ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್‌ನಲ್ಲಿ ಹೊಂದಿದ್ದ ಶೇ.೩ರಷ್ಟು ಷೇರುಗಳನ್ನು ಮಾರಾಟ ಮಾಡಿರುವುದಾಗಿ ಹೆರಿಟೇಜ್ ಫುಡ್ಸ್ ತಿಳಿಸಿದೆ. ಫ್ಯೂಚರ್ ರಿಟೇಲ್‌ನಲ್ಲಿದ್ದ 1.87 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿ 131.94 ಕೋಟಿ ರೂ.ಸಂಗ್ರಹಿಸಲಾಗಿದೆ. ಮೊತ್ತವನ್ನು ಸಾಲ ತೀರಿಸಲು ಬಳಸುವುದಾಗಿ ಹೆರಿಟೇಜ್ ಹೇಳಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಹೆರಿಟೇಜ್ ಫುಡ್ಸ್ನ ಪ್ರವರ್ತಕರು.
Courtesyg: Google (photo)