿಟಲ್ ಬ್ಯಾಂಕಿಂಗ್‌ನ ಯಾವುದೇ ಹೊಸ ಉಪಕ್ರಮಗಳನ್ನು ಜಾರಿಗೊಳಿಸದಂತೆ ಎಚ್‌ಡಿಎಫ್‌ಸಿಗೆ ಆರ್‌ಬಿಐ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ನ.೨೧ರಂದು ಎಚ್‌ಡಿಎಫ್‌ಸಿಯ ಇಂಟರ್‌ನೆಟ್/ಮೊಬೈಲ್ ಬ್ಯಾಂಕಿಂಗ್‌ನ ಮತ್ತು ಇನ್ನಿತರ ಪಾವತಿ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ನ ಡಿಜಿಟಲ್ ಸೇವೆಗಳಲ್ಲಿ ಸಮಸ್ಯೆ ಆಗುತ್ತಿದೆ. ದತ್ತಾಂಶ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ ನ. ೨೧ರಂದು ಸಮಸ್ಯೆಯುಂಟಾಗಿದೆ. ತಡೆರಹಿತ ಡಿಜಿಟಲ್ ಸೇವೆ ನೀಡಲು ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್ ತಿಳಿಸಿದೆ.
Courtesyg: Google (photo)